ಪಂಚರತ್ನ ಯೋಜನೆ ತಲುಪಿಸುವುದು ಜೆಡಿಎಸ್ ಗುರಿ

ಕೋಲಾರ,ಮಾ.೨- ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಮುಂದಿನ ಐದು ವರ್ಷಗಳ ಆಡಳಿತದ ಕಾರ್ಯಕ್ರಮಗಳನ್ನು ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ದಿನನಿತ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಸೇರ್ಪಡೆಯಾಗುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ಹೊರವಲಯದ ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಾಮಾನ್ಸ್ ನಗರದ ಅಫ್ಸರ್ ಲಾಲು ಸೇರಿದಂತೆ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಸಂದರ್ಭದಲ್ಲಿ ಅವರು ಮಾತನಾಡಿ, ಪಂಚರತ್ನ ಯೋಜನೆಯಲ್ಲಿ ಶಿಕ್ಷಣ,ಆರೋಗ್ಯ, ಉದ್ಯೋಗ, ರೈತರು, ಜನ ಸಾಮಾನ್ಯರು, ಮಹಿಳಾ ಸಬಲೀಕರಣ, ಸೇರಿದಂತೆ ಇನ್ನಿತರ ಜನಪರ ಚಿಂತನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಜೆಡಿಎಸ್ ಪಕ್ಷದ ಗುರಿಯಾಗಿದೆ ಎಂದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಗೆ ಪ್ರಬಲವಾಗಿ ಪೈಪೋಟಿ ನೀಡಲಿದೆ. ಈ ಕಾರಣದಿಂದ ಕ್ಷೇತ್ರದ ಮತದಾರರು ಜೆಡಿಎಸ್‌ಗೆ ಹೆಚ್ಚಿನ ಬೆಂಬಲ ನೀಡಿ ಗೆಲುವಿಗೆ ಸಹಕಾರ ನೀಡಿದರೆ ಕುಮಾರಣ್ಣ ಮುಖ್ಯ ಮಂತ್ರಿಗಳಾಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಿದ್ದಾರೆ ಎಂದರು.
ನಾನು ಪಕ್ಷದ ಕಾರ್ಯಕರ್ತ ಮಾತ್ರ ಅಷ್ಟೇ ನಿಮ್ಮಗಳ ಧ್ವನಿಯಾಗಿ ಕೆಲಸ ಮಾಡಲು ಎಲ್ಲರೂ ಸೇರಿ ನನ್ನನ್ನು ಚುನಾವಣಾ ಕಣಕ್ಕೆ ಇಳಿಸಿದ್ದಾರೆ. ನಮ್ಮಲ್ಲಿ ಎಲ್ಲರೂ ಒಂದೇ ಮುಖಂಡ ಹಾಗೂ ಕಾರ್ಯಕರ್ತರು ಎಂಬ ಭೇದ ಭಾವ ಇಲ್ಲ. ಜೆಡಿಎಸ್ ಪಕ್ಷಕ್ಕೆ ಬರುವ ಪ್ರತಿಯೊಬ್ಬರನ್ನೂ ಒಂದೇ ಕುಟುಂಬದವರು ಇದ್ದಂತೆ ಪಕ್ಷಕ್ಕೆ ಬರುವಂತ ಪ್ರತಿಯೊಬ್ಬರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತೇನೆ. ಎಲ್ಲರೂ ಸೇರಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಪಾರೇಜಾನ್, ಸದಾಂ, ಶಾರುಖ್ ಪಾಷ, ಚಾಂದ್ ಬಾಯ್, ಮುಕ್ತಿಯಾರ್, ಅಲೀಂ, ತಬ್ರೋಜ್, ಫಯಾಜ್ ಹಾಜರಿದ್ದರು.