
ಗೌರಿಬಿದನೂರು.ಮೆ೪:ನಗರಸಭೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಇತ್ತೀಚೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ಹಾಗೂ ಪಕ್ಷದ ತಾಲ್ಲೂಕು ಅಧ್ಯಕ್ಷ ಸಿ.ಮಂಜುನಾಥರೆಡ್ಡಿ ಚುನಾವಣಾ ಪ್ರಚಾರ ಸಭೆಯನ್ನು ಏರ್ಪಡಿಸಿ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಸಿ.ಮಂಜುನಾಥರೆಡ್ಡಿ, ಕಳೆದ ಚುನಾವಣೆಯಲ್ಲಿ ಅತ್ಯಧಿಕ ೬೦ ಸಾವಿರ ಮತಗಳನ್ನು ಪಡೆದು ಕಡಿಮೆ ಅಂತರದಲ್ಲಿ ಸೋತಿದ್ದ ಸಿ.ಆರ್.ನರಸಿಂಹಮೂರ್ತಿ ರವರಿಗೆ ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಹೆಚ್ಚಿನ ಮತಗಳನ್ನು ನೀಡಬೇಕಾಗಿದೆ. ಹಿಂದುಳಿದ ವರ್ಗ, ಕೂಲಿ ಕಾರ್ಮಿಕರು ಹಾಗೂ ಶೋಷಿತ ವರ್ಗದವರ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆಗಳನ್ನು ಪಕ್ಷದ ವರೀಷ್ಟರು ಪಂಚರತ್ನ ಯೋಜನೆಯಡಿಯಲ್ಲಿ ರೂಪಿಸಿದ್ದಾರೆ. ಈ ಭಾಗವು ದಶಕಗಳಿಂದಲೂ ಜೆಡಿಎಸ್ ಗೆ ಭದ್ರಕೋಟೆಯಾಗಿದೆ. ಕ್ಷೇತ್ರದಲ್ಲಿ ನರಸಿಂಹಮೂರ್ತಿ ಯವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಕುಮಾರಣ್ಣ ರವರನ್ನು ಮುಖ್ಯಮಂತ್ರಿಯನ್ನಾಗಿ ಕಾಣುವುದೇ ನಮ್ಮೆಲ್ಲರ ಕನಸಾಗಿದೆ. ಅದನ್ನು ನನಸು ಮಾಡುವ ಜವಾಬ್ದಾರಿ ಕ್ಷೇತ್ರದಲ್ಲಿನ ಪ್ರತಿಯೊಬ್ಬ ಮತದಾರರ ಮೇಲಿದೆ. ರಾಜ್ಯದಲ್ಲಿ ಕುಮಾರಣ್ಣ ನವರು ಮಾಡಿರುವ ಜನಪರವಾದ ಕಾರ್ಯಗಳೇ ನಮ್ಮೆಲ್ಲರಿಗೆ ವರದಾನವಾಗಿವೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಅತ್ಯಧಿಕ ದಾಖಲೆಯ ಮತಗಳನ್ನು ಪಡೆದು ಎರಡನೇ ಸ್ಥಾನವನ್ನು ಪಡೆಯುವಂತಾಗಿತ್ತು. ಈ ಬಾರಿ ಎಲ್ಲೆಡೆ ಯುವಕರು, ಮಹಿಳೆಯರು ಒಗ್ಗಟ್ಟಿನಿಂದ ಜೆಡಿಎಸ್ ಪಕ್ಷವನ್ನು ಬೆಂಬಲಿಸಲು ಮುಂದಾಗಿದ್ದಾರೆ. ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿದ ಜನಪರವಾದ ಕಾರ್ಯಗಳು ಜನತೆಯ ಮುಂದೆ ಕಾಣುತ್ತಿವೆ. ಪಂಚರತ್ನ ಯೋಜನೆಯಡಿಯಲ್ಲಿ ಅನೇಕ ಬಡ ಮತ್ತು ಕಾರ್ಮಿಕರ ಪರವಾದ ಕೆಲಸಗಳು ನಡೆಯಲಿವೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ಮುಖಂಡರಾದ ಕೋಟೆ ಬಾಸ್ಕರ್, ಪ್ರಭಾಕರ್, ಬೇಗ್, ವೆಂಕಟೇಶ್, ಬಿ.ಎನ್.ನಾಗರಾಜ್, ಮೋಹನ್ ಕುಮಾರ್, ಗಣೇಶ್, ರಾಜೇಶ್, ದಯಾನಂದ್, ಹರೀಶ್, ನರಸಿಂಹಮೂರ್ತಿ, ಗೀತಾ, ಅನಿತಾಲಕ್ಷ್ಮಿ, ಗೌರಮ್ಮ, ವರುಣ್, ಜಯಕೀರ್ತಿ, ಕಾಮಗಾನಹಳ್ಳಿ ಮಂಜುನಾಥರೆಡ್ಡಿ, ಶ್ರೀನಿವಾಸಗೌಡ, ಜಯರಾಮರೆಡ್ಡಿ, ಸಂದೀಪರೆಡ್ಡಿ, ಮೋಹನ್, ನೂರುಲ್ಲಾ, ಅಶ್ವತ್ಥರೆಡ್ಡಿ, ನಾಗಭೂಷಣರೆಡ್ಡಿ, ಪ್ರದೀಪ್, ಅಶೋಕ್, ನಾಗರಾಜ್, ಗಿರಿ, ಹರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.