ಪಂಚರತ್ನ ಯೋಜನೆಗಳೆ ನಮ್ಮ ಗೆಲುವಿಗೆ ಶ್ರೀರಕ್ಷೆ

ಸಿರವಾರ,ಏ.೧೭- ನಮ್ಮ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ನಮ್ಮ ಪಕ್ಷದ ಪಂಚರತ್ನ ಯೋಜನೆಗಳೆ ನಮ್ಮ ಜೆಡಿಎಸ್ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿದೆ ಹೀಗಾಗಿ ಈ ಬಾರಿ ಮತ್ತೊಮ್ಮ ಮಾನ್ವಿಗೆ ರಾಜಾ ವೆಂಕಟಪ್ಪ ನಾಯಕ ಗೆಲುವು ನಿಶ್ಚಿತ ಎಂದು ಶಾಸಕರ ಸಹೋದರ ಹಾಗೂ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ ಹೇಳಿದರು.
ಅವರು ಪಟ್ಟಣದ ಶಾಸಕರ ಕಾರ್ಯಾಲಯದ ಮುಂಭಾಗದಲ್ಲಿ ಸಿರವಾರ ಪಟ್ಟಣದ ವಿವಿಧ ವಾರ್ಡ್ಗಳಲ್ಲಿನ ೩೦೦ಕ್ಕೂ ಅಧಿಕ ಯುವಕರು ಹಾಗೂ ಹಿರಿಯ ಮುಖಂಡರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿ ಅವರು ಮಾನವಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಮಾನವಿ ಇವರ ಅಭಿವೃದ್ಧಿ ಕಾರ್ಯಗಳು ಹಾಗೂ ಮಾನ್ವಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳು ಮತ್ತು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಇಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದು ಬಲ ಬಂದಂತಾಗಿದೆ.
ಮಾನವಿ ವಿಧಾನ ಸಭಾ ಕ್ಷೇತ್ರ ಅಭಿವೃದ್ಧಿ ಹಿನ್ನೆಲೆ ಬಹುತೇಕ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದು ಬಹಳ ಸಂತೋಷದ ವಿಷಯ ನಮ್ಮ ಶಾಸಕರು ಕಳೆದ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸುತ್ತಿದ್ದಾರೆ. ಇಡೀ ಕ್ಷೇತ್ರದಾದ್ಯಂತ ನಮ್ಮ ಜೆಡಿಎಸ್ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತದೆ ಇದರೊಂದಿಗೆ ವಿರೋಧ ಪಕ್ಗಳಲ್ಲಿ ಟಿಕೇಟ್ ಕಗ್ಗಂಟು ಇನ್ನೂ ಕೂಡ ಬಗೆ ಹರಿದಿಲ್ಲ ಮತ್ತು ಅಲ್ಲಿ ಇನ್ನು ಕೂಡ ಮುಸುಕಿನ ಗುದ್ದಾಟ ನಡೆಯುತ್ತಿದೆ ಇಂತಹದರಲ್ಲಿ ನಮ್ಮ ಶಾಸಕರ ಅಭಿವೃದ್ಧಿ ಕಾರ್ಯಗಳಿಂದ ಕ್ಷೇತ್ರದಾದ್ಯಂತ ಹೆಸರಾಗಿದ್ದು ಈ ಬಾರೀಯೂ ನಮ್ಮ ಶಾಸಕರೆ ಜಯ ಗಳಿಸಲಿದ್ದಾರೆ ಆದ್ದರಿಂದ ಎಲ್ಲಾ ಕಾರ್ಯಕರ್ತರು ರಾತ್ರಿ ಹಗಲು ಎನ್ನದೆ ಕೆಸಲ ಮಾಡಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರಾದ ಜಿ.ಲೋಕರೆಡ್ಡಿ, ಚಂದ್ರಶೇಖರಯ್ಯ ಸ್ವಾಮಿ, ಕಾಶಿನಾಥ ಸರೋಧೆ, ಈಶಪ್ಪ ಹೂಗಾರ, ಗ್ಯಾನಪ್ಪ, ದಾನಪ್ಪ, ಸೂಗುರೇಶ ಸ್ವಾಮಿ ಗಣದಿನ್ನಿ, ಚಿನ್ನಾನ ಯಲ್ಲಪ್ಪ ನಾಯಕ ದೊರೆ, ಚಂದ್ರು ಎಲ್ಲೇರಿ, ಬಂದೇನವಾಜ, ಶರೀಫ ಮರಾಠ, ಶಾಂತಪ್ಪ ಪಿತಗಲ್, ಹುಲಿಗೆಪ್ಪ ಮಡಿವಾಳ, ಶರಣಬಸವ ಮುಚ್ಚಳಗುಡ್ಡ ಕ್ಯಾಂಪ್, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.