ಪಂಚರತ್ನ ಯಾತ್ರೆಯು ಐತಿಹಾಸಿಕ ಕಾರ್ಯಕ್ರಮ

ಕೋಲಾರ, ನ,೧೯- ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯು ಐತಿಹಾಸಿಕ ಕಾರ್ಯಕ್ರಮವಾಗಿದ್ದು ಎಲ್ಲರೂ ಸವಾಲಾಗಿ ಸ್ವೀಕರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಫೋನ್ ನಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ನಗರದ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಪಂಚರತ್ನ ರಥಯಾತ್ರೆ ಕುರಿತಂತೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಅಂಶಗಳ ಆಧಾರದಲ್ಲಿ ಈ ಯಾತ್ರೆ ರಾಜ್ಯದ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯಲಿದ್ದು ಮುಂದಿನ ೨೦೨೩ ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕುಮಾರಸ್ವಾಮಿ ಅವರಿಗೆ ಬಲತುಂಬಬೇಕು ಇದಕ್ಕೆ ಬೇಕಾದ ಪೂರ್ವತಯಾರಿಗಳನ್ನು ಪಕ್ಷದ ಕಾರ್ಯಕರ್ತರು ಮುಖಂಡರು ಜವಾಬ್ದಾರಿ ತೆಗೆದುಕೊಂಡು ಯಶಸ್ವಿ ಮಾಡಬೇಕು ಎಂದರು
ಈ ಸಂದರ್ಭದಲ್ಲಿ ಎಂಎಲ್‌ಸಿ ಇಂಚರ ಗೋವಿಂದರಾಜು ಮಾತನಾಡಿ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಉದ್ಘಾಟನೆಯಾಗಲಿದ್ದು ಕಾರ್ಯಕರ್ತರು ಕೆಲಸ ಮಾಡಲು ಮತ್ತಷ್ಟು ಹುಮ್ಮಸ್ಸು ಹೆಚ್ಚಾಗುತ್ತದೆ ಮುಳಬಾಗಿಲು ಸಮಾವೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಿಸಬೇಕು ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಪಕ್ಷದ ಮುಖಂಡರಾದ ಕುಮಾರಸ್ವಾಮಿ, ಇಬ್ರಾಹಿಂ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವ ಮುನ್ಸೂಚನೆ ಇದೆ. ಯಾವುದೇ ಕಾರಣಕ್ಕೆ ಅವಕಾಶ ತಪ್ಪಿಸಿಕೊಳ್ಳಬಾರದು ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿ ಯೋಜನೆಗಳನ್ನು ಜಾರಿ ಮಾಡಿಸಿಕೊಳ್ಳಬೇಕಾಗಿದೆ ರಾಜ್ಯದಲ್ಲಿ ೧೨೩ ಸ್ಥಾನ ಪಡೆಯಲು ಕಷ್ಟವಿಲ್ಲ ಆದರೆ ಕೋಲಾರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು ಎಂದರು
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ, ನವೆಂಬರ್ ೨೧ರಂದು ಕೋಲಾರ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ಕಾರ್ಯಕ್ರಮದ ರೂಪುರೇಷೆ ಪ್ರಕಟಿಸಲಾಗಿದೆ ಪ್ರತಿಯೊಂದು ಹಳ್ಳಿಯಿಂದ ಕಾರ್ಯಕರ್ತರನ್ನು ಭಾಗವಹಿಸುವಂತೆ ಮಾಡಬೇಕು ವಕ್ಕಲೇರಿಯಿಂದ ಪ್ರಾರಂಭವಾಗಿ ಕ್ಯಾಲನೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಈ ಕಾರ್ಯಕ್ರಮದ ಮೂಲಕ ಜನಕ್ಕೆ ಅರಿವು ಮೂಡಿಸಿ ಯಶಸ್ವಿಗೊಳಿಸಬೇಕು ಎಂದರು.
ಸಭೆಯಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಶಿಕ್ಷಣ, ಆರೋಗ್ಯ, ರೈತರ ಅಭಿವೃದ್ಧಿ, ಉದ್ಯೋಗ, ಮಹಿಳೆಯರ ಹಿತಕ್ಕೆ ಪಂಚರತ್ನದಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಸಮಾವೇಶಕ್ಕೆ ಕೋಲಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ನವೆಂಬರ್ ೨೧ರಂದು ಪಂಚರತ್ನ ರಥಯಾತ್ರೆಯೂ ಮಾಲೂರು ತಾಲ್ಲೂಕಿನ ಶಿವಾರಪಟ್ಟಣದಿಂದ ವಕ್ಕಲೇರಿಗೆ ಯಾತ್ರೆಗೆ ಬರಲಿದೆ ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮಾತ್ರವಲ್ಲ ಯಡಿಯೂರಪ್ಪ ಹಾದಿಯಾಗಿ ಇಡೀ ಸರ್ಕಾರ ಹೋರಾಟ ಮಾಡಿದರೂ ಕೋಲಾರದಲ್ಲಿ ಜೆಡಿಎಸ್ ಪಕ್ಷ ಗೆಲ್ಲುವುದು ಸೂರ್ಯ ಚಂದ್ರರಷ್ಟೆ ಸತ್ಯ ಎಂಬ ವಿಶ್ವಾಸ ವ್ಯಕ್ತ ಪಡೆಸಿದರು,
ಈ ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜಮೀರ್ ಪಾಷ, ರಾಜ್ಯ ಕಾರ್ಯದರ್ಶಿ ಮಹಮದ್ ಅಲಿಬೇಗ್, ಮುಸ್ತಫಾ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮುಖಂಡರಾದ ವಕ್ಕಲೇರಿ ರಾಮು, ಡಾ.ಡಿ.ಕೆ ರಮೇಶ್, ಪಾಲಾಕ್ಷಿಗೌಡ, ಮುನೇಗೌಡ, ಖಲೀಲ್, ತಿರುಮಲೇಶ್, ರತ್ನಮ್ಮ, ಎಂ ಆನಂದ್ ಕುಮಾರ್, ಜನಪನಹಳ್ಳಿ ಆನಂದ್, ಖಾಜಿಕಲ್ಲಹಳ್ಳಿ ಹರೀಶ್, ಡಾಬಾ ಶಂಕರ್, ಕಡಗಟ್ಟೂರು ವಿಜಿಕುಮಾರ್, ಮುಂತಾದವರು ಇದ್ದರು