ಪಂಚರತ್ನ ಕಾರ್ಯಕ್ರಮದಿಂದ ಎಲ್ಲರಿಗೂ ಅನುಕೂಲ: ಹೆಚ್.ಟಿ.ಮಂಜು

ಕೆ.ಆರ್.ಪೇಟೆ: ಮಾ.29:- ಗ್ರಾಮೀಣ ಪ್ರದೇಶದ ಜನರ ಬದುಕನ್ನು ಕಟ್ಟಿಕೊಡಲು ಮುಂದಾಗಿರುವ ಮಾಜಿ ಸಿಎಂ ಕುಮಾರಣ್ಣನ ಮಹತ್ವಾಕಾಂಕ್ಷೆಯ ಪಂಚರತ್ನ ಕಾರ್ಯಕ್ರಮ ರೈತಾಪಿವರ್ಗದವರಿಗೆ, ಬಡವರ್ಗದವರಿಗೆ, ಹಿಂದುಳಿದವರಿಗೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಜೆಡಿಎಸ್ ಅಭ್ಯರ್ಥಿ ಹೆಚ್.ಟಿ,ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕರ್ನಾಟಕಕ್ಕೆ ಕುಮಾರಣ್ಣ ಕೆ.ಆರ್.ಪೇಟೆಗೆ ಮಂಜಣ್ಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
2023ರ ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ದಯವಿಟ್ಟು ಹಣ, ಮತ್ತು ಇತರೆ ವಸ್ತುಗಳಿಗೆ ಆಸೆಪಟ್ಟು ಮತಚಲಾಯಿಸಬೇಡಿ. ಅಧಿಕಾರ ಇದ್ದಾಗ ನಿಮ್ಮತ್ತ ತಿರುಗಿ ನೋಡದೇ ಚುನಾವಣೆ ಸಮೀಪ ಇರುವಾಗ ನಿಮ್ಮ ಗ್ರಾಮಗಳಿಗೆ ಬಂದು ಗುದ್ದಲಿಪೂಜೆ, ಶಂಕುಸ್ಥಾಪನೆ ಮುಂತಾದ ಜನರ ಕಣ್ಣೊರೆಸುವ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕು. ನೀವು 2000 ಹಣ ಪಡೆದು ಮತ ಚಲಾಯಿಸಿದರೆ ನೀವು ಮತ್ತೆ ಐದು ವರ್ಷಗಳ ಕಾಲ ಅಜಾÐತವಾಸಕ್ಕೆ ಹೋಗಬೇಕಾಗುತ್ತದೆ. ಯಾವುದೇ ಹಣವಿಲ್ಲದೇ ನಿಮ್ಮ ಬದುಕು ಕಟ್ಟಿಕೊಡಲು ಮುಂದಾಗಿರುವ ಕುಮಾರಣ್ಣನ ಮುಖವನ್ನು ನೋಡಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿ ಎಂದರು.
ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್ ಮಾತನಾಡಿ ರೈತರಿಗಾಗಿ, ರೈತರ ಸಂಕಷ್ಟಗಳ ಪರಿಹಾರಕ್ಕಾಗಿ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು ಕುಮಾರಣ್ಣನ ಕೈಗೆ ಬಹುಮತದ ಸರ್ಕಾರ ಕೊಟ್ಟು ನೋಡೋಣ. ಈ ಹಿಂದೆಯೂ ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ರೈತರಿಗೆ ಸಾಕಷ್ಟು ಅನುಕೂಲ ಮಾಡಿರುವ ಕುಮಾರಣ್ಣ ಮತ್ತೆ ಸಿಎಂ ಆಗಲಿದ್ದು ನಿಮ್ಮೆಲ್ಲರ ಅಹಕಾರ ಅಗತ್ಯ ಪ್ರತಿ ಮನೆಮನೆಯಲ್ಲಿಯೂ ಕುಮಾರಣ್ಣನೇ ಅಭ್ಯರ್ಥಿ ಎಂದು ತಿಳಿದು ನಮ್ಮ ಅಭ್ಯರ್ಥಿ ಮಂಜಣ್ಣನ ಗೆಲುವಿಗೆ ಶ್ರಮಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಮಾರಾಟ ಮಹಾಮಂಡಳಿಯ ನಿರ್ದೇಶಕ ಚೋಳೇನಹಳ್ಳಿಪುಟ್ಟಸ್ವಾಮಿಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಮು, ಕಿಕ್ಕೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಪಂ ಮಾಜಿ ಸದಸ್ಯೆ ಶಾರದಕೃಷ್ಣೇಗೌಡ, ಕಿಕ್ಕೇರಿ ವಿಎಸೆಸ್‍ಎನ್ ಮಾಜಿ ಆಧ್ಯಕ್ಷ ಶೇಖರ್, ದೇವೇಗೌಡ ಸೇರಿದಂತೆ ಹಲವರಿದ್ದರು.