ಪಂಚಮಸಾಲಿ 2ಚಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ .ನ.03 ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರವರ್ಗ-2ಎ ಪಟ್ಟಿಗೆ ಸೇರಿಸುವ ಜೊತೆಗೆ ವಿವಿಧ ಬೇಡಿಕೆ ಒತ್ತಾಯಿಸಿ ಪಂಚಮಶಾಲಿ ಸಮಾಜದ ಪದಾಧಿಕಾರಿಗಳು ತಹಸಿಲ್ ಕಚೇರಿ ಎದುರು ಧರಣಿ ನಡೆಸಿದರು.
ತಾಲೂಕು ಕಚೇರಿಯಲ್ಲಿ ಮೂಲಕ ಸರಕಾರಕ್ಕೆ ಮನವಿ ಮನವಿ ಸಲ್ಲಿಸಿ ಪಂಚಮಸಾಲಿ ಜಿಲ್ಲಾದ್ಯಕ್ಷ ಭದ್ರವಾಡಿ ಚಂದ್ರಶೇಖರ ಮಾತನಾಡಿ ಪಂಚಮಸಾಲಿ ಸಮಾಜದಲ್ಲಿ ಶೈಕ್ಷಣಿಕವಾಗಿ ಹಾಗೂ ಉದ್ಯೋಗ ಅವಕಾಶದಲ್ಲಿ ವಂಚಿತರಾಗಿರುವುದು ರಿಂದ ಈ ಸಮಾಜ ಬಹಳ ಕಷ್ಟಕರ ಹಾಗೂ ಬಹಳ ಜನ ಬಡವರು ಮತ್ತು ಕೂಲಿ ಕಾರ್ಮಿಕ,ವ್ಯವಸಾಯ ಮಾಡಯತ್ತಾ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ.2ಎ ವರ್ಗ ಸಿಕ್ಕರೆ ಬಡವರಿಗೆ ಅನುಕೂಲ ಮತ್ತು ಶಿಕ್ಷಣ ದೊರೆಯಲು ಸಾಧ್ಯ ಹಿನ್ನಲೆಯಲ್ಲಿ ಸಮಾಜವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಉಪನ್ಯಾಸಕ ಕುಂಟೂರು ನಾಗರಾಜ್ ಮಾತನಾಡಿ, ಈ ಹಿಂದೆ ಸರ್ಕಾರವು ನೇಮಿಸಿದ್ದ ಎಲ್.ಜಿ.ಹಾವನೂರು ವರದಿ ಮತ್ತು ಚೆನ್ನಪ್ಪ ರೆಡ್ಡಿ ಆಯೋಗದ ವರದಿಗಳಲ್ಲಿ ಪಂಚಮಸಾಲಿ ಸಮುದಾಯವನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಸಮುದಾಯವನ್ನು ಸಮೀಕ್ಷೆಯಲ್ಲಿ ಪರಿಗಣಿಸದೆ ಸಮಾಜಕ್ಕೆ ತುಂಬಲಾರದ ನಷ್ಟಮಾಡಿದ್ದಾರೆ ಎಂದು ಆರೋಪಿಸಿದರು. ಕೂಡಲೆ ನಮ್ಮ ಸಮುದಾಯವನ್ನು ಮೀಸಲಾತಿ 2ಎಗೆ ಸೇರ್ಪಡೆ ಗೊಳಿಸಬೇಕು, ಇಲ್ಲವಾದರೆ ನ್ಯಾಯದೊರೆಯುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸಮುದಾಯದ ಯುವಘಟಕದ ಜಿಲ್ಲಾಧ್ಯಕ್ಷ ಕುಂಚೂರು ಕೊಟ್ರೇಶ್ ಮನವಿಪತ್ರ ಓದಿದರು. ನಂತರ ತಹಸೀಲ್ದಾರ್‍ಗೆ ಸಲ್ಲಿಸಿದರು. ಇದಕ್ಕೂ ಮುನ್ನ ಮುಖಂಡ ಭದ್ರವಾಡಿ ಚಂದ್ರಶೇಖರ್ ಹಳೇ ಊರಿನ ಅವರ ಕಚೇರಿಯಿಂದ ಸಂಘಟನೆಯೊಂದಿಗೆ ವಿವಿಧ ಘೋಷಣೆಗಳನ್ನು ಕೂಗುತ್ತ ತಾಲೂಕು ಕಚೇರಿಗೆ ತೆರಳಿದರು.
ಜಿಲ್ಲಾ ಉಸ್ತುವಾರಿ ಸಂಘಟಕ ವೀರೇಶ್ ನಂದಿ, ಕಾನೂನು ಘಕದ ರಾಜ್ಯಾಧ್ಯಕ್ಷ ಕೊಟ್ರೇಶ್ ಶೆಟ್ಟರ್, ಮುಖಂಡರಾದ ನರೆಗಲ್ ಕೊಟ್ರೇಶ್, ಚಿತ್ತವಾಡ್ಗಿ ಪ್ರಕಾಶ್, ಕುಂಟೂರು ನಿಂಗಪ್ಪ, ಎಚ್.ಎ.ಕೊಟ್ರೇಶ್, ಸಕ್ರಿಹಳ್ಳಿ ಮಲ್ಲಿಕಾರ್ಜುನ, ಕೆ.ರೋಹಿತ್, ವಕೀಲ ಅಕ್ಕಿ ಮಲ್ಲಿಕಾರ್ಜುನ, ವಕೀಲ ಷಣ್ಮುಖನಗೌಡ್ರು, ಬೆಣಕಲ್ಲು ಪ್ರಕಾಶ, ನರೆಗಲ್ ಮಲ್ಲಿಕಾರ್ಜುನ, ಬ್ಯಾಲಾಳ್ ಮಂಜುನಾಥ, ನರೆಗಲ್ ಬಸವರಾಜ್, ಕೆ.ರುದ್ರೇಶ, ಕುಮಾರಸ್ವಾಮಿ, ಚಂದ್ರಶೇಖರ್ ಪಾಟೀಲ್, ವರ್ತಕ ಶಾನುಭೋಗರ ಶಂಭನಾಥ, ಚಿಲುಗೋಡು ಕರಿಯಪ್ಪ, ಪೋಟೋ ಕೊಟ್ರೇಶ್, ಯುವರಾಜ್, ಚಿತ್ತವಾಡ್ಗಿ ಶಿವರಾಜ ಮತ್ತಿತರರು ಇದ್ದರು.