ಪಂಚಮಸಾಲಿ ಸಮಾಜವನ್ನು ಪ್ರವರ್ಗ-2ಎ ಗೆ ಸೇರಿಸಲು ಪಟ್ಟು ಆಚಾರನರಸಾಪುರದಲ್ಲಿ ಮೌನ ಪ್ರತಿಭಟನೆ

ಗಂಗಾವತಿ:ಅ.30- ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಗೆ ಸೇರಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಆಚಾರನರಸಾಪುರ ಗ್ರಾಮದ ಪಂಚಾಮಸಾಲಿ ಮುಖಂಡರು ಗುರುವಾರ ಮಧ್ಯಾಹ್ನ ಮೌನ ಪ್ರತಿಭಟನೆ ನಡೆಸಿದರು.
ಸಮಾಜದ ಮುಖಂಡರಾದ ಬರಗೂರ ನಾಗರಾಜ್ ಮಾತನಾಡಿ, ಪಂಚಮಸಾಲಿ ಸಮಾಜ ತೀರ ಹಿಂದುಳಿದಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸಮಾಜಕ್ಕೆ ಪ್ರವರ್ಗ-2ಎ ಮೀಸಲಾತಿ ಜೊತೆಗೆ ಪಂಚಮಸಾಲಿ ನಿಗಮ ಮಂಡಳಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶರಣಪ್ಪ ತಿಪ್ಪಶೆಟ್ಟಿ, ಹೆಬ್ಬಾಳ ಶರಣಪ್ಪ, ಅಯ್ಯಣ್ಣ ಹೇಮಗುಡ್ಡ, ಮಂಜುನಾಥ್ ತಾಳೂರು, ದೇವೇಂದ್ರಗೌಡ ಮಾಲಿಪಾಟೀಲ್, ಶರಣಪ್ಪ ಕೋಟಿ, ಶರಣಪ್ಪ ಸಣಾಪುರ ಬಸವರಾಜ್ ತಿಪ್ಪಶೆಟ್ಟಿ, ಭೀಮನಗೌಡ ಮಾಲಿಪಾಟೀಲ್, ಚಂದ್ರಶೇಖರ ಹೇಮಗುಡ್ಡ ಸೇರಿದಂತೆ ಇತರರಿದ್ದರು.