ಪಂಚಮಸಾಲಿ ಸಮಾಜದ ೨ ಎ .ಮೀಸಾಲಾತಿ. ಹೋರಾಟದ ಹಕ್ಕೋತ್ತಾಯ

ಲಿಂಗಸೂಗೂರು.ನ.೨೪- ಪಟ್ಟಣದ ಪತ್ರಿಕಾ ಭವನದಲ್ಲಿ ಪಂಚಮಶಾಲಿ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಲಿಂಗಸುಗೂರ ಪಟ್ಟಣದಲ್ಲಿ
ದಿನಾಂಕ ೨೬-೧೧-೨೦೨೨ರ ಶನಿವಾರದಂದು ರಾಯಚೂರು ಜಿಲ್ಲಾ ಮಟ್ಟದ ಪಂಚಮಸಾಲಿ ಸಮಾಜದ ೨ ಎ .ಹೋರಾಟದ ಹಕ್ಕೋತ್ತಾಯ, ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮನವರ ೨೪೪ ನೇ ಜಯಂತ್ಯೋತ್ಸವ ಹಾಗೂ ೧೯೯ನೇ ವಿಜಯೋತ್ಸವ ಅಂಗವಾಗಿ ಲಿಂಗಸುಗೂರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ, ಕೂಡಲಸಂಗಮ ಹಾಗೂ ಶ್ರೀ ಚಂದ್ರಮೌನೇಶ ತಾವನವರು, ಜ೦ಗಮರಹಳ್ಳಿ ಇವರುಗಳ ದಿವ್ಯ ಸಾನ್ನಿಧ್ಯದಲ್ಲಿ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕರು, ಹುನಗುಂದ, ನಮ್ಮ ಸಮಾಜದ ಹಿರಿಯರಾದ ಸಂಗಣ್ಣ ಕರಡಿ, ಲೋಕಸಭಾ ಸದಸ್ಯರು, ಕೊಪ್ಪಳ, ಸಮಾಜದ ಹಿರಿಯ ರಾಷ್ಟ್ರೀಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ, ಶಾಸಕರು, ವಿಜಯಪುರ, ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯರು, ವಿನಯ ಕುಲಕರ್ಣಿ, ಮಾಜಿ ಸಚಿವರು, ಧಾರವಾಡ, ಅರವಿಂದ ಬೆಲ್ಲದ ಶಾಸಕರು,ಲಕ್ಷ್ಮೀ ಹೆಬ್ಬಾಳಕರ್, ಶಾಸಕರು, ಬೆಳಗಾವಿ ಗ್ರಾಮೀಣ, ಹೆಚ್.ಎಸ್. ಶಿವಶಂಕರ್, ಮಾಜಿ ಶಾಸಕರು, ಹರಿಹರ ಶ ಚನ್ನರಾಜ ಹಟ್ಟಿ ಹೊಳಿ, ವಿಧಾನ ಪರಿಷತ್ ಸದಸ್ಯರು, ಬೆಳಗಾವಿ, ಹಾಗೂ ಇನ್ನಿತರ ಪಂಚಮಸಾಲಿ ಸಮಾಜದ ಸರಿಯ ಮುಖಂಡರುಗಳು ಈ ಸಭೆಯಲ್ಲಿ ಪಾಲ್ಗೊಳ್ಳುವರು.
ದಿನಾಂಕ: ೨೬-೧೧-೨೦೨೨ರ ಶನಿವಾರ ಬೆಳಿಗ್ಗೆ ೧೦.೩೦ ಕ್ಕೆ ಕುಂಭ, ಕಳಸದೊಂದಿಗೆ ಶ್ರೀ ವೀರಮಾತೆ ಕಿತ್ತೂರು ರಾಣಿ ಚನ್ನಮನ ಭಾವಚಿತ್ರ, ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರ ಭವ್ಯ ಮೆರವಣಿಗೆಯು ಈಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಆವರಣವರೆಗೆ, ೨ಎ ಮೀಸಲಾತಿ ಹಕ್ಕೋತ್ತಾಯ ಬಹಿರಂಗ ಸಭೆ ಮಾಡಲಾಗುವುದು ಈ ಸಭೆಗೆ
ಲಿಂಗಸುಗೂರು ತಾಲೂಕಿನ ಮತ್ತು ಸುತ್ತಮುತ್ತಲಿನ ತಾಲೂಕಿನ ಪಂಚಮಸಾಲಿ ಸಮಾಜದ ಎಲ್ಲಾ ಬಂಧುಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪತ್ರಿಕಾಗೋಷ್ಠಿ ಮೂಲಕ ಕೋರಲಾಗಿದೆ.
ಈ ಸಂದರ್ಭದಲ್ಲಿ ಲಿಂಗಸುಗೂರ ತಾಲೂಕಿನ ಪಂಚಮಶಾಲಿ ಸಮಾಜದ ಮುಖಂಡರಾದ ಅಮರೇಶ ತಾವರಗೇರ.ಪ. ಅದ್ಯೆಕ್ಷರು. ವಿಜಯಕುಮಾರ್ ಹೊಸಗೌಡ್ರು. ವಿಜಯಲಕ್ಷ್ಮಿ. ಶಂಕರಗೌಡ. ಮಹಾಂತೇಶ ಪಾಟೀಲ್. ಶರಣಪ್ಪ ಮೇಟಿ. ಸಿ.ಸಿ.ಕರಡ್ ಕಲ್. ಬಸಲಿಂಗಪ್ಪ.ಗದ್ದಿ. ಶಿವಾನಂದ ಬಾದವಾಡಗಿ. ಶರಣಪ್ಪ ಸುಂಕದ. ಮಲ್ಲಿಕಾರ್ಜುನ ನಾಡಗೌಡ. ಅಮರೇಶ ಹಿರೇಹೆಸರೂರ್. ಇನ್ನಿತರರು ಉಪಸ್ಥಿತರಿದ್ದರು.