ಪಂಚಮಸಾಲಿ ಸಮಾಜದಿಂದ ಸಂತಾಪಂಚಮಸಾಲಿ ಸಮಾಜದಿಂದ ಸಂತಾಪ ಸಭೆ ಪ ಸಭೆ

ಕೊಟ್ಟೂರು, ನ.17: ಪಂಚಮಸಾಲಿ ಸಮಾಜದ ನಿವೃತ್ತ ಎಸ್ಪಿ ಶಿವಲಿಂಗಪ್ಪ ಜಿಲ್ಲಿಕಟ್ಟೆ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದು ವಿಷಯ ತಿಳಿಯುತ್ತಿದ್ದಂತೆ ಪಟ್ಟಣದ ಪಂಚಮಸಾಲಿ ಬ್ಯಾಂಕಿನಲ್ಲಿ ಸಂತಾಪ ಸಭೆ ನಡೆಯಿತು.
ಸಭೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡ ಎಂ ಶಿವಣ್ಣ ಮಾತನಾಡಿ, ಆಪ್ರತಿಮ ಕ್ರಿಯಾಶೀಲರಾಗಿದ್ದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಅಪಾರ ಜನಪ್ರಿಯತೆ ಗಳಿಸಿದ್ದ ಮಹಾನ್ ವ್ಯಕ್ತಿ ಯಾಗಿದ್ದರು. ಅವರ ಈ ನಿಧನವು ಪಂಚಮಸಾಲಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು ಅವರಿಗೆ ದೇವರು ಚಿರಶಾಂತಿ ನೀಡಿ ಅವರ ಕುಟುಂಬ ವರ್ಗಕ್ಕೆ ದೈರ್ಯತುಂಬುವ ಶಕ್ತಿ ದೇವರು ನೀಡಲಿ ಎಂದರು. ಸಭೆಯಲ್ಲಿ ನಿವೃತ್ತ ಶಿಕ್ಷಕ ನಂಜನಗೌಡ, ಉದ್ಯಮಿ ಅಕ್ಕಿ ಚಂದ್ರಣ್ಣ, ಮುದುಕಪ್ಪ, ನಿವೃತ್ತ ಬ್ಯಾಂಕ್ ಮೇನೇಜರ್ ಎಸ್.ಮಲ್ಲಿನಾಥ ಸೇರಿದಂತೆ ಇತರರು ಇದ್ದರು.