ಪಂಚಮಸಾಲಿ ಸಮಾಜದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಜು.26 ಪಂಚಮಸಾಲಿ ಸಮಾಜದ ಬಂಧುಗಳು ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲು ತಂದೆ ತಾಯಿಯಂದಿರನ್ನು ಗುರು ಹಿರಿಯರನ್ನು ಗೌರವಿಸುವಂತಹ ಸಂಸ್ಕಾರವಂತರನ್ನಾಗಿ ಕಲಿಸಿ ಎಂದು ಪಂಚಮಸಾಲಿ ಸಮಾಜದ  ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೇಲ್ ತಿಳಿಸಿದರು.
ಭಾನುವಾರದಂದು ಹರ ದೇವಸ್ಥಾನದ ಆವರಣದಲ್ಲಿ ತಾಲೂಕಿನ ಪಂಚಮಸಾಲಿ ಸಮಾಜ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಮಾಜದ ಮಕ್ಕಳು ಶಾಸಕಾಂಗ ನ್ಯಾಯಾಂಗ ಕಾಯಾಂಗಗಳಲ್ಲಿ ಉನ್ನತ ಸ್ಥಾನ ಪಡೆಯಲಿಕ್ಕೆ ಸಮಾಜದ ನೌಕರರು ಸಮಾಜದ ಬಡ ಪ್ರತಿಭಾವಂತ ಮಕ್ಕಳಿಗೆ ನೆರವಾಗಬೇಕು ಪ್ರತಿ ತಿಂಗಳು ಎರಡು ಬಾರಿ ಕೆಎಎಸ್ ಐಎಎಸ್ ಪರೀಕ್ಷೆ ಸಿದ್ದತೆ ತರಬೇತಿ ಕಾರ್ಯಗಾರವನ್ನು ಏರ್ಪಡಿಸುವ ಮೂಲಕ ಸಮಾಜದ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುಬೇಕು ಇದಕ್ಕೆ ಸಮಾಜದ ಸಹಕಾರ ಇರಲಿದೆ ಎಂದರು.                       ನಿಕಟಪೂರ್ವ ರಾಜ್ಯಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ ಪಂಚಮಸಾಲಿ ಸಮಾಜಕ್ಕೆ 2ಎ ನೀಡುವ ವಿಷಯದಲ್ಲಿ ಬಿಜೆಪಿ ಕಾಂಗ್ರೇಸ್ ಜೆಡಿಎಸ್ ಯಾವುದೇ ಪಕ್ಷದವರ ಸರ್ಕಾರವೇ ಇರಲಿ ನಮ್ಮ ಸಮಾಜವನ್ನು ತಿರಸ್ಕಾರಿಸಿದರೆ ಸಮಾಜ ಅಂತಹ ಪಕ್ಷವನ್ನು ತಿರಸ್ಕಾರಿಸುತ್ತದೆ ಕೂಡಲೇ ಪಂಚಮಸಾಲಿಕ್ಕೆ 2ಎ ನೀಡುವಂತೆ ಒತ್ತಾಯಿಸಿದ ಅವರು ಪಂಚಮಸಾಲಿ ಸಮಾಜದ ಮಕ್ಕಳು ಅಂಕಗಳನ್ನು ಗಳಿಸುವ ಮಕ್ಕಳಾಗಿ ಸಮಾಜಕ್ಕೆ ಕಳಂಕ ತರುವಂತಹ ಮಕ್ಕಳಾಗದಿರಿ ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರವಂತರನ್ನಾಗಿ ಮಾಡಿ ಎಂದರು.                                       .                                                               ನಿಕಟಪೂರ್ವ ರಾಜ್ಯಧ್ಯಕ್ಷ ನಾಗನಗೌಡ ಪಾಟೇಲ್ ಸಮಾಜದ ಪ್ರತಿಭಾವಂತ ಮಕ್ಕಳಿಗೆ ತಲಾ ಎರಡು ಸಾವಿರ ಹಣ ಸರ್ಟಿಪೀಕೆಟ್ ನೀಡುವುದು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಂಕ ಪಡೆಯಲು ಪ್ರೋತ್ಸಾಹಿಸುವ ಸಮಾಜದ ಕಾರ್ಯವೈಖರಿ ಶ್ಲ್ಯಾಘನೀಯವಾದದ್ದು ಸಮಾಜ ಸಂಗನಬಸವ ಸ್ವಾಮೀಜಿ ಜೊತೆ ಸಾದ ಇರುತ್ತದೆ ಸಂಗನಬಸವ ಸ್ವಾಮೀಜಿ ಮುಂದಿನ ಪೀಠಧಿಪತಿಗಳಗುವುದರಲ್ಲಿ ಸಂದೇಹವಿಲ್ಲ ಸ್ವಾಮೀಜಿ ಮತ್ತೋಂದು ಸಂಘ ಕಟ್ಟುವುದು ಬೇಡ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ 44 ವಿದ್ಯಾರ್ಥಿಗಳನ್ನು ಸಮಾಜದ ನಿವೃತ್ತ ನೌಕರರನ್ನು ಹಾಗೂ ಸಮಾಜದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು.ಈ ವೇಳೆ ಸಂಗನಬಸವಸ್ವಾಮೀಜಿ ದಿವ್ಯಸಾನಿದ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಮಂಗಳ ಬಸವರಾಜ,ಕ್ಷೇತ್ರಶಿಕ್ಷಣಾಧಿಕಾರಿ ಎಂ ಸಿ ಆನಂದ್ ನಿಕಟಪೂರ್ವರಾಜ್ಯಧ್ಯಕ್ಷ ಬಾವಿಬೆಟ್ಟಪ್ಪ,ಬಳ್ಳಾರಿ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ,ತಾಲೂಕ ಅಧ್ಯಕ್ಷ ಅಕ್ಕಿ ಶಿವಕುಮಾರ,ಉಪಾಧ್ಯಕ್ಷ ಹನಸಿ ಸಿದ್ದೇಶ್,ಸಮಾಜದ ಮುಖಂಡರಾದ ವೈಮಲ್ಲಿಕಾರ್ಜುನ,ಮಂಜುನಾಥಗೌಡ,ಜೆ.ಬಿ ಶರಣಪ್ಪ,ಸಂಚಿ ಶಿವಣ್ಣ,ಪೋಷಕರು ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.                         ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದ ಪ್ರಾರ್ಥಿಸಿದರು.ಸೊನ್ನದ ಗುರುಬಸವರಾಜ ಕಾರ್ಯಕ್ರಮವನ್ನು ನಿರ್ವಹಿಸಿದರು.