ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನ. 28 ಕ್ಕೆ ಅಂತಿಮ ಗಡುವು : ಜಯಮೃತ್ಯುಂಜಯ ಸ್ವಾಮೀಜಿ


ದಾವಣಗೆರೆ.ನ.೨; ಬೆಳಗಾವಿಯಲ್ಲಿ ನಡೆದ ಹೋರಾಟ ಯಶಸ್ವಿಯಾಗಿದೆ ಎಂದು ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಗಳು ಇದೇ ತಿಂಗಳು ೨೮ ಕ್ಕೆ ಸರ್ಕಾರ ನಿರ್ಧಾರ ಕೈಗೊಳ್ಳಲು ಅಂತಿಮ ಗಡುವು ನೀಡಲಾಗಿದೆ ಎಂದರು. ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರು ದೂರವಾಣಿ ಮೂಲಕ ೨ ಎ ಮೀಸಲಾತಿ ನೀಡುವ ಭರವಸೆ ನೀಡಿದ್ದಾರೆ.

ಸರ್ಕಾರದ ಪರವಾಗಿ ಸಚಿವರ ಲಕ್ಷ್ಮಣ್ ಸವದಿ ಸೇರಿದಂತೆ ಹಲವರು ಬಂದು ಭೇಟಿಯಾಗಿದ್ದರು ಈ ವೇಳೆ ನಮ್ಮ ಹೋರಾಟ ಬೇಡಿಕೆ ವಿಚಾರ ತಿಳಿಸಿದ್ದೇವೆ ಎಂದು ಶ್ರೀಗಳು ತಿಳಿಸಿದರು. ನವೆಂಬರ್ ೨೮ ರೊಳಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಡಿಸೆಂಬರ್ ೨೮ ರಿಂದ ಕೂಡಲ ಸಂಗಮದಿಂದ ಪಂಚ ಲಕ್ಷ ಹೆಜ್ಜೆ ಪಾದಯಾತ್ರೆ ಮಾಡಿ ಫೆಬ್ರವರಿಯಲ್ಲಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದರು. ಇನ್ನೂ ಹರಿಹರ ಪೀಠದ ವಚನಾ ನಂದ ಶ್ರೀಗಳು ಬೆಂಬಲ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಉತ್ತಮ ಬೆಳವಣಿಗೆ ಎಂದರು. ಇನ್ನೂ ಸಮಾಜದ ಯುವ ಮುಖಂಡರು ಹಾಗೂ ಜೆಡಿಎಸ್ ನಾಯಕರಾದ ಶ್ರೀಧರ್ ಪಾಟೀಲ್ ಶ್ರೀಗಳ ಮಾರ್ಗದರ್ಶನದಂತೆ ಹೋರಾಟ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಹೊಸದಾಗಿ ವಿದ್ಯಾನಗರದಲ್ಲಿ ಆರಂಭವಾದ ಶೇರ್ ಮಾರ್ಕೇಟ್ ಟ್ರ್ರೈನಿಂಗ್ ಸೆಂಟರ್ ನ ಸಿಬ್ಬಂದಿ ಗುಜರಿ ವಿಜಯ ಕುಮಾರ್, ಅಣಬೇರು ಹರೀಶ್, ಶ್ರೀನಾಥ್ ಹಾಗೂ ಭಕ್ತರು ಉಪಸ್ಥಿತರಿದ್ದರು.