ಪಂಚಮಸಾಲಿ ಯುವ ಘಟಕದಿಂದ  ನೋಟ್ ಪುಸ್ತಕ ವಿತರಣೆ.

 

ದಾವಣಗೆರೆ.ಜೂ.೨೩; ಜಿಲ್ಲಾ ಪಂಚಮಸಾಲಿ ಯುವ ಘಟಕದ ಜಿಲ್ಲಾ ಅಧ್ಯಕ್ಷರಾದ  ಕೆ ಶಿವಕುಮಾರ್ ಅವರು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ  ವರ್ಷಕ್ಕೆ ಬೇಕಾಗುವಷ್ಟು ಶಿಕ್ಷಣಕ್ಕೆ ಅತಿ ಅವಶ್ಯಕವಾದ ನೋಟ್ ಪುಸ್ತಕಗಳನ್ನು ವಿತರಿಸಿದರು.  ಈ ಸಂದರ್ಭದಲ್ಲಿ  ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರ್ ಹುಂಬಿ, ಸಂಘಟನಾ ಕಾರ್ಯದರ್ಶಿ  ಹೊಸಕೇರಿ ಶಿವಕುಮಾರ್, ಬೆಳವನೂರು ನಾಗರಾಜ್, ನಗರ ಯುವ ಘಟಕದ ಅಧ್ಯಕ್ಷರಾದ ಅಂಗಡಿ ಸ್ವರೂಪ್, ಉಪಾಧ್ಯಕ್ಷರಾದ ನವೀನ್ ಎಂ ಎಸ್, ಕಾರ್ಯಾಧ್ಯಕ್ಷರಾದ ಚಂದನ ಪಲ್ಲಗಟ್ಟಿ, ಗ್ರಾಮಸ್ಥರಾದ ಗಣೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.