ಪಂಚಮಸಾಲಿ ಮಠದ ಅಭಿವೃದ್ಧಿಗೆ 10ಕೋಟಿ ಅನುದಾನ; ಮುಖ್ಯಮಂತ್ರಿ ಯಡಿಯೂರಪ್ಪ

ದಾವಣಗೆರೆ. ಜ.೧೪: ವೀರಶೈವ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗ ೩ಬಿ ಪಟ್ಟಿಗೆ ಸೇರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.ಹರಿಹರದ ಪಂಚಮಸಾಲಿ ಶ್ರೀಮಠದಲ್ಲಿ ಹರಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಶ್ರೀ ಮಠದ ಅಭಿವೃದ್ಧಿಗೆ 10ಕೋಟಿ ರೂ ಹಣಕಾಸಿನ ನೆರವು ನೀಡಲಾಗಿದೆ.ಮುಂದಿನ ನಾಲ್ಕೈದು ದಿನಗಳಲ್ಲಿ ಅನುದಾನದ ಹಣವನ್ನು ಮಠದ ಅಕೌಂಟ್ ಗೆ ವರ್ಗಾವಣೆ ಮಾಡಲಾಗುವುದು ಅದರ ಸದುಪಯೋಗವನ್ನು ಪೂಜ್ಯರು ಮಾಡಬೇಕು.ಸಮಾಜದೊಂದಿಗೆ ನಾನಿದ್ದೇನೆ ಎಂದು ಇದೇ ವೇಳೆ ಭರವಸೆ ನೀಡಿದರು.ಸಮುದಾಯ ನೂರು ಪ್ರಬಲ ನಾಯಕರು,ಸಮಾಜ ಸುಧಾರಕರನ್ನು ,ವೀರವನಿತೆಯರನ್ನು,ಹೋರಾಟಗಾರರನ್ನು ನೀಡಿದೆ ಎಂದರು. ೧೨ ನೇ ಶತಮಾನ ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಮಹತ್ವದಾಗಿತ್ತು.  ತತ್ವಜ್ಞಾನಿ  ಬಸವಣ್ಣನವರು ಸಮಾನತೆಯ ದನಿಎತ್ತಿಹಿಡಿದಿದ್ದು ಇದೇ ಶತಮಾನದಲ್ಲಿ ಪ್ರಪಂಚಕ್ಕೆಕಾಯಕವೇ ಕೈಲಾಸ ಎಂಬ ದುಡಿಮೆಯ ಮಂತ್ರ ಬೋಧಿಸಿದ್ದು ಬಸವಣ್ಣನವರು. ಬಸವಾದಿ ಶರಣರ ವಚನಗಳು ಆಧ್ಯಾತ್ಮ, ಧರ್ಮ,ಶಾಂತಿಯ ಆಗರವಾಗಿದೆ. ಅದೇರೀತಿ ಪಂಚಮಸಾಲಿ ಸಮಾಜ ಕೃಷಿಕ ಕಾಯಕದಲ್ಲಿ ತೊಡಗಿಕೊಂಡಿದೆ.ಅಂತರಾಷ್ಟ್ರೀಯ ಯೋಗ ಗುರುಗಳಾದ ಶ್ರೀ ವಚನಾನಂದ ಸ್ವಾಮೀಜಿ ಆಧ್ಯಾತ್ಮಿಕ ಹಾಗೂ ಯೋಗ ವಿದ್ಯೆಯನ್ನು ಪ್ರಪಂಚದಾದ್ಯಂತ ಪಸರಿಸಿ ಲಕ್ಷಾಂತರ ಭಕ್ತ ವರ್ಗ ಹೊಂದಿದ್ದಾರೆ.ಸಮುದಾಯದವರ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಾ ಸರ್ವರಿಗೂ ಸಮಬಾಳು,ಸಮಪಾಲು ನೀಡಲು ಮುಂದಾಗಿದ್ದಾರೆ.ಎಲ್ಲರನ್ನೂ ಒಳಗೊಂಡು ಸಮಾಜದ ಅಭಿವೃದ್ಧಿ ಕೈಗೊಂಡಿದ್ದಾರೆ. ನಮ್ಮ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ಅನುದಾನ ತೆಗೆದಿರಿಸಿದೆ.ಬಸವಾದಿ ಶರಣರ ಸಮಸಮಾಜ ನಿರ್ಮಿಸುವ ಕಾರ್ಯದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು. ಸ್ವಾಭಿಮಾನ, ಸ್ವಾವಲಂಬನೆ, ಸಹಕಾರ,ಸಹಬಾಳ್ವೆ ಯ ಧ್ಯೇಯ ಸಾಕಾರಗೊಳಿಸುವಿದೇ ಹರ ಜಾತ್ರಾ ಮಹೋತ್ಸವದ ಉದ್ದೇಶವಾಗಿದೆ ಅದನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ಈ ವೇಳೆ ಶ್ರೀ ವಚನಾನಂದ ಸ್ವಾಮೀಜಿ, ತುಮಕೂರಿನ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಸಂಸದ ಜಿ.ಎಂ ಸಿದ್ದೇಶ್ವರ್,ಸಚಿವರುಗಳಾದ ಮುರುಗೇಶ್ ನಿರಾಣಿ,ಬಸವರಾಜ್ ಬೊಮ್ಮಾಯಿ,ಅಶೋಕ್, ಶಾಸಕರುಗಳಾದ ಶಂಕರ್ ಪಾಟೀಲ್,ಮಾಡಾಳು ವಿರೂಪಾಕ್ಷಪ್ಪ,ಎಸ್ .ವಿ ರಾಮಚಂದ್ರ, ಅರುಣ್ ಕುಮಾರ್ ,