ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.03: ಐಎಎಸ್ ,ಕೆಎಎಸ್ ಹಾಗೂ ಐಪಿಎಸ್ ಆಗುವ ಇಚ್ಚೆಯುಳ್ಳ ಪಂಚಮಸಾಲಿ ಪ್ರತಿಭಾವಂತ ಬಡ ಮಕ್ಕಳನ್ನು, ಪೀಠದ ಕಾಣಿಕೆಯಲ್ಲಿ ತರಬೇತಿ ಕೊಡಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಪ್ರಸ್ತುತ ವರ್ಷದಿಂದ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರದ ಪಂಚಮಸಾಲಿ ಪೀಠಾದ್ಯಕ್ಷರು ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.
ಪಟ್ಟಣದ ಶ್ರೀ ಮರುಳಸಿದ್ಧೇಶ್ವರ ಸಭಾಂಗಣದಲ್ಲಿ ಪಂಚಮಸಾಲಿ ಸಮಾಜ ಕೊಟ್ಟೂರು ತಾಲೂಕು ಘಟಕ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಸಮಾಜದ ಇರ್ವ ವಿದ್ಯಾರ್ಥಿನಿಯರು ವಾಣಿಜ್ಯ ವಿಭಾಗದಲ್ಲಿ ರ್ಯಾಂಕ್ ಪಡೆದಿದ್ದರು ನಮ್ಮನ್ನು ಪರಿಗಣಿಸುತ್ತಿಲ್ಲ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಯಿಸಿದ ಜಗದ್ಗುರುಗಳು,10ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕ ವ್ಯವಸ್ಥೆ ನರೇಂದ್ರ ಮೋದಿ ಅವರ ಆಗಮನದಿಂದ 5ನೇ ಸ್ಥಾನಕ್ಕೆ ಬಂದು ತಲುಪಿದೆ ಇದಕ್ಕೆ ಕಾರಣ ಸುವ್ಯವಸ್ಥಿತ ವಾಣಿಜ್ಯ ವಿಭಾಗ, ಸುವ್ಯವಸ್ಥಿತ ಆರ್ಥಿಕ ವ್ಯವಸ್ಥೆ ಇಲ್ಲದಿದ್ದರೆ ದೇಶದ ಆಡಳಿತ ಕುಸಿದು ಬೀಳುತ್ತೆ, ಈ ಹಿನ್ನೆಲೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಲ್ಲಿ ಖಿನ್ನತೆ ಭಾವನೆ ಬೇಡ ಎಂದು ಉತ್ತೇಜಿಸಿದರು.
ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ಪೈಲಟ್ ಆಗಬೇಕೆಂದು ಕನಸ್ಸು ಕಂಡವರು ಆದರೆ ಅದು ಅವರಿಗೆ ದೊರೆಯದೆ ಇದ್ದಾಗ, ಬೇರೆ ವಿಷಯವನ್ನು ಆಯ್ಕೆ ಮಾಡಿಕೊಂಡರು ಅವರು ಶ್ರೇಷ್ಠ ವಿಜ್ಞಾನಿ ಆದರು, ಅದೇ ರೀತಿ ವಿದ್ಯಾರ್ಥಿಗಳು ಕೂಡಾ ಕೆಲ ಕೋರ್ಸಿಗೆ ಅಂಟಿಕೊಂಡು ಖಿನ್ನತೆಗೀಡಾಗದೆ ಆಲ್ಟ್ರ್ ನೆಟ್ ಬೇರೆ ಕೋರ್ಸ್ ತೆಗೆದುಕೊಂಡು ಕನಸಿನ ಗುರಿಯತ್ತ, ಹೆಜ್ಜೆ ಹಾಕಬೇಕು. ಕನಸು ಚಿಕ್ಕದಾಗಿರದೆ ದೊಡ್ಡ ಕನಸಿನೊಂದಿಗೆ ಮುನ್ನುಗ್ಗಬೇಕು ಎಂದರು.
ಪ್ರತಿ ವರ್ಷ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಪಂಚಮಸಾಲಿ ಕೊಟ್ಟೂರು ತಾಲೂಕು ಘಟಕದ ಕಾರ್ಯ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಕೀಲರು ಹಾಗೂ ವೀ.ಲಿಂ.ಪಂಚಮಸಾಲಿ ಸಮಾಜದ ವಿಜಯನಗರ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಪಾಟೇಲ್ ಮಾತನಾಡಿ ಮಕ್ಕಳಿಗೆ ಅಂಕ ಪಟ್ಟಿ ಜೊತೆಗೆ ಸಂಸ್ಕಾರದ ಪಾಠಗಳು ಪ್ರಸ್ತುತ ಅವಶ್ಯಕ ವಿದ್ದು ಮಕ್ಕಳನ್ನು ಮೊಬೈಲ್ ಗೀಳಿಗೆ ಬಿಡದೆ, ಪ್ರೀತಿ ವಾತ್ಸಲ್ಯದ ಮೂಲಕ ತಮ್ಮ ಮಕ್ಕಳು ತಮ್ಮೊಡನೆ ಮತ್ತು ನೆರೆವರಿಯವರೊಡನೆ ಕಾಲಕಳೆವಂತ ಪರಿಸರವನ್ನು ನಿರ್ಮಾಣ ಮಾಡಿ ಎಂದು ಹೇಳಿದರು.
ವೀ.ಲಿಂ.ಪಂ.ಸಮಾಜದ ರಾಜ್ಯಗೌರವಾಧ್ಯಕ್ಷರು ಬಾವಿ ಬೆಟ್ಟಪ್ಪ ಮಾತಾನಾಡಿ ಸಮಾಜದ ಮಕ್ಕಳಿಗೆ ಮತ್ತು ವ್ಯಕ್ತಿಗೆ ನೀನು ಎತ್ತರೆತ್ತರಕ್ಕೆ ಬೆಳೆ ನಿನ್ನೊಂದಿಗೆ ಪಂಚಮಸಾಲಿ ಸಮಾಜವಿದೆ ಎಂಬುದೇ ಈ ಪುರಸ್ಕಾರ,20 ವರ್ಷಗಳಿಂದ ನಡೆಸುತ್ತಿದೆ ಇಂತಹ ಪುರಸ್ಕಾರಗಳನ್ನು ಸಮಾಜ, ಆದರೆ ಇಲ್ಲಿ ಪುರಸ್ಕಾರ ಪಡೆದು ಗೌರವಯುತ ಸ್ಥಾನದಲ್ಲಿದ್ದರು, ಒಬ್ಬರು ಇದುವರೆಗೂ ಸಮಾಜದ ಪುರಸ್ಕಾರಕ್ಕೆ ಸಹಾಯ ಹಸ್ತ ನೀಡಲು ಮುಂದೆ ಬರೆದಿರುವುದು ವಿಪರ್ಯಾಸ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜದ ಅಕ್ಕಿ ಶಿವಣ್ಣ ಹಗರಿಬೊಮ್ಮನಹಳ್ಳಿ ತಾ.ಅಧ್ಯಕ್ಷ,ಡಿ.ಶಿವಚರಣ,ರಾಜ್ಯ ಪ್ರತಿನಿಧಿ, ಕನ್ನಿಹಳ್ಳಿ ಕಸ್ತೂರಿ ಪಾಟೀಲ್ ತಾ.ಸದಸ್ಯರು ಕೊಟ್ಟೂರು, ವೀಣಾ ವಿವೇಕನಂದಗೌಡ ಪ.ಪಂ ಸದಸ್ಯರು ಕೊಟ್ಟೂರು ಮಾತನಾಡಿದರು.
ಚಾಪಿಚಂದ್ರಪ್ಪ ತಾ.ಘಟಕ ಅಧ್ಯಕ್ಷರು ಕೊಟ್ಟೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಪಂಚಮಸಾಲಿ ಸಮಾಜದ ಪ್ರಗತಿಪರ ರೈತರನ್ನು ಮತ್ತು ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ 48 ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಮರಬದ ಶಿವಣ್ಣ, ಕೊಟ್ಟೂರು ತಾ.ಘಟಕದ ಕಾರ್ಯದರ್ಶಿ ಹೆಚ್.ಅಶೋಕ್, ಖಜಾಂಚಿ ಕೆ.ಹೆಚ್.ಕಲ್ಲೇಶಪ್ಪ, ಶೆಟ್ಟಿ ರಾಜಶೇಖರ್, ವಿವೇಕಾನಂದ ರಾಂಪುರ,ಉಪಾಧ್ಯಕ್ಷ ವೀ.ಬ್ಯಾಂಕ್, ಮಲ್ಲೇಶಪ್ಪ ಹುಲ್ಲುಮನಿ, ಎಸ್.ಎಸ್.ಅಶೋಕ ಇಂಜಿನಿಯರ್, ಬಸಾಪುರದ ಪಂಪಾಪತಿ, ಉಮಾದೇವಿ ದೇವರ ಮನಿ, ಡಾ.ರಾಕೇಶ್, ನಿವೃತ್ತ ಪ್ರಾಧ್ಯಾಪಕರು ಮಲ್ಲಿಕಾರ್ಜುನ, ನಿವೃತ್ತ ಉಪ ತಹಶಿಲ್ದಾರ ನಾಗರಾಜ್, ಸೇರಿದಂತೆ ಇತರರು ಇದ್ದರು.
ಮಂಜುನಾಥ ಸ್ವಾಗತಿಸಿದರು, ಹಳ್ಳಿ ಆನಂದ ಶಿಕ್ಷಕರು ನಿರೂಪಣೆ ಮಾಡಿದರು, ಕೋಡಿಹಳ್ಳಿ ವೀರಭದ್ರಪ್ಪ ಶಿಕ್ಷಕರು ವಂದಿಸಿದರು.