ಪಂಚಮಸಾಲಿ ಪೀಠದಲ್ಲಿ ಹರಜಾತ್ರಾ ಮಹೋತ್ಸವದ ಪೂರ್ವ ಸಿದ್ಧತೆ

ಹರಿಹರ.ಜ.೧೨; ಸ್ವಾವಲಂಬಿ, ಭೂ ತಪಸ್ವಿಿ, ಯುವರತ್ನ ಸಮಾವೇಶ ಹಾಗೂ ಉದ್ಘಾಟನೆ ಕಾರ್ಯಕ್ರಮವು ಜ 14–15ರಂದು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯವರು ಸೂಕ್ತ ಬಂದೋಬಸ್ತ್ ಮಾಡುವ ಹಿನ್ನೆಲೆಯಲ್ಲಿ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಡಿವೈಎಸ್ಪಿ ವೃತ್ತ ನಿರೀಕ್ಷಕರು, ಮಠದ ಶ್ರೀಗಳು ಸ್ಥಳ ಪರಿಶೀಲನೆ ನಡೆಸಿದರುಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ರಾಜೀವ್, ಡಿವೈಎಸ್ಪಿ ನರಸಿಂಹ ವಿ ತಾಮ್ರಧ್ವಜ, ವೃತ್ತ ನಿರೀಕ್ಷಕರಾದ ಸತೀಶ್ ಕುಮಾರ್ ಯು, ಪಿಎಸ್ಸೈಗಳಾದ ವೀರಬಸಪ್ಪ ಕುಸಲಾಪುರ,ಡಿ ರವಿಕುಮಾರ್ .ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು, ಪೂಜಾರ್ ಚಂದ್ರಶೇಖರ್, ಕರಿಬಸಪ್ಪ ,ಬಿ ಲೋಕೇಶ್ ಮಠದ ಧರ್ಮದರ್ಶಿಗಳು ಇತರರು ಇದ್ದರುಜ.14 ರ ಸ್ವಾವಲಂಬಿ ಸಮಾವೇಶ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಸಿದ್ಧಗಂಗಾಮಠದ ಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸುವರು ಸಂಕ್ರಾಂತಿ ಸಂಭ್ರಮದ ಉದ್ಘಾಟನೆಯನ್ನು  ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ನೆರವೇರಿಸುವರು, ನಿಕಟಪೂರ್ವ ಮುಖ್ಯಮಂತ್ರಿಗಳು ದೇವೇಂದ್ರ ಫಡ್ನವಿಸ್,ಉಪ ಮುಖ್ಯಮಂತ್ರಿ ಸಿಎಸ್ ಅಶ್ವತ್ ನಾರಾಯಣ್ .ಶಂಕರ್ ಪಾಟೀಲ್. ಮುನೇನಕೊಪ್ಪ ಸಿಟಿ ರವಿ .ಪ್ರಹ್ಲಾದ್ ಜೋಷಿ .ಕೆ ಎಸ್ ಈಶ್ವರಪ್ಪ ರಮೇಶ್ ಜಾರಕಿಹೊಳೆ .ಬೈರತಿ ಬಸವರಾಜ್ ಇನ್ನೂ ಅನೇಕ ಸಚಿವರು ಶಾಸಕರುಗಳು ಭಾಗವಹಿಸಲಿದ್ದಾರೆ 
ಜ15 ರ ಯುವ ರತ್ನ ಸಮಾವೇಶದಲ್ಲಿ ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಯುವರತ್ನ ಸಂದೇಶ ನೀಡಲಿದ್ದಾರೆ  ಬಿ ವೈ ವಿಜಯೇಂದ್ರ ಸಿ ಪಿ ಯೋಗೇಶ್ವರ್ ಶಶಿಕುಮಾರ್. 2 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಜರ್ಮನಿ ಮಾದರಿಯಲ್ಲಿ 80–30  ಅಳತೆಯ ವೇದಿಕೆ 2 5 –30 ಸಾವಿರದವರೆಗೂ ಆಸನಗಳ ವ್ಯವಸ್ಥೆ ಹತ್ತು ಎಕರೆ ಜಾಗದಲ್ಲಿ ವಾಹನಗಳ ನಿಲುಗಡೆಗೆ ಹಾಗೂ 2ದಿನಗಳ ಕಾಲ ಜಾತ್ರೆಯಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯಲ್ಲಿ ಐವತ್ತು ಕ್ಕೂ ಹೆಚ್ಚು ಕೌಂಟರ್ ಗಳನ್ನು ಸಿದ್ಧತೆ ಮಾಡಲಾಗಿದೆ.ಹರಿಹರದ ಪಂಚಮ ಸಾಲಿ ಪೀಠದಲ್ಲಿ ಧರ್ಮ ಶಕ್ತಿಕೇಂದ್ರದಲ್ಲಿ ವೈಚಾರಿಕ ವಿಚಾರವಾಗಿ ಹರ ಜಾತ್ರಾ ಮಹೋತ್ಸವ ನಡೆಯಲಿದ್ದು ಪ್ರತಿಯೊಬ್ಬರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಎಂದು ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬಿ ಲೋಕೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಧರ್ಮ ದರ್ಶಿ ಚಂದ್ರಶೇಖರ್ ಪೂಜಾರ್. ಎಂ ಜಿ ನಾಗನಗೌಡ್ರು ಕರಿಬಸಪ್ಪ ಸಮಿತಿಯ ಸದಸ್ಯರುಗಳು ಪೀಠದ ಭಕ್ತವೃಂದದವರು ಇದ್ದರು