ಪಂಚಮಸಾಲಿ ಪೀಠಕ್ಕೆ,
ಬೆಳ್ಳಿ ಸಿಂಹಾಸನ ಸಮರ್ಪಿಸಿದ ಕೂಡ್ಲಿಗಿ ಬಂಗಾರು ಹನುಮಂತು .  


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ. 16 :-  ಸಂಕ್ರಾಂತಿ ಹಬ್ಬದ ಪ್ರಯುಕ್ತ  ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಹರಿಹರದಲ್ಲಿ ಜರುಗಿದ  “ಹರ ಜಾತ್ರೆ” ಮಹೋತ್ಸವದಲ್ಲಿ ಕೂಡ್ಲಿಗಿಯ ವಾಲ್ಮೀಕಿ ಸಮಾಜದ ಯುವನಾಯಕ ಹಾಗೂ ಬಿಜೆಪಿಯ ಎಸ್ಟಿ ಮೋರ್ಚಾದ ರಾಜ್ಯ ಘಟಕದ ಕೋಶಾಧ್ಯಕ್ಷರಾದ  ಬಂಗಾರು  ಹನುಮಂತು ಕುಟುಂಬ  18 ಕೆಜಿ ತೂಕದ ಬೆಳ್ಳಿ ಸಿಂಹಾಸನ ಸಮರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ  ಕೇಂದ್ರ ಸಚಿವ ಪ್ರಹ್ಲಾದಜೋಶಿ,ಕೂಡ್ಲಿಗಿ ತಾಲೂಕಿನ ಪಂಚಮಸಾಲಿ ಸಮಾಜದ ಗುಳಿಗಿ ವೀರೇಂದ್ರ ಸೇರಿದಂತೆ ಅನೇಕ ಬಂಧುಗಳು ಹಾಗೂ ಕೂಡ್ಲಿಗಿ ತಾಲ್ಲೂಕಿನ ಎಲ್ಲಾ ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.  ಬೆಳ್ಳಿ ಸಿಂಹಾಸನ ಸಮರ್ಪಿಸಿದ ಬಂಗಾರು ಹನುಮಂತುಗೆ ಹಾಗೂ ಅವರ ಕುಟುಂಬಕ್ಕೆ ಪಂಚಮಸಾಲಿ ಗುರುಪೀಠದ ಶ್ರೀ ಗಳು ಸನ್ಮಾನಿಸಿ, ಆಶೀರ್ವದಿಸಿದರು.