ಪಂಚಮಸಾಲಿ ಘಟಕದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ದಾವಣಗೆರೆ.ಮಾ.೨೯;  ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕ ವತಿಯಿಂದ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಗರದ ಪಿಜೆ ಬಡಾವಣೆಯ ಚೇತನ ಹೋಟೆಲ್ ರಸ್ತೆಯಲ್ಲಿರುವ ಪಂಚಮಸಾಲಿ ಸಮಾಜದ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರಶ್ಮಿ ನಾಗರಾಜ್ ಕುಂಕೋದ್, ವಹಿಸಿದ್ದರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಈ ವರ್ಷದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಶ್ರೀಮತಿ ಕಂಚಿಕೇರಿ ಸುಶೀಲಮ್ಮನವರು, ಮತ್ತೋರ್ವ ಅತಿಥಿಗಳಾದ ಡಾ.ಪುಷ್ಪಲತಾ ಇವರು ಸಾಧನ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಹಾಗೂ ಸಹಕಾರ ಸಂಘ ವೃದ್ರಾಶ್ರಮ ಮತ್ತು ಬಹುಮುಖ ಪ್ರತಿಭೆಯನ್ನು ಉಳ್ಳವರಾಗಿದ್ದಾರೆ. ಮತ್ತು ಸಮಾಜದ ಹಿರಿಯ ಮುಖಂಡರಾದ ಶ್ರೀಮತಿ ನೀಲಗುಂದ ಜಯಮ್ಮ ರವರು ಶ್ರೀಮತಿ ಮುಂಡಾಸ್ ಸರೋಜಮ್ಮನವರು ಭಾಗವಹಿಸಿದ್ದರು, ಮಹಿಳಾ ದಿನಾಚರಣೆ ಅಂಗವಾಗಿ ಕೋವಿಡ್ 19 ( ಕೋರೋನ) ವೈರಸ್ ನಂತಹ ವಿರುದ್ಧ ಹೋರಾಡುತ್ತಿರುವ ಜಿಲ್ಲಾ ಆಸ್ಪತ್ರೆಯ ಹೆಡ್ ನರ್ಸ್ಗಳಾದ ಶ್ರೀಮತಿ ಉಮಾ ಹಾಗೂ ಶ್ರೀಮತಿ ಪುಷ್ಪ ವಾಲಿ ಇವರುಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಗರದ ಅಧ್ಯಕ್ಷರಾದ ಶ್ರೀಮತಿ ವಾಣಿ ಗುರು ಮತ್ತು ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ಕೊಟ್ರೇಶ್ ರವರು ಮತ್ತು ನಗರ ಘಟಕದ ಕಾರ್ಯದರ್ಶಿಯಾದ ಶ್ರೀಮತಿ ಶಶಿಕಲಾ ಶಿವಲಿಂಗಪ್ಪ ನವರು ವೇದಿಕೆ ಮೇಲೆ ಉಪಸ್ಥಿತರಿದ್ದರು, ಕಾರ್ಯಕ್ರಮ ನಿರುಪಣೆಯನ್ನು ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ವೀಣಾ ನಟರಾಜ್ ಬೆಳ್ಳೂಡಿ, ಶ್ರೀಮತಿ ಉಮಾ ಸೋಮಶೇಖರ್ ನೆರವೇರಿಸಿದರು ಪ್ರಾರ್ಥನೆಯನ್ನು ಜಿಲ್ಲಾ ಸಹ ಕಾರ್ಯದರ್ಶಿಯಾದ ಶ್ರೀಮತಿ ಶೈಲಾ, ಪ್ರಸ್ತಾವನೆಯನ್ನು ಶ್ರೀಮತಿ ಸುಷ್ಮಾ ಪಾಟೀಲ್ ರವರು ನೆರವೇರಿಸಿದರು. ಹಾಗೂ ಅಧ್ಯಕ್ಷೀಯ ಭಾಷೆಯನ್ನು ಶ್ರೀಮತಿ ರಶ್ಮಿ ನಾಗರಾಜ್ ರವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಸದಸ್ಯರು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.