ಪಂಚಗಿರಿ ಶಾಲೆಯಲ್ಲಿ ಸಾಂಸ್ಕೃತಿಕ ದಿನ ಆಚರಣೆ

ಚಿಕ್ಕಬಳ್ಳಾಪುರ, ಜು. ೨೧- ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ದತ್ತಿಗಳಲ್ಲಿ ಒಂದಾದ ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ವತಿಯಿಂದ ನಗರದ ಪಂಚಗಿರಿ ಭೋದನಾ ಪ್ರೌಢಶಾಲೆಯಲ್ಲಿ ಸಿಬ್ಬಂದಿ ವರ್ಗಕ್ಕಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ದಿನಾಚರಣೆ ಕಾರ್ಯಕ್ರಮ ಸಾಂಸ್ಕೃತಿಕ ಕಲಾ ವೈಭವಗಳೊಂದಿಗೆ ಅದ್ದೂರಿಯಾಗಿ ಉದ್ಘಾಟನೆ ಗೊಂಡಿತು.
ಶ್ರೀ ಕೆ.ವಿ. ಮತ್ತು ಪಂಚ ಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ನವೀನ್ ಕಿರಣ್ ರವರು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ಜಿಲ್ಲೆಯ ರಾಜಕೀಯ ಭೀಷ್ಮ ಹಾಗೂ ಶಿಕ್ಷಣ ತಜ್ಞ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣದ ದತ್ತಿಗಳ ಸಂಸ್ಥಾಪಕ ಅಧ್ಯಕ್ಷರಾದ ಸಿ.ವಿ. ವೆಂಕಟರಾಯಪ್ಪ ರವರು ಕಂಡ ಕನಸನ್ನು ನಿಮ್ಮೆಲ್ಲರ ಸಹಕಾರದಿಂದ ನನಸು ಮಾಡಲು ನಿರಂತರ ಶ್ರಮ ವಹಿಸಿದ್ದು ಇಂದು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಪರ್ಧೆ ಮಾಡುವ ಎಲ್ಲರೂ ಬಹುಮಾನಗಳ ಕಡೆ ಗಮನ ನೀಡದೇ ಉತ್ತಮ ಪ್ರತಿಭಾ ಪ್ರದರ್ಶನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ತತ್ತಿಗಳ ಹಿರಿಯ ಸದಸ್ಯ ಬಿ. ಮುನಿಯಪ್ಪ ಶ್ರೀಮತಿ ನಿರ್ಮಲಾ ಪ್ರಭು ಹಾಗೂ ದತ್ತಿ ಆಡಳಿತಾಧಿಕಾರಿ ಡಾ. ಸಾಯಿ ಪ್ರಭು ಶ್ರೀಮತಿ ಸುಜಾತ ಕಿರಣ್ ನಗರದ ಪ್ರಮುಖ ವಾಣಿಜ್ಯೋದ್ಯಮಿ ಬಿ. ಮಹೇಶ್ ಎಲ್ಲ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರುಗಳು ಬೋಧಕ ಮತ್ತು ಬೋಧಕ್ಕೆ ತರ ಸಿಬ್ಬಂದಿ ವರ್ಗ ಹಾಗೂ ದತ್ತಿ ಕಾರ್ಯಕ್ರಮಗಳ ಸಂಚಾಲಕ ಆರ್. ವೆಂಕಟೇಶ್ ದತ್ತಿ
ಪಿ.ಆರ್. ಓ. ಅರಸನಹಳ್ಳಿ ವೆಂಕಟೇಶ್ ಒಳಗೊಂಡಂತೆ ಮತ್ತಿತರರು ಭಾಗವಹಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಏರ್ಪಡಿಸಿದ ಹುಲಿ ವೇಷ ಹಾಗೂ ಸಲಂಕೃತ ಸಂಪ್ರದಾಯ ಪದ್ಧತಿ ಕಳಶ ವತ್ತಶೋಭಾ ಮೆರವಣಿಗೆ ಆಕರ್ಷಣೀಯವಾಗಿ ಮೂಡಿಬಂದಿತು ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ದತ್ತಿ ವತಿಯಿಂದ ನಡೆಯುತ್ತಿದೆ