ಪಂಚಗವ್ಯ ಉಚಿತ ತಪಾಸಣೆ ಶಿಬಿರ 4 ರಂದು

ಬೀದರ್:ಮಾ.2: ತಾಲ್ಲೂಕಿನ ನಾಗೋರಾದ ಕಾಮಧೇನು ಗೋ ಶಾಲೆಯಲ್ಲಿ ಮಾರ್ಚ್ 4 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ಪಂಚಗವ್ಯ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ತಮಲೂರಿನ ಶಿವಾನಂದ ಶಿವಾಚಾರ್ಯರು ಶಿಬಿರಕ್ಕೆ ಚಾಲನೆ ನೀಡುವರು. ಆಯುರ್ವೇದ ಪಂಚಗವ್ಯ ತಜ್ಞ ಡಾ. ಡಿ.ಪಿ. ರಮೇಶ ಅವರು ತಪಾಸಣೆ ನಡೆಸುವರು.
ಶಿಬಿರದಲ್ಲಿ ರುಮಾಟೈಡ್ ಅರ್ಥೈಟಿಸ್, ಅಸ್ತಮಾ, ಸಿಒಪಿಡಿ, ಬುದ್ಧಿ ಮಾಂದ್ಯತೆ, ರಕ್ತದೊತ್ತಡ, ಮಧುಮೇಹ, ಸೋರಿಯಾಸಿಸ್, ಚರ್ಮರೋಗ, ಮರೆವು, ಕರುಳು, ಜಠರದ ಸಮಸ್ಯೆ, ಪೈಲ್ಸ್, ಪಿಸ್ತುಲಾ, ಸೈನೋಸೈಟಿಸ್, ಮೈಗ್ರೇನ್ ಅಲ್ಸರೆಟಿವ್ ಕೊಲೈಟಿಸ್, ಅಲರ್ಜಿ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಗರ್ಭ ಕೊರಳಿನ ಕ್ಯಾನ್ಸರ್, ದೊಡ್ಡ ಕರುಳಿನ ಕ್ಯಾನ್ಸರ್, ಪೆÇ್ರಸ್ಟೆಡ್ ಕ್ಯಾನ್ಸರ್, ಮೂತ್ರ ಚೀಲದ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್, ಗುದನಾಳ ಕ್ಯಾನ್ಸರ್ ತಪಾಸಣೆ ಮಾಡಲಾಗುವುದು.
ಜಿಲ್ಲೆಯ ರೋಗಿಗಳು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಕಾಮಧೇನು ಗೋ ಶಾಲೆಯ ಮುಖ್ಯಸ್ಥರು ಮನವಿ ಮಾಡಿದ್ದಾರೆ.
ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7411993300 (ಶಿವಕುಮಾರ ಹಿರೇಮಠ) ಅಥವಾ 9449829468 (ಸಿ.ಬಿ. ರೆಡ್ಡಿ) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.