ಪಂಚಗವ್ಯದಿಂದ ಪರಿಹಾರವಾಗದ ರೋಗಗಳ ನಿವಾರಣೆ

ಬೀದರ್: ಜು.20:ಸಿದ್ದಾರಾಮೇಶ್ವರ ಆಯುರ್ವೇದ ಕಾಲೇಜ ಮತ್ತು ಸಿದ್ಧಾರೂಡ ಆಯುರ್ವೇದ ಕಾಲೇಜ ಬೀದರ್‍ನಲ್ಲಿ ಸ್ವಾವಲಂಬಿ ಭಾರತ ಅಭಿಯಾನದ ಪ್ರಯುಕ್ತ ಉತ್ತರ ಪ್ರಾಂತ ಗೋ ಸೇವಾ ಆಯಾಮ ಟೋಲಿ ಸದಸ್ಯ ಡಾ. ಡಿ ಪಿ ರಮೇಶ್ ಅವರು ಗೋ ಆಧಾರಿತ ಜೀವನ ಮತ್ತು ಆಯುರ್ವೇದ ಪಂಚಗವ್ಯ ಚಿಕಿತ್ಸಾ ಪದ್ಧತಿ ಕುರಿತು ಉಪನ್ಯಾಸ ನೀಡಿದರು.

ಪಂಚಗವ್ಯ ಉಪಯೋಗದಿಂದ ಇಂದು ನಾವೆಲ್ಲರೂ ಎದುರಿಸುತ್ತಿರುವ ಪರಿಹಾರವಾಗದ ರೋಗಗಳು ಯಾವ ರೀತಿಯಲ್ಲಿ ಬಹಳ ಕಡಿಮೆ ಖರ್ಚಿನಲ್ಲಿ ಸಮಾಧಾನ ಪಡೆದುಕೊಳ್ಳಬಹುದು ಅನ್ನುವ ಬಗ್ಗೆ ತಿಳಿಸಿದರು. ಡಾ ಡಿ ಪಿ ರಮೇಶ್ ಅವರನ್ನು ತಮ್ಮ ಸುದೀರ್ಘ 25 ವರ್ಷಗಳ ಆಯುರ್ವೇದ ಪಂಚಗವ್ಯ ಚಿಕಿತ್ಸಾ ಸೇವೆಗಾಗಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸ್ವಾವಲಂಬಿ ಭಾರತ ಅಭಿಯಾನ ಉತ್ತರ ಪ್ರಾಂತ ಸಮನ್ವಯ ಸಹ ಪ್ರಮುಖರಾದ ಸಿ ಬಿ ರೆಡ್ಡಿ ಉಪಸ್ಥಿತರಿದ್ದರು.
ಈ ಎರಡು ಕಾಲೇಜುಗಳಲ್ಲಿ ಉಪನ್ಯಾಸ ಯೆಶಸ್ವಯಾಗಿ ನಡೆಯಿತು. ಡಾಕ್ಟರ್ಸ್ ಹಾಗು ವಿದ್ಯಾರ್ಥಿಗಳಿಂದ ಒಳ್ಳೆಯ ರೆಸ್ಪೋನ್ಸ್ ದೊರೆಕಿದೆ ಎಂದು ಸ್ವಾವಲಂಬಿ ಭಾರತ ಅಭಿಯಾನದ ಜಿಲ್ಲಾ ಪ್ರಮುಖರಾದ ಸಚ್ಚಿದಾನಂದ್ ಚಿದ್ರೆ ಪ್ರಕಣೆಯಲ್ಲಿ ತಿಳಿಸಿದ್ದಾರೆ.