ಪಂಗರಗಾ ಸೋನಾಲಗಿರಿ: ನಾಳೆ ಗುರುವಂದನಾ ಕಾರ್ಯಕ್ರಮ

ಚಿಂಚೋಳಿ,ಜು.12- ತಾಲ್ಲೂಕಿನ ಪಂಗರಗಾ ಗ್ರಾಮದ ಸೋನಾಲಗಿರಿ ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜರ ನೇತೃತ್ವದಲ್ಲಿ ನಾಳೆ ಜು.13ರಂದು ಗುರು ಪೂರ್ಣಿಮಾ ಪ್ರಯುಕ್ತ ನಾಳೆ ಬೆಳಿಗ್ಗೆ 11 ಗಂಟೆಗೆ ಗುರುವಂದಾನಾ
ಕಾರ್ಯಕ್ರಮ ಹಾಗೂ ಅಖಿಲ ಕರ್ನಾಟಕ ಬಂಜಾರ ಸಮಾಜದಿಂದ
ಧರ್ಮ ಗುರುಗಳ ಮಹಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಮಾಜಿ ಸದಸ್ಯ ಪ್ರೇಮಸಿಂಗ್ ಜಾಧವ, ಅವರು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಹಾಗೂ ತೆಲಂಗಾಣ ಆಂಧ್ರ ಪ್ರದೇಶ್ ಹಾಗೂ ಕರ್ನಾಟಕ ವಿವಿಧ ಜಿಲ್ಲೆಗಳಿಂದ ಭಕ್ತರು ಸೇರಿ ವಿವಿಧ ರಾಜ್ಯದ ಧರ್ಮಗುರುಗಳು ಆಗಮಿಸುತ್ತಿದ್ದಾರೆ, ಆದರಿಂದ ಎಲ್ಲಾ ಸಮಾಜದ ಮುಖಂಡರು, ಸಮಾಜ ಸೇವಕರು, ಸಮಾಜದ ಗಣ್ಯರು ಮುಖಂಡರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪ್ರೇಮಸಿಂಗ್ ಜಾಧವ, ಅವರು ಮನವಿ ಮಾಡಿದ್ದಾರೆ