ನ20 ರಂದು ಪರಿಸರ ಸಮಾವೇಶ

ಹುಬ್ಬಳ್ಳಿ,ನ15 : ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ವತಿಯಿಂದ ನವೆಂಬರ್ 20 ರಂದು ಪರಿಸರ ಸಮಾವೇಶವನ್ನು ಮಡಿಕೇರಿ ಕೊಡಗಿನ ಗಾವದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಮ್ಯಾನೆಜಕಂಗ್ ಟ್ರಸ್ಟಿ ಶಮ್ಮಿ ಸಿರಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಈ ಸಮಾವೇಶವು ಅಂದು ಬೆ. 9.30 ರಿಂದ ಸಂಜೆ 6 ಗಂಟೆಯವರೆಗೆ ಇರಲಿದೆ ಎಂದು ಅವರು, ಈಗಾಗಲೇ ಸುಮಾರು 500 ಸದಸ್ಯರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೆರೆ ಪುನರುಜ್ಜೀವನ ಕುರಿತು ಡೇವಿಡ್ ಕುಮಾರ್, ಚಿಟ್ಟೆಗಳ ಜೀವನ ಕುರಿತು ಸುಮ್ಮಿಲನ ಶೆಟ್ಟಿ, ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆ ಕುರಿತು ದಿವ್ಯಾ ಹೆಗಡೆ, ಸಾವಯವ ಕೃಷಿ ಕುರಿತು ಮಧುಚಂದನ್, ಜಲ ಸಂರಕ್ಷಣೆ ಕುರಿತು ರಾಜೇಂದ್ರ ಕಲಬಾವಿ ಸೇರಿದಂತೆ ಇತರರು ಯೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೋಹನ್ ಶಿರಿ, ಶಮಿ ಸಿರಿ, ಮಂಜುಳಾ ಪಾಟೀಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.