ನ. 8 ರಂದು ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಕೌನ್ಸಿಲಿಂಗ್

ಕಲಬುರಗಿ.ನ.4:ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಗರಿಷ್ಠ ಸೇವಾ ಅವಧಿ 5 ವರ್ಷ ಪೂರ್ಣಗೊಳಿಸಿದ (ಅಧಿಸೂಚಿತ ಹುದ್ದೆಗಳಿಗೆ) ಗ್ರೂಪ್-‘ಬಿ’ ಅಧಿಕಾರಿಗಳನ್ನು ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಇದೇ ನವೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಕೌನ್ಸಿಲಿಂಗ್ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-ಬಿ ವೃಂದದ ಅಧಿಸೂಚಿತ ಹುದ್ದೆಗಳಾದ ಉಪ ನಿರ್ದೇಶಕರು (ಆಡಳಿತ)ದ ಬಿ.ಆರ್.ಸಿ ಸಮನ್ವಯಾಧಿಕಾರಿಗಳು ಮತ್ತು ಸಹ ನಿರ್ದೇಶಕರು(ಆಡಳಿತ) ಕಚೇರಿಗಳಲ್ಲಿರುವ ವಿಷಯ ಪರಿವೀಕ್ಷಕರು, ಡಿ.ವೈ.ಪಿ.ಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಪಿ.ಸಿ., ತಾಲೂಕಾ ಪಂಚಾಯತ ಕಚೇರಿಯಲ್ಲಿನ ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ದಿನಾಂಕ: 11/11/2020ಕ್ಕೆ ಗರಿಷ್ಠ ಸೇವಾ ಅವಧಿ 5 ವರ್ಷ ಪೂರ್ಣಗೊಳಿಸಿದ ಗ್ರೂಪ್-‘ಬಿ’ ಅಧಿಕಾರಿಗಳನ್ನು ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಮೇಲ್ಕಂಡ ದಿನದಂದು ಕೌನ್ಸಿಲಿಂಗ್ ಹಮ್ಮಿಕೊಳ್ಳಲಾಗಿದೆ.
ಅಧಿಸೂಚಿತ ಹುದ್ದೆಗಳಿಗೆ ದಿನಾಂಕ: 11/11/2020 ರಂದು ಗರಿಷ್ಠ ಸೇವಾವಧಿ 5 ವರ್ಷ ಪೂರ್ಣಗೊಳಿಸಿದ ಗ್ರೂಪ್-ಬಿ ಮುಖ್ಯ ಶಿಕ್ಷಕರ/ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಆದ್ಯತಾ ಪಟ್ಟಿಯನ್ನು ಇಲಾಖೆಯ cpikalaburgi.karnataka.gov.in ವೆಬ್‍ಸೈಟ್‍ನಲ್ಲಿ ದಿನಾಂಕ: 04-11-2021 ರಂದು ಪ್ರಕಟಿಸಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮೇಲ್ಕಂಡ ದಿನದಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಸಮಯಕ್ಕೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಪ್ರಾಕ್ಸಿ ಕೌನ್ಸಿಲಿಂಗ ಮೂಲಕ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.