ನ.8ರಂದು ಚಿಂತನ-ಮಂಥನ ಗೋಷ್ಠಿ


ದಾವಣಗೆರೆ ನ.6: ಬೆಂಗಳೂರಿನ ಸಮಾಜವಾದಿ ಅಧ್ಯಯನ ಕೇಂದ್ರ, ಅಪ್ನಾ ಭಾರತ್ ಮೋರ್ಚಾ ಹಾಗೂ ಪ್ರಗತಿಪರ ಒಕ್ಕೂಟದ ಆಶ್ರಯದಲ್ಲಿ ನ.8ರಂದು ನಗರದ ರೋಟರಿ ಬಾಲ ಭವನದಲ್ಲಿ ಜನಪರ ಹೋರಾಟ ಚಳವಳಿಗಳು ಮತ್ತು ಚುನಾವಣಾ ರಾಜಕಾರಣ ಕುರಿತು ಚಿಂತನ-ಮAಥನ ಗೋಷ್ಠಿ ಆಯೋಜಿಸಲಾಗಿದೆ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಚಿಂತನ-ಮಂಥನದಲ್ಲಿ ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡ್ಡಿ ಪ್ರಸ್ತಾವನೆ ಮಂಡಿಸಲಿದ್ದಾರೆ. ಅಪ್ನಾ ಭಾರತ್ ಮೋರ್ಚಾದ ರಾಷ್ಟಿçÃಯ ಸಂಚಾಲಕ ಅಶೋಕ್ ತನ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೇಖಿಕಿ ಬಿ.ಟಿ.ಲಲಿತ ನಾಯ್ಕ್, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಭಾಗವಹಿಸಲಿದ್ದಾರೆ. ನವದೆಹಲಿ ಜಾಮೀಯಾ ಮಿಲಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಿ.ಕೆ.ಗಿರಿ, ಸಮಾಜ ಪರಿವರ್ತನಾ ವೇದಿಕೆಯ ಬಿ.ಗೋಪಾಲ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಬಿ.ರಾಮಚಂದ್ರಪ್ಪ ವಿಚಾರ ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಾದಾಪೀರ್ ನವೀಲೆಹಾಳ್, ಹುಚ್ಚವ್ವನಹಳ್ಳಿ ಮಂಜುನಾಥ್, ಬಲ್ಲೂರು ರವಿಕುಮಾರ್, ನೂಲೇನೂರು ಎಂ.ಶAಕರಪ್ಪ, ಕೊಟ್ರಪ್ಪ ಬಿ.ಮುಗ್ದಂ, ಈಚಘಟ್ಟ ಸಿದ್ದವೀರಪ್ಪ, ಮಲ್ಲಿಕಾರ್ಜುನ ಬಳ್ಳಾರಿ, ಶಿವಾನಂದ ಕುಗ್ವೆ, ಪೂಜಾರ್ ಅಂಜಿನಪ್ಪ, ಪ್ರಭುಗೌಡ, ನಂದಿತಾವರೆ ಮುರುಗಯ್ಯ, ಜಯದೇವನಾಯ್ಕ್, ರೂಪಾನಾಯ್ಕ್, ಮೌಲಾನಾಯ್ಕ್, ಕಲೀಂ ಪಾಷಾ, ಅನೀಶ್ ಪಾಷಾ, ಅಬ್ಬಣ್ಣಿ ಶಿವಪ್ಪ, ಆವರಗೆರೆ ಉಮ್ಮೇಶ್, ಐರಣಿ ಚಂದ್ರು, ಅರುಣ್‌ಕುಮಾರ್, ಚಿತ್ರದುರ್ಗದ ಮೆಹಬೂಬ್ ಬಾಷಾ, ಹೊನ್ನಾಳ್ಳಿ ಅನುಸೂಯಮ್ಮ, ನಲ್ಲೂರು ಪ್ರೇಮ, ಗಂಗಮ್ಮ, ಸಾಹೀರಾ ಬಾನು, ಕುಂದೂರು ರೇಖಾ, ಆವರಗೆರೆ ರುದ್ರಮುನಿ, ಕೈದಾಳ್ ಮಂಜುನಾಥ್, ಅಣಬೇರು ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಬಲ್ಲೂರು ರವಿಕುಮಾರ್, ಇ.ಶ್ರೀನಿವಾಸ್, ಮೌಲಾನಾಯ್ಕ್, ಪೂಜಾರ್ ಅಂಜಿನಪ್ಪ, ರಾಜೇಶ್ ರ‍್ಲಿಗೆ ಇನ್ನಿತರರಿದ್ದರು.