ನ.8ರಂದು ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶ

ರಾಯಚೂರು.ನ.5-ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಕೈಬಿಡುವಂತೆ ಒತ್ತಾಯಿಸಿ ನ.8ರಂದು ಕಾರ್ಮಿಕ ಸಂಘಗಳ ಜಂಟಿ ಸಮಿತಿ ಜಿಲ್ಲಾ ಘಟಕದ ವತಿಯಿಂದ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶವನ್ನು ಅಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿಯ ಜಿಲ್ಲಾಧ್ಯಕ್ಷ ಎನ್.ಎಸ್. ವೀರೇಶ್ ಅವರು ಹೇಳಿದರು.
ಅವರಿಂದು ಸುದ್ದಿಗರೊಂದಿಗೆ ಮಾತಾನಡುತ್ತಾ ಕೇಂದ್ರ ಬಿಜೆಪಿ ಸರ್ಕಾರವು ಜಾರಿ ಮಾಡಲು ಹೊರಟಿರುವ ಕಾರ್ಮಿಕ ವಿರೋದಿ ಸಂಘಗಳನ್ನು ಕೈಬಿಡುವಂತೆ ನ.26 ರಂದು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನ.8 ರಂದು ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶವನ್ನು ಅಮ್ಮಿಕೊಳ್ಳಲಾಗಿದೆ,
ಕೋವಿಡ್19 ಪಿಡುಗು ನಮ್ಮ ದೇಶದ ಕಾರ್ಮಿಕ ವರ್ಗದ ಜನರ ಬದುಕಿನಲ್ಲಿ ಹಿಂದೆಂದು ಇಲ್ಲದಂತಹ ಬಿರುಗಾಳಿಯನ್ನು ಎಬ್ಬಿಸಿ ದೂರಸ್ತವಾಗಿದೆ,ಇದೆ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು 3 ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಮಾಡಲು ಹೊರಟಿದೆ ಇದನ್ನು ನಮ್ಮ ಸಂಘಟನೆ ಖಂಡಿಸುತ್ತದೆ.
ಇಷ್ಟೇ ಅಲ್ಲದೆ ಕೇಂದ್ರ ಸರ್ಕಾರವು ರೈತ ವಿರೋಧಿ ಭೂ ಸಂಬಂದಿ ಕಾನೂನುಗಳನ್ನು ಬದಲಾವಣೆ ಮಾಡಲು ಮುಂದಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪರಿಕರಣ ಮತ್ತು ಕೋಮುವಾದಿಕರಣವನ್ನು ಜಾರಿಗೊಳಿಸುವ ದುರುದ್ದೇಶದಿಂದ ಹೊಸ ಶಿಕ್ಷಣದ ನೀತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಅದರಿಂದ ನಮ್ಮ ಸಂಘಟನೆ ವತಿಯಿಂದ ನ.8ರಂದು ಸಮಾವೇಶ ವನ್ನು ಅಮ್ಮಿಕೊಳ್ಳಲಾಗಿದೆ. ಸಮವೇಶಕ್ಕೆ ಮುಖ್ಯ ಅತಿಥಿಗಳಾಗಿ ಎಐಯುಟಿಯುಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವಿಜಯಭಾಸ್ಕರ್, ಸೋಮಶೇಖರ್, ಭಾರತ್ವಜ್ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಐಟಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ,ವರಲಕ್ಷ್ಮಿ, ವೆಂಕೋಬ ಹಟ್ಟಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.