ನ 6, 7 ರಂದು ಚಿತ್ರಕಲೆ ಪ್ರದರ್ಶನ

ಹುಬ್ಬಳ್ಳಿ,ನ4- ಅಭಿನವ ಚಕ್ರವರ್ತಿ ಅವರ ಚಿತ್ರಕಲೆಗಳ ಪ್ರದರ್ಶನವನ್ನು ನ.6 ಮತ್ತು ನ.7 ರಂದು ಚಿತ್ರ ಕಲಾ ಸಂಭ್ರಮ ಶಿರ್ಷಿಕೆ ಅಡಿಯಲ್ಲಿ ಇಲ್ಲಿನ ಲ್ಯಾಮಿಂಟನ್ ರಸ್ತೆಯ ಶ್ರೀ ಕೃಷ್ಣ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಲಾವಿದೆ ಮುತ್ತಮ್ಮ ಚಕ್ರವರ್ತಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿನವ ಚಕ್ರವರ್ತಿ ಅವರು ವಾಟರ್ ಕಲರ್, ಮಾರ್ಕರ್ ಪೆನ್ನ, ಕಲರ್ ಪೆನ್ಸ್ ಹಾಗೂ ಪೇಸ್ಟಲ್ ಕ್ರಯಾನ್ಸ್ ಬಳಸಿ 100 ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿದ್ದು, ಅವುಗಳ ಪ್ರದರ್ಶನ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಮಾಡಲಾಗುತ್ತಿದೆ. ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಕಲಾವಿದ ಎಂ.ಜಿ.ಬಂಗ್ಲೇವಾಲೆ ಉದ್ಘಾಟನೆ ಮಾಡಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಲಲಿತಾಕಲಾ ಅಕಾಡೆಮಿ ಬೆಂಗಳೂರಿನ ಸದಸ್ಯ ಜಯಾನಂದ ಮಾದರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಲಕಲ್ ನ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಪ್ರಚಾರ್ಯ ಡಾ.ಬಸವರಾಜ ಗವಿಮಠ ಆಗಮಿಸಲಿದ್ದಾರೆ ಎಂದರು.
ಇದೇ ವೇಳೆ ಯುವ ಕಲಾವಿದ ಕೆ.ವಿ.ಶಂಕರ ಅವರ ಕಲಾ ಸಾಧನೆ ಗುರುತಿಸಿ ಆಂದ್ರಪ್ರದೇಶದ ಮನಂ ಫೌಂಡೇಶನ್ ಕಲಾಚಕ್ರವರ್ತಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದರು.