ನ. 5 ಹಾಗೂ 6 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ನ.04:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಗೋದುತಾಯಿ ಕಾಲೇಜು ಎದುರುಗಡೆ ಇರುವ ಹಾಲಿ 450 ಎಂ.ಎಂ. ವ್ಯಾಸದ ಪಿ.ಎಸ್.ಸಿ. ಮುಖ್ಯ ಕೊಳವೆ ಮಾರ್ಗದಲ್ಲಿ ಸೋರುವಿಕೆ ಕಂಡು ಬಂದ ಹಿನ್ನೆಲೆಯಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.
ಇದರ ಹಿನ್ನೆಲೆಯಲ್ಲಿ ನ. 5 ಹಾಗೂ 6 ರಂದು ಎಸ್.ಬಿ. ನೆಲಮಟ್ಟದ ಮತ್ತು ಮೇಲ್ಮಟ್ಟದ ಜಲ ಸಂಗ್ರಾಹಗಾರದಿಂದ ಈ ಕೆಳಕಂಡ ಬಡಾವಣೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಬಡಾವಣೆಗಳ ವಿವರ ಇಂತಿದೆ. ಐವಾನ್ ಶಾಹಿ, ಇಂದಿರಾ ನಗರ, ಸಂಗಮೇಶ್ವರ ಕಾಲೋನಿ, ಶಾಂತಿ ನಗರ, ಸ್ಟೇಷನ್ ಬಡಾವಣೆ, ವಿದ್ಯಾನಗರ, ವೆಂಕಟೇಶÀ ನಗರ, ಶಾಸ್ತ್ರೀ ನಗರ, ವಿವೇಕಾನಂದ ನಗರ, ಮಹಾವೀರ ನಗರ, ಆನಂದ ನಗರ, ಪಂಚಶೀಲ ನಗರ, ರಾಮ ನಗರ ಹಾಗೂ ಗೋದುತಾಯಿ ಕಾಲೋನಿ.