ನ. 5ರಂದು ಆದರ್ಶ ಉಪಾಧ್ಯಾಯರು ಪ್ರಶಸ್ತಿ ಪ್ರದಾನ

ಕಲಬುರಗಿ,ನ.2:ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನವೆಂಬರ್ 5ರಂದು ಸಂಜೆ 4-13ಕ್ಕೆ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ತಾಲ್ಲೂಕು ಘಟಕದ ಉದ್ಘಾಟನೆ, ಆದರ್ಶ ಉಪಾಧ್ಯಾಯರು ಪ್ರಶಸ್ತಿ ಪ್ರದಾನ ಮತ್ತು ಮಧುರ ಸ್ಮøತಿ ಪುಸ್ತಕ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ದಕ್ಷಿಣ ತಾಲ್ಲೂಕು ಘಟಕದ ಅಧ್ಯಕ್ಷೆ ನಂದಿನಿ ಸನಬಾಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ನೆರವೇರಿಸುವರು. ಸಮಾಜ ಸೇವಕಿ ಶ್ರೀಮತಿ ಲಕ್ಷ್ಮೀ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಪೂಜೆ ನೆರವೇರಿಸುವರು. ತಾಲ್ಲೂಕು ದಂಡಾಧಿಕಾರಿ ಪ್ರಕಾಶ್ ಕುದರಿ ಅವರು ಪುಸ್ತಕ ಬಿಡುಗಡೆ ಮಾಡುವರು ಎಂದರು.
ಅಂಗನವಾಡಿ ವಿಭಾಗದಲ್ಲಿ ಶ್ರೀಮತಿ ಪುತಳಾಬಾಯಿ ಎಚ್. ತಳವಾರ್, ಪ್ರಾಥಮಿಕ ವಿಭಾಗದಲ್ಲಿ ಕೊಳ್ಳೂರಿನ ಶ್ರೀಮತಿ ಶಮೀನಾಬೇಗಂ, ನಂದಿಕೂರದ ಶ್ರೀಮತಿ ಆಶಾ ಎನ್. ಜಾಧವ್, ಸರಡಗಿ(ಬಿ)ಯ ಲಕ್ಷ್ಮೀಕಾಂತ್ ಆರ್ಯ, ಹಸನಾಪುರದ ಮುಖ್ಯ ಗುರುಗಳಾದ ಶ್ರೀಮತಿ ಶೋಭಾ ಎನ್. ದುಬಲಗುಂಡಿ, ಕೆರಿಭೋಸಗಾದ ದೈಹಿಕ ಶಿಕ್ಷಕ ಮಹಿಬೂ ಎಂ. ಖಾಜಿ, ಕಲಬುರ್ಗಿಯ ರೇವಣಸಿದ್ದೇಶ್ವರ್ ಶಾಲೆಯ ಮುಖ್ಯ ಗುರುಗಳಾದ ಉಮೇಶ್ ರಾಠೋಡ್, ಫಿರೋಜಾಬಾದ್‍ನ ಹೂವಪ್ಪ ವಿ. ಬಾರಕೆರ್, ಬ್ರಹ್ಮಪೂರದ ಶ್ರೀಮತಿ ಸುವರ್ಣ ಎಂ. ಮಠಪತಿ, ನಂದೂರ್(ಕೆ)ದ ಶ್ರೀಮತಿ ಕವಿತಾ ಖೌದಿ ಅವರಿಗೆ ಉಪಾಧ್ಯಾಯರು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.
ಅದೇ ರೀತಿ ಆದರ್ಶ ವಿದ್ಯಾಲಯ ವಿಭಾಗದಿಂದ ಭೀಮಳ್ಳಿಯ ಇಂಗ್ಲೀಷ್ ಶಿಕ್ಷಕಿ ಶ್ರೀಮತಿ ಮೀನಾಕ್ಷಿ ಪಾಟೀಲ್, ಪದವಿ ಪೂರ್ವ ವಿಭಾಗದಿಂದ ಕಲಬುರ್ಗಿಯ ಗುರುರಾಜ್ ಆರ್. ಕುಲಕರ್ಣಿ, ಡಾ. ಲತಾದೇವಿ ಸಿ. ಕರಿಕಲ್, ಪ್ರೌಢ ವಿಭಾಗದಿಂದ ನದಿ ಸಿನ್ನೂರಿನ ಶ್ರೀಮತಿ ಸುಜಾತಾ ಸಿ. ಜಮಶೆಟ್ಟಿ, ಜೇವರ್ಗಿ ಕಾಲೋನಿಯ ಶ್ರೀಮತಿ ಜೈಬುನ್ನಿಸಾಬೇಗಂ, ಹೊನ್ನಕಿರಣಗಿಯ ರಘುನಾಥ್ ಎಸ್. ಮಸರಬೊ, ಪಾಳಾದ ಶ್ರೀಮತಿ ಸರಿತಾ, ಜೋಗೂರಿನ ಸಂಗಣ್ಣ ಎಚ್. ಬಾಸಗಿ, ಖಣದಾಳ್‍ದ ಶ್ರೀಮತಿ ವಿಜಯಲಕ್ಷ್ಮೀ ಸುತಾರ್, ಕವಲಗಾ(ಬಿ)ದ ಶ್ರೀಮತಿ ಶಶಿಕಲಾ ನರಸರೆಡ್ಡಿ, ಶರಣನಗರದ ಶ್ರೀಮತಿ ಮಹಾನಂದಾ ಎಸ್. ಪಾಟೀಲ್, ಪಟ್ಟಣದ ಪ್ರಭುಲಿಂಗ್ ಸಿದ್ದಣ್ಣ ಕುಂಬಾರ್, ಮೇಳಕುಂದಾದ ಶ್ರೀಮತಿ ಮಹಾನಂದಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ತಂತ್ರಜ್ಞಾನ ವಿಭಾಗದಲ್ಲಿ ಕಲಬುರ್ಗಿ ಐಟಿಐ ತರಬೇತಿ ಅಧಿಕಾರಿ ಗುರುರಾಜ್ ಧನ್ನಾ, ಕಿರಿಯ ತರಬೇತಿ ಅಧಿಕಾರಿ ಶ್ರೀಮತಿ ಲಲಿತಾ ಪಾಟೀಲ್, ನೂತನ ವಿದ್ಯಾಲಯ ಪಾಲಿಟೆಕ್ನಿಕ್‍ನ ಉಪನ್ಯಾಸಕಿ ಶ್ರೀಮತಿ ಸಿದ್ದಮ್ಮ ಪಿ. ಗೊಬ್ಬೂರ್, ಸಮಾಜ ಸೇವಾ ವಿಭಾಗದಿಂದ ನಿವೃತ್ತ ವೈದ್ಯ ಡಾ. ಉದಯ್ ಡಿ. ಪಾಟೀಲ್, ಡಾ. ಅಣ್ಣಾರಾವ್ ಎಸ್. ಪೋಲಿಸ್ ಪಾಟೀಲ್, ಆರಕ್ಷಕರ ವಿಭಾಗದಿಂದ ಶ್ರೀಮತಿ ಅನಿತಾ ಆರ್. ನಿಂಗನಾಯಕ್, ನಾಗೇಂದ್ರ ಡಿ. ಯಲ್ದೆ, ಆರೋಗ್ಯ ರಕ್ಷಕ ವಿಭಾಗದಿಂದ ಜಿಮ್ಸ್‍ನ ಅವಿನಾಶ್ ಜಿ. ಎಸ್., ಶ್ರೀಕಾಂತ್ ಪುಲಾರಿ, ಶ್ರೀಮತಿ ಸ್ನೇಹಲತಾ ಪಿ., ಕರಣಿಕರು ವಿಭಾಗದಿಂದ ಶ್ರೀಮತಿ ಶಕುಂತಲಾ ಪಿ. ಜೈನ್, ಅರವಿಂದಕುಮಾರ್, ಮಹೆಬೂಬ್ ಪಾಷಾ, ಸಿಆರ್‍ಪಿ, ಬಿಆರ್‍ಪಿ, ಇಸಿಓ ವಿಭಾಗದಿಂದ ಹೀರಾಪುರದ ಸಂಗನಬಸಪ್ಪ, ಅರುಣಕುಮಾರ್ ಡಿ., ಶಿವಮೂರ್ತಪ್ಪ, ಕಲಾವಿದರ ವಿಭಾಗದಿಂದ ಸಿದ್ದಾರ್ಥ ಡಿ. ಚಿಮ್ಮಾಇದ್ಲಾಯಿ, ಚಿಗುರು ವಿಭಾಗದಿಂದ ವಿದ್ಯಾರ್ಥಿನಿ ಕು. ಐಶ್ವರ್ಯ ಸಿ. ಪಡಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪರ್ವಿನ್ ಸುಲ್ತಾನಾ, ಕೋಶಾಧ್ಯಕ್ಷೆ ರೇಣುಕಾ ಎಸ್., ಮುಂತಾದವರು ಉಪಸ್ಥಿತರಿದ್ದರು.