ನ. 30.ರಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯಿಂದ ರಾಜ್ಯೋತ್ಸವ

ಕಲಬುರಗಿ: ನ.25: ಜೈ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಪ್ರತಿ ವರ್ಷದಂತೆ ಈ ವರ್ಷವು ದಿ|| ಪುನೀತರಾಜಕುಮಾರ ರವರ ವೇದಿಕೆಯಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವವನ್ನು ಕಾರ್ಯಕ್ರಮವನ್ನು ನೆವೆಂಬರ್ 30.ರಂದು ಬೆಳಿಗ್ಗೆ 11:30 ಗಂಟೆಗೆ ನಗರದ ಸರ್ದಾರ್ ವಲ್ಲಭಾಯ ಪಟೇಲ ವೃತ್ತದ ಹತ್ತಿರ ಇರುವ ಕನ್ನಡ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸಚೀನ ಫರತಾಬಾದ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಷ್ರ. ಬ್ರ. ಡಾ. ರೇವಣಸಿದ್ದ ಶಿವಾಚಾರ್ಯರು ಚಿಕ್ಕ ವಿರೇಶ್ವರ ಮಠ ಶ್ರೀನಿವಾಸ ಸರಡಗಿ, ಶ್ರೀ ಷ್ರ. ಬ್ರ. ಸೋಮಶೇಖರ ಶಿವಾಚಾರ್ಯರು ಕಂಬಳೇಶ್ವರ ಮಠ ಚಿತ್ತಾಪುರ, ಶ್ರೀ ಷ್ರ. ಬ್ರ. ಚನ್ನಬಸವ ಶರಣರು ಸುಕ್ಷೇತ್ರ ಹಿರೋಡಶ್ವರ ದೇವಾಲಯ, ಮಾಲಗತ್ತಿ, ಚಿತ್ತಾಪುರ ದಿವ್ಯ ಸಾನಿಧ್ಯ ವಹಿಸುವರು.

ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸುವರು, ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ಅಧ್ಯಕ್ಷತೆ ವಹಿಸುವರು, ಮಾಜಿ ಜಿ.ಪಂ.ಅಧ್ಯಕ್ಷ ನಿತೀನ ವ್ಹಿ. ಗುತ್ತೇದಾರ ಅವರು ನಾಡ ದೇವಿ ಭಾವಚಿತ್ರ ಪೂಜೆ ಹಾಗೂ ಚಲನಚಿತ್ರ ನಟ ಪುನೀತ ರಾಜಕುಮಾರ ಭಾವಚಿತ್ರ ಪೂಜೆ ಸಲ್ಲಿಸುವರು. ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ ಮೂಲಗೆ ಅವರು ಪ್ರಶಸ್ತಿ ಪ್ರಧಾನ ಮಾಡುವರು, ಕಡೂರ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಉಪನ್ಯಾಸ ನೀಡುವರು, ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಮೇಯರ ಶರಣಕುಮಾರ ಮೋದಿ, ಮಾಜಿ ಜಿ.ಪಂ.ಸದಸ್ಯ ಸಂತೋಷ ದಣ್ಣೂರ, ಸಂಜು ಯಾಕಾಪೂರ, ಬಾಲರಾಜ ಗುತ್ತೇದಾರ, ಡಾ. ವಿಕ್ರಮ ಸಿದ್ದಾರೆಡ್ಡಿ, ಶ್ಯಾಮ ನಾಟಿಕಾರ, ಜಗನ್ನಾಥ ಸೂರ್ಯವಂಶಿ, ಲಕ್ಷ್ಮಣ ಮೂಲಭಾರತಿ, ಲಕ್ಷ್ಮಿಪುತ್ರ ಪಾಟೀಲ, ಎಂ.ಡಿ. ಸಿದ್ದಿಕ, ಡಾ. ಸಲ್ಮಾನ ಪಟೇಲ, ಡಾ. ವಿನೋದಕುಮಾರ, ಡಾ. ಮಿರ್ಜಾ ಅಫರೋಜ ಬೇಗ್, ಡಾ. ಸಂತೋಷ ಮಂಗಶೆಟ್ಟಿ, ಡಾ. ಫಾರೂಕ ಅಹ್ಮದ್, ಶಾಂತಕುಮಾರ ಬಿರಾದಾರ, ಬಸವರಾಜ ಬೀರಬಟ್ಟಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಟಿ.ವಿ.ಶಿವಾನಂದ ಮಾಧ್ಯಮ ಕ್ಷೇತ್ರ, ಮೌಲಾ ಮುಲ್ಲಾ ಮುಲ್ಲಾ ಸಾಮಾಜಿಕ ಕ್ಷೇತ್ರ, ಸುರೇಶ ಬಡಿಗೇರ ಸಾಹಿತ್ಯ ಕ್ಷೇತ್ರ, ಡಾ. ಮಲ್ಲಾರಾವ ಮಲ್ಲೆ ವೈದ್ಯಕೀಯ ಕ್ಷೇತ್ರ, ಮಾಲಾ ದಣ್ಣೂರ ಸಾಮಾಜಿಕ ಸೇವೆ, ದಶರಥ ಧಮ್ಮನಸೂರು ಕ್ರೀಡಾ ಕ್ಷೇತ್ರ, ಸಿದ್ದಾರ್ಥ ಚಿಮ್ಮಾ ಇದಲಾಯಿ ಸಂಗೀತ ಕ್ಷೇತ್ರ, ಮಂಜುನಾಥ ನಾಲವಾರಕರ್ ಹೋರಾಟಗಾರ ಕ್ಷೇತ್ರ, ಶರಣಬಸವೇಶ್ವರ ಭಜಂತ್ರಿ ಪೊಲೀಸ್ ಕ್ಷೇತ್ರ, ಮಾಲಾ ಕಣ್ಣಿ ಸಾಮಾಜಿಕ ಸೇವೆ, ಶರತ ರೇಷ್ಮಿ ಶಿಕ್ಷಣ ಕ್ಷೇತ್ರ, ಮಸ್ಮಾನ ಪಟೇಲ್ ನ್ಯಾಯಾಂಗ ಕ್ಷೇತ್ರ, ಶರಣು ಆತನೂರು ಪೌರ ಕಾರ್ಮಿಕ ಕ್ಷೇತ್ರ, ಸಾದೀಕ ಅಲಿ ದೇಶಮುಖ ಗೋ ರಕ್ಷಣಾ ಕ್ಷೇತ್ರ, ರವೀಂದ್ರ ಹೆಚ್ ವ್ಯಾಕ್ಸೆ ಸಾಮಾಜಿಕ ಸೇವೆ ಇವರುಗಳನ್ನು 66ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ನೀಡಿ ಗವರವಿಸಲಾಗುವುದು ಎಂದು ಸಚೀನ ಫರತಾಬಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.