ನ.3 ಕೋಲಾರದಲ್ಲಿ ಉದ್ಯೋಗ ಮೇಳ

ಕೋಲಾರ,ಅ,೩೧- ಸಮಾಜದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು, ವ್ಯಾಪಾರೋದ್ಯಮ ಮಾರ್ಕೆಟಿಂಗ್,ಪೂರೈಕೆದಾರರ ಗುರುತಿಸುವಿಕೆ, ನೇಮಕಾತಿ ಹಾಗೂ ಸಂಪನ್ಮೋಲಗಳ ಪರಸ್ಪರ ಹಂಚಿಕೆಗಳನ್ನು ಉತ್ತೇಜಿಸಲು ಫಸ್ಟ್ ಸರ್ಕಲ್ ಸಂಸ್ಥೆಯನ್ನು ಸ್ಥಾಪಿಸಿ ಕೊಂಡು ರಾಜ್ಯದಲ್ಲಿ ಈಗಾಗಲೇ ಮಂಡ್ಯ ಹಾಗೂ ಹಾಸನಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿ ಯಶ್ವಸ್ಸಿಗೊಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ನಂದೀಶ್ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಾ ಕೋಲಾರದಲ್ಲಿ ನವೆಂಬರ್ ೩ ರಂದು ಉದ್ಯೋಗ ಮೇಳವನ್ನು ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಈ ಅವಕಾಶವನ್ನು ಯುವ ಜನತೆ ಸದ್ಬಳಿಸಿ ಕೊಂಡು ಯಶಸ್ವಿಗೊಳಿಸಿ ಕರ್ನಾಟಕವನ್ನು ನಿರುದ್ಯೋಗ ಮುಕ್ತ ರಾಜ್ಯವನ್ನಾಗಿಸ ಬೇಕೆಂಬ ಗುರಿಯನ್ನು ನಮ್ಮ ಸಂಸ್ಥೆ ಹೊಂದಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಮನವಿ ಮಾಡಿದರು,
ಮುಂದೆ ಡಿಸೆಂಬರ್ ೧,೨ ಹಾಗೂ ೩ ರಂದು ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದ ಜಾಬ್ ಎಕ್ಸ್‌ಪೋವನ್ನು ಟಿನಿಸ್ ಪೆವಿಲಿಯನ್‌ನಲ್ಲಿ ಆಯೋಜಿಸಲಾಗುವುದು, ಸುಮಾರು ೧೨೦ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಇದರಲ್ಲಿ ಸುಮಾರು ೧೦ ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ, ಮೈಸೂರಿನಲ್ಲಿ ನವೆಂಬರ್ ೧೭ ರಂದು ವಿದ್ಯಾವರ್ಧಕ ಕಾಲೇಜ್ ಆಫ್ ಇಂಜನಿಯರಿಂಗ್‌ನಲ್ಲಿ ಆಯೋಜಿಸಿದೆ ಎಂದು ಹೇಳಿದರು,
ಗ್ರಾಮೀಣ ಮಟ್ಟದಲ್ಲಿ ಬಹುತೇಕ ನಗರದಲ್ಲಿನ ಐ.ಟಿ. ಉದ್ಯಮಿಕ್ಕೆ ಬರುವುದಕ್ಕೆ ಸಿದ್ದರಿರುವುದಿಲ್ಲ. ಇಂಜನಿಯರಿಂಗ್ ಶಿಕ್ಷಣ ಪಡೆದಿರುವವರು ಮಾತ್ರ ಬೆಂಗಳೂರಿನಲ್ಲಿ ಉದ್ಯೋಗ ಮಾಡಲು ಹೆಚ್ಚಾಗಿ ಬಯಸುತ್ತಾರೆ, ಗ್ರಾಮೀಣ ಭಾಗದ ಜಿಲ್ಲೆಗಳಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪದವಿ,ಸ್ನಾತಕೋತ್ತರ ಪದವಿ, ಡಿಪ್ಲೋಮಾ ಇತ್ಯಾದಿಗಳ ಶಿಕ್ಷಣ ಪಡೆದವರು ಹೆಚ್ಚಾಗಿ ಸ್ಥಳೀಯ ಕೈಗಾರಿಕೆಗಳಲ್ಲಿ ಉದ್ಯೋಗ ಮಾಡಲು ಮುಂದಾಗುತ್ತಿರುವುದನ್ನು ಕಾಣಬಹುದಾಗಿದೆ ಎಂದರು,
ಈಗಾಗಲೇ ನೊಂದಣಿ ಕಾರ್ಯವು ಪ್ರಾರಂಭವಾಗಿದ್ದು, ೮೦೦ ಮಂದಿ ನೊಂದಣಿ ಮಾಡಿಸಿದ್ದಾರೆ. ನೋಂದಣಿ ಮಾಡಿಸಲು ಯಾವೂದೇ ಶುಲ್ಕವಿಲ್ಲ ಉಚಿತವಾಗಿದೆ ಎಂದ ಅವರು ಮಂಡ್ಯದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ೬೦ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇತ್ತು ಅದರೆ ೩೫ ಕಂಪನಿಗಳು ಮಾತ್ರ ಭಾಗವಹಿಸಿತ್ತು, ಕೋಲಾರದಲ್ಲಿ ಬೆಂಗಳೂರಿನಿಂದ ಸುಮಾರು ೪೦ ಕಂಪನಿಗಳು ಹಾಗೂ ಸ್ಥಳೀಯ ೨೦ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ ಈಗಾಗಲೇ ಎಲ್ಲಾ ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಶ್ರೀನಿವಾಸ್ ಮಾತನಾಡಿ ಫಸ್ಟ್ ಸರ್ಕಲ್ ಸಂಸ್ಥೆಯ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಉದ್ಯೋಗ ಮೇಳದ ಉದ್ದೇಶದ ಮಾಹಿತಿ ನೀಡಿ ಅನುಮತಿ ಪಡೆದು ಕೊಂಡಿದ್ದಾರೆ. ಈಗಾಗಲೇ ಪದವಿ ಪರೀಕ್ಷೆಗಳು ಹಾಗೂ ಕೈಗಾರಿಕಾ ಡಿಪ್ಲೋಮೋ ತರಗತಿಗಳ ಪರೀಕ್ಷೆಗಳು ಮುಗಿದಿದ್ದು ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಮೇಳವು ಸುವರ್ಣ ಅವಕಾಶವಾಗಿದೆ ಎಂದರು,
ಬೆಂಗಳೂರು ಸೇರಿದಂತೆ ವಿವಿಧ ಕಡೆಯ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ಇದರೊಟ್ಟಿಗೆ ಸ್ಥಳೀಯ ನರಸಾಪುರ, ವೇಮಗಲ್ ಹಾಗೂ ಮಾಲೂರಿನ ಕೆಲವು ಕಂಪನಿಗಳು ಭಾಗವಹಿಸಲಿದೆ ಸುಮಾರು ೫೦ ಕಂಪನಿಗಳು ಭಾಗವಹಿಸುತ್ತಿದ್ದು ಸುಮಾರು ೨ ಸಾವಿರ ಮಂದಿಗೆ ಉದ್ಯೋಗದ ಅವಕಾಶ ಸಿಗುವ ಸಾಧ್ಯತೆ ಇದೆ ಎಂದರು,
ಕೌಶಲ್ಯ ಕೊರತೆ ಇದ್ದಲ್ಲಿ ರಾಜ್ಯ ಮತ್ತು ಕೇಂದ್ರದ ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ಅವಶ್ಯಕವಾದ ತರಬೇತಿಯನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ತರಭೇತಿಯು ಮುಗಿದ ಕೊಡಲೇ ಉದ್ಯೋಗದ ಅವಕಾಶ ಸಿಗಲಿದೆ ಇದನ್ನು ಎಲ್ಲ ಯುವಕರು ಸದ್ಬಳಿಸಿ ಕೊಂಡು ಜಿಲ್ಲೆಯಾಗಿಸ ಬೇಕೆಂದು ಕರೆ ನೀಡಿದರು,
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಗೌಡ ಮಾತನಾಡಿ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ನಮ್ಮ ಕಾಲೇಜಿನಲ್ಲಿ ಉದ್ಯೋಗ ಮೇಳ ಮಾಡಲು ಅವಕಾಶ ಕಲ್ಲಿಸಿ ಎಲ್ಲಾ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು, ಈಗಾಗಲೇ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಮಾಜಿ ವಿಧ್ಯಾರ್ಥಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಹೇಳಿದರು,
ಪ್ರಶ್ನೆಯೊಂದಕ್ಕೆ ಟಾಟಾ ಮೋಟರ್‍ಸ್, ವೇಸ್ಟರನ್, ಟಯೋಟೋ, ಸನ್‌ಬಿಜ್, ಅಕ್ಸೀಸ್, ಬೋಸ್ಚ್, ಪ್ರಮುಖ್,ಇನ್ನೋವ್, ಸ್ವಾತಂತ್ರ, ಮೇಡ್ ಪ್ಲಸ್ ಮುಂತಾದ ಕಂಪನಿಗಳು ಭಾಗವಹಿಸಲಿದೆ ಎಂದ ಅವರು ಈಗಾಗಲೇ ಹೆಚ್ಚಾಗಿ ಕಾಲೇಜಿನ ಕ್ಯಾಂಪಸ್‌ಗಳಲ್ಲಿ ಕಂಪನಿಗಳು ಹೆಚ್ಚಾಗಿ ಆಯ್ಕೆ ಮಾಡಿ ಕೊಳ್ಳಲಾಗುತ್ತಿದೆ. ಉಳಿದಂತೆ ಪದವಿಗಳು ಪಡೆದವರನ್ನು ಮಾರ್ಕೆಟಿಂಗ್ ಇತರೆಗಳಿಗೆ ನೇಮಕಾತಿ ಮಾಡಿ ಕೊಳ್ಳುವರು. ಕಂಪನಿಯ ಆಡಳಿತದ ನಿಯಮಗಳಿಗೂ ಸರ್ಕಾರದ ಸಂಸ್ಥೆಗಳಿಗೂ ಸಂಬಂಧವಿಲ್ಲ ಎಂದರು,