ನ. 29ರಂದು ಮುಧೋಳದಲ್ಲಿ ತಾಲೂಕು ಮಟ್ಟದ ಪಂಚಮಸಾಲಿ ಸಮ್ಮೇಳನ


ಸಂಜೆವಾಣಿ ವಾರ್ತೆ
ಕುಕನೂರು, ನ.21: ಯಲಬುರ್ಗಾ ತಾಲೂಕು ಮುಧೋಳ ಗ್ರಾಮದಲ್ಲಿ ನವಂಬರ್ 29ರಂದು ಕುಕನೂರು ಹಾಗೂ ಯಲಬುರ್ಗಾ ತಾಲೂಕುಗಳ ವೀರಶೈವ ಪಂಚಮಸಾಲಿ ಸಮಾಜ 2ಎ ಮೀಸಲಾತಿಗಾಗಿ ಹಕ್ಕೊತ್ತಾಯ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತೋತ್ಸವ ಹಾಗೂ ವಿಜಯೋತ್ಸವ ಬೃಹತ್ ಸಮಾವೇಶ ಯಶಸ್ವಿಗೊಳಿಸಬೇಕೆಂದು ಪಂಚಮಿ ಶಾಲಿ ಸಮಾಜದ ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರಾದ ಬಸಲಿಂಗಪ್ಪ ಭೂತೆ ಕರೆ ನೀಡಿದರು. ಅವರು ಭಾನುವಾರ ಸಂಜೆ ಕುಕನೂರಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಮಾಜದ ಪೂರ್ವಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮದ ಕಾರ್ಯಕ್ರಮದಲ್ಲಿ ಸಮಾಜದ ಜನಪ್ರತಿನಿಧಿಗಳಾದ ಬಸವರಾಜ ಪಾಟೀಲ್ ಯತ್ನಾಳ್ ಲಕ್ಷ್ಮಿ ಹೆಬ್ಬಾಳಕರ್ ವಿಜಯನಂದ ಕಾಶಪ್ಪನವರ್ ಹರಿಹರ ಮಾಜಿ ಶಾಸಕ ಶಿವಶಂಕರ್ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಅನೇಕ ಮುಖಂಡರನ್ನು ಸಮಾವೇಶಕ್ಕೆ ಆಗಮಿಸುವಂತೆ ಕೂರಲಾಗಿದೆ ಅವರು ಬರಲು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಸಮಾಜದ ಬಾಂಧವರು ಸುಮಾರು 25 ರಿಂದ 30 ಸಾವಿರ ಜನರನ್ನು ಸೇರಿಸಲು ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದ ಈ ಸಂದರ್ಭದಲ್ಲಿ ರು. ಸಮಾಜದ ಸಂಘಟನೆಯೂ ರಾಜ್ಯದಲ್ಲೇ ಯಲ್ಬರ್ಗ ತಾಲೂಕು ಹೆಸರುವಾಸಿಯಾಗಿದೆ . ಅದು ಮತ್ತೊಮ್ಮೆ ಸಾಬೀತು ಪಡಿಸಲು ಶ್ರಮಿಸಬೇಕು, ಪಂಚಮ ಸಾಲಿ ಸಮಾಜ ಒಗ್ಗತ್ತಿದೆ ಎಂಬುದು ಸರಕಾರ ಕೆ ಮನದಟ್ಟು ಮಾಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವೀರಣ್ಣ ಅಣ್ಣಿಗೇರಿ, ಕಳಕನ ಗೌಡ ಪಾಟೀಲ್, ಕಳಕಪ್ಪ ಕ್ಯಾದ್ಕುಂಪಿ ,ಶರಣಪ್ಪ ಗೌಡ ಪಾಟಿಲ್ ಬಸನಗೌಡ ತೊಂಡಿಹಾಳ, ರಾಜಶೇಖರ್ ನಿಂಗೂಜಿ, ಚಂದ್ರು ಬಗ್ನಾಳ ,ಮಹೇಶ್ ಭೂತೆ, ಕೊಟ್ರಪ್ಪ ತೋಟದ, ನಾಗಪ್ಪ ಹಳ್ಳಿಕೇರಿ , ಶಿವಪ್ಪ ಮಸ್ತಾರ, ಹನುಮಂತಪ್ಪ ಜಳಕಿ ಶಂಭುಲಿಂಗಪ್ಪ ಎಲಬುರ್ಗಾ, ವೀರನ ಹುಬ್ಬಳಿ ಶರಣಪ ಆರ್ಕೇರಿ ,ವಿನಾಯಕ್ ಮೊದಲಾದರೂ ಹಾಜರಿದ್ದು ಸಲಹೆ ಸೂಚನೆ ನೀಡಿದರು. ಬಾಕ್ಸ್ : . ಪಂಚಮಸಾಲಿ ಸಮಾಜದ ಪೀಠ ಗಳು ಎರಡು ಇದ್ದರೂ ಸಮಾಜದ ಸಂಘಟನೆ ಮಾತ್ರ ಒಂದೇ ಇದೆ ಈ ಬಗ್ಗೆ ಯಾರೂ ಆಸಂಖ್ಯಕ್ಕೆ ಒಳಗಾಗಬಾರದು ಎಂದು ಎಂದು ಬಸಲಿಂಗಪ್ಪ ಭೂ ತೆ ಯವರು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.ಹರಿಹರ ಪೀಠ ಮತ್ತು ಕೂಡಲಸಂಗಮ ಪೀಠಗಳು ಇದ್ದರೂ ಸಹ ಅವು ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಲೀವೆ . ಎರಡು ಪೀಠಗಳ ಅವಿರತಾಶ್ರಮದಿಂದಾಗಿ ಸಮಾಜದ ಬಹು ದಿನಗಳ ಬೇಡಿಕೆಯಾದ ೨ ಎ ಮೀಸಲಾತಿ ಸಿ.ಎಂ. ಬೊಮ್ಮಾಯಿಯವರ ನೇತೃತ್ವದ ಸರ್ಕಾರದಲ್ಲಿ ಈಡೇರುತ್ತದೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು