ನ. 28 ರಂದು ಅಭಿನಂದನಾ ಗ್ರಂಥ ಬಿಡುಗಡೆ


ಲಕ್ಷ್ಮೇಶ್ವರ, ನ19: ಕಳೆದ ಮೂವತ್ತು ವರ್ಷಗಳಿಂದ ಶಿಕ್ಷಣ ರಂಗದಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ಪೂರ್ಣಾ ಜಿ ಕರಾಟೆ ಹಾಗೂ ಅವರ ಪತ್ನಿ ವಿಜಯ ಲಕ್ಷ್ಮಿ ಕರಾಟೆ ಅವರ ಶಷ್ಠಬ್ದಿ ಕಾರ್ಯಕ್ರಮ ಹಾಗೂ ಪೂರ್ಣ ವಿಜಯ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ದಿನಾಂಕ 28 ರಂದು ರವಿವಾರ ಶ್ರೀ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಮುಂಜಾನೆ 10.30 ಕ್ಕೆ ಜರುಗಲಿದೆ ಎಂದು ಕರಾಟೆ ದಂಪತಿಗಳ ಷಷ್ಟಾಬ್ದಿ ಪೂರ್ತಿ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ಚಂಬಣ್ಣ ಬಾಳಿಕಾಯಿ ಹೇಳಿದರು.
ಅವರು ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಶಿಕ್ಷಕ ಪೂರ್ಣ ಜಿ ಅವರು ತಮ್ಮ 30 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ ಹಾಗೂ ಅವರ ಧರ್ಮಪತ್ನಿ ಯು ನಿವೃತ್ತರಾದ ಹಿನ್ನೆಲೆಯಲ್ಲಿ ಇವರನ್ನು ಪಟ್ಟಣ ಸಮಸ್ತ ಜನತೆಯ ಪರವಾಗಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಸನ್ಮಾನಿಸುವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪೂರ್ಣಾ ಜಿ ಕರಾಟೆ ಅವರು ಬಹುಮುಖ ವ್ಯಕ್ತಿತ್ವದ ವ್ಯಕ್ತಿಯಾಗಿದ್ದು ಅವರನ್ನು ಸನ್ಮಾನಿಸುವ ಮೂಲಕ ಸಮಾಜಕ್ಕಾಗಿ ಅವರು ನೀಡಿದ ಕೊಡುಗೆಯನ್ನು ನೆನಪಿಸುವ ಕಾರಣದಿಂದ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬನಹಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ಮಾಜಿ ಶಾಸಕ ಜಿಎಂ ಮಹಾಂತ ಶೆಟ್ಟರ್ ವಹಿಸಲಿದ್ದು ಉದ್ಘಾಟನೆಯನ್ನು ಶಾಸಕ ರಾಮಣ್ಣ ಲಮಾಣಿ ಮಾಡಲಿದ್ದಾರೆ ಸಂಸದ ಶಿವಕುಮಾರ್ ಉದಾಸಿ ಅವರು ಕರಾಟೆ ದಂಪತಿಗಳನ್ನು ಸನ್ಮಾನಿಸಲಿದ್ದು ಅಭಿನಂದನಾ ಗ್ರಂಥವನ್ನು ಮಾಜಿ ಶಾಸಕ ಜಿಎಸ್ ಗಡ್ಡದೇವರಮಠ ಬಿಡುಗಡೆ ಮಾಡಲಿದ್ದಾರೆ ಜಾನಪದ ವಿದ್ವಾಂಸ ಶಂಭು ಬಳಿಗಾರ ಶುಭಾಶಯ ನುಡಿ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ್, ಉಪಾಧ್ಯಕ್ಷ ರಾಮಣ್ಣ ಗಡದವರ್, ಅಖಿಲ ಭಾರತ ಡೋಹರ ಕಕ್ಕಯ್ಯ ಸಮಿತಿಯ ರಾಜ್ಯಾಧ್ಯಕ್ಷರಾದ ಲಕ್ಷ್ಮಿಕಾಂತ್
ಹೊಟಗಿಕರ, ಕರಬಸಪ್ಪ ಹಂಚಿನಾಳ, ಸುಲೇಮಾನ್ ಸಾಬ್ ಕಣಕೆ, ಬಸವೇಶ್ ಮಹಾಂತ ಶೆಟ್ಟರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರುಡಿ ಸೇರಿದಂತೆ ಅವರ ನೂರಾರು ಶಿಷ್ಯ ಅಭಿಮಾನಿ ಬಳಗದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಿ ಎಸ್ ಇಳಿಗೇರ, ಕೆ ಓ ಹುಲಿಕಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಪೂರ್ಣಾ ಜಿ ಕರಾಟೆ, ಕುಬೇರಪ್ಪ ಮಹಾಂತಶೆಟ್ಟರ್, ಎನ್ ಎಸ್ ಗೊರವರ, ಎನ್ ಆರ್ ಸಾತ್ಪುತೆ, ವಿಜಯ್ ವಾರದ, ರಾಜು ಅಂಕಲಕೋಟಿ ಇದ್ದರು.
ಪದ್ಮರಾಜ ಪಾಟೀಲ್, ಜಿ ಎಸ್ ಗುಡಿಗೇರಿ, ಸತೀಶ್ ನಾರಾಯಣಕರ ನಿರ್ವಹಿಸಿದರು.