ನ.28ರಂದು ನಂಜನಗೂಡಿಗೆ ಮುಖ್ಯಮಂತ್ರಿ: ಶಾಸಕ, ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ನಂಜನಗೂಡು: ನ.24:- ಮಾನ್ಯ ಮುಖ್ಯಮಂತ್ರಿಗಳು ನವೆಂಬರ್ 28 ರಂದು ನಂಜನಗೂಡು ಶ್ರೀ ಕಂಠೇಶ್ವರ ಸ್ವಾಮಿ ದೇವಸ್ಧಾನ ಸರ್ಕಾರದಿಂದ ಮಂಜೂರಾಗಿರುವ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ನುಗು ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಹಿಸಲು ದಕ್ಷಿಣ ಕಾಶಿ ನಂಜನಗೂಡಿಗೆ ಭೇಟಿ ನೀಡಲಿದ್ದಾರೆ.
ಮುಖ್ಯ ಮಂತ್ರಿಗಳಾ ಕಾರ್ಯಕ್ರಮದ ಬಗ್ಗೆ ಮಾತಾನಾಡಿದ ಶಾಸಕರು ನನ್ನ ಮಹತ್ವಕಾಂಕ್ಷೆಯ ಯೋಜನೆಯದ ನುಗು ಏತ ನೀರಾವರಿ ಯೋಜನೆ ಮತ್ತು ಬೆಳ್ಳಿ ರಥ ಮತ್ತು 75 ಕೊಠಡಿಗಳ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲು ನಮ್ಮ ನೆಚ್ಚಿನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ನವಂಬರ್ 28ರಂದು ನಂಜನಗೂಡಿಗೆ ಆಗಮಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ನಾನು ಮತ್ತು ಜಿಲ್ಲಾಧಿಕಾರಿಗಳು ಪೆÇಲೀಸ್ ವರಿಷ್ಠಾಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದೇವೆ. ಸುಮಾರು 200 ಕೋಟಿ ರೂ ಗಳ ವಿವಿಧ ಕಾಮಗಾರಿಗಳಿಗೆ ಮುಖ್ಯ ಮಂತ್ರಿಗಳು ಅಂದು ಚಾಲನೆ ನೀಡಲಿದ್ದಾರೆ. ಅವರ ಜೊತೆ ನೀರಾವರಿ ಸಚಿವರಾದ ಗೊವಿಂದ ಕಾರ್ಜೊಳ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ರಾಮುಲು,ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೋಲೆ ಬರುವ ನಿರೀಕ್ಷೆ ಇದೆ ಅಂದು ಸುಮಾರು 6 ರಿಂದ 10 ಸಾವಿರ ಜನ ಸೇರುವ ನಿರೀಕ್ಷೆ ಇದ್ದು ನಂಜನಗೂಡಿನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ ಮುಖ್ಯ ಮಂತ್ರಿಗಳನ್ನು ಸ್ವಾಗತಿಸಲು ನಂಜನಗೂಡಿನ ಜನತೆಯ ಜೊತೆ ನಾನು ಉತ್ಸುಕನಾಗಿದ್ದೇನೆ ಎಂದರು.
ಇದೇ ತಿಂಗಳ 28ರಂದು ಮಾನ್ಯ ಮುಖ್ಯಮಂತ್ರಿಗಳು ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಆಡಳಿತ ವತಿಯಿಂದ ಸ್ಥಳ ಪರಿಶೀಲನೆ ಹಾಗೂ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲು ನಂಜನಗೂಡಿಗೆ ಆಗಮಿಸಿದ್ದೇನೆ ಈ ಹಿನ್ನೆಲೆಯಲ್ಲಿ ಶಾಸಕರು ಜೊತೆಗೂಡಿ ತಾಲ್ಲೂಕು ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ.ರಾಹೇಳಿದರು
ಮಾನ್ಯ ಮುಖ್ಯಮಂತ್ರಿಗಳು ಬರುವ ಹಾದಿಯಲ್ಲಿ ಪೆÇಲೀಸ್ ವ್ಯವಸ್ಥೆ ಹಾಗೂ ಬಂಧುಬಸ್ತ್ ಗಳ ವ್ಯವಸ್ಥೆ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಗಣ್ಯ ವ್ಯಕ್ತಿಗಳು ಸೇರುವ ಸ್ಥಳಗಳ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆಯುತ್ತಿದ್ದೇನೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚೇತನ್ ರವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ತಾಸಿಲ್ದಾರ್ ಶಿವಮೂರ್ತಿ ನಗರಸಭೆ ಅಧ್ಯಕ್ಷ ಮಹದೇವಸ್ವಾಮಿ ನಗರಸಭೆ ಆಯುಕ್ತರಾದ ರಾಜಣ್ಣ, ಶ್ರೀಕಂಠೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಬಿಜೆಪಿ ಮುಖಂಡರಾದ ಶಂಕ್ರಪ್ಪ ನಗರ ಅಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ ಶ್ರೀಕಂಠ ಉಪಸ್ಥಿತರಿದ್ದರು