ನ. 27ರಂದು ದೃಶ್ಯೋಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ

ಕಲಬುರಗಿ:ನ.19: ನಗರದ ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ದೃಶ್ಯೋಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ನವೆಂಬರ್ 27ರಂದು ನಗರದ ರಂಗಾಯಣದಲ್ಲಿ ಬೆಳಿಗ್ಗೆ 11-30ಕ್ಕೆ ಗಂಟೆಗೆ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ನಯನಾ ಬಿ., ಅವರು ತಿಳಿಸಿದ್ದಾರೆ.
ದೃಶ್ಯಕಲೆಯ ವಿವಿಧ ಪ್ರಕಾರಗಳಾದ ಚಿತ್ರ, ಶಿಲ್ಪ, ಗ್ರಾಫಿಕ್, ಛಾಯಾಚಿತ್ರ, ವಿಡಿಯೊ ಆರ್ಟ್, ಇನ್‍ಸ್ಟಾಲೇಷನ್ ಆರ್ಟ್, ದೃಶ್ಯಕಲಾ ವಿಮರ್ಶೆ, ಗ್ಯಾಲರಿ ಸಂಸ್ಕøತಿ ಹೀಗೆ ದೃಶ್ಯಕಲೆಯ ವ್ಯಾಪ್ತಿಯಲ್ಲಿ ಬರುವ ವಿಭಿನ್ನ ವಸ್ತು ವಿಷಯಗಳನ್ನು ಕುರಿತು ಪ್ರತಿ ತಿಂಗಳು ದೃಶ್ಯೋಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಏರ್ಪಿಡಿಸಿ, ಒಂದು ವರ್ಷದ ನಂತರ ಪ್ರತಿ ತಿಂಗಳು ಮಂಡಿಸಿದ ವಿಶೇಷ ಉಪನ್ಯಾಸಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಬೆಂಗಳೂರಿನ ಹಿರಿಯ ದೃಶ್ಯಕಲಾ ಇತಿಹಾಸಕಾರ ಡಾ. ಆರ್.ಎಚ್. ಕುಲಕರ್ಣಿ ಅವರು ‘ಕರ್ನಾಟಕದಲ್ಲಿ ದೃಶ್ಯಕಲಾ ಸಂಶೋಧನೆಯ ಆಯಾಮಗಳು ಮತ್ತು ಸಾಧ್ಯತೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ ಪಿ. ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ನಗರದ ಕಲಾ ಕಾಲೇಜಿನ ವಿದ್ಯಾರ್ಥಿಗಳು, ಚಿತ್ರ-ಶಿಲ್ಪ ಕಲಾವಿದರು, ಸಾಹಿತಿಗಳು, ರಂಗಕರ್ಮಿಗಳು ಮತ್ತು ದೃಶ್ಯಕಲೆಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ಅವರು ತಿಳಿಸಿದ್ದಾರೆ.