ನ.26, 27 ರಂದು ಎಲ್ಲರ ನಡೆ-ಬಸವಕಲ್ಯಾಣ ಕಡೆ: ಗುರುಬಸವ ಪಟ್ಟದ್ದೇವರು

ಭಾಲ್ಕಿ: ನ.20- ಇದೆ ಬರುವ ನ.26 ಮತ್ತು 27 ರಂದು ಬಸವಕಲ್ಯಾಣದಲ್ಲಿ ನಡೆಯಲಿರುವ 43ನೆಯ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಸದ್ಭಕ್ತರ ನಡೆ- ಬಸವಕಲ್ಯಾಣ ಕಡೆಯಿರಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮನವಿ ಮಾಡಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 12ನೇ ಶತಮಾನದ ಶಿವಶರಣರ ತತ್ವಾದರ್ಶಗಳನ್ನು ವಿಶ್ವ ಮಟ್ಟದಲ್ಲಿ ಪಸರಿಸಿ,ಬ.ಕಲ್ಯಾಣ ಒಂದು ಪ್ರವಾಸಿ ತಾಣವನ್ನಾಗಿಸುದೇ ಶರಣ ಕಮ್ಮಟ, ಅನುಭವ ಮಂಟಪದ ಮೂಲ ಧ್ಯೇಯವಾಗಿದೆ.
ಈ ನಿಟ್ಟಿನಲ್ಲಿ ನ.26 ಮತ್ತು 27 ರಂದು ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ನಡೆಯಲಿರುವ ಎರಡು ದಿನ ಸಮಾರಂಭದ iÀುಶಸಿಯೀಗಾಗಲೇ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಪಥ ಸಂಚಲನ :ಕಳೆದ ನ.10 ರಿಂದ ಬಸವಕಲ್ಯಾಣ ನಗರದಲ್ಲಿ ಪ್ರತಿದಿನ ಬೆಳಗ್ಗಿನ ಸುಪ್ರಭಾತ ಸಮಯದಲ್ಲಿ ಪ್ರಭಾತ ಪಥ ಸಂಚಲನ ನಡೆಯುತ್ತಿದೆ. ಸಂಜೆ ವಿವಿಧ ಬಡಾವಣೆಗಳಲ್ಲಿ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು, ನಗರದೆಲ್ಲೆಡೆ ಬಸವಮಯ ವಾತಾವರಣ ನಿರ್ಮಾಣವಾಗಿ,ಸರ್ವ ಸದ್ಭಕ್ತರು ಭವ್ಯ ಸ್ವಾಗತ ನೀಡುತಲಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಚನ ಭಾಷಣ ಏರ್ಪಡಿಸಲಾಗಿದೆ. 20 ರಂದು ಅನುಭವ ಮಂಟಪದಲ್ಲಿ ಜಿಲ್ಲಾ ಮಟ್ಟದ ವಚನ ಭಾಷಣ, ರಾಜ್ಯ ಮಟ್ಟದ ವಚನ ಕಂಠಪಾಟ ಜರುಗಲಿದೆ.

21 ರಂದು ಮಹಾರಾಷ್ಟ್ರ ರಾಜ್ಯದ ಕಾವಳಗಾವದಿಂದ ಅನುಭವ ಮಂಟಪದ ಬಸವ ಭಕ್ತರು ಪಾದಯಾತ್ರೆ ಕೈಗೊಳ್ಳಲಿದ್ದಾರೆ.23 ರಂದು ಸಂಗಮ ದಿಂದ ಅಕ್ಕನ ಬಳಗದ ಮಹಿಳೆಯರು ಪಾದಯಾತ್ರೆ ಸೇರಲಿದ್ದಾರೆ.
23 ರಂದು ಸಂಜೆ ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಪಾದಯಾತ್ರೆ ವಾಸ್ತವ್ಯ ಮಾಡಲಿದ್ದು, ವಸತಿ, ಪ್ರಸಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 24 ರಂದು ಬೆಳಿಗ್ಗೆ ಪಾದಯಾತ್ರೆ ಚನ್ನಬಸವಾಶ್ರಮದಿಂದ ಬಸವಕಲ್ಯಾಣದತ್ತ ಹೊರಡಲಿದೆ.
25 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲೆಯ ವಿವಿಧೆಡೆ ಇರುವ ಶರಣರ ಸ್ಮಾರಕಗಳಿಂದ ಅನುಭವ ಮಂಟಪಕ್ಕೆ ಜ್ಯೋತಿಯಾತ್ರೆ ಬರಲಿದೆ.
22 ರಂದು ಭಾಲ್ಕಿಯಲ್ಲಿ ಕನ್ನಡ ರಾಜ್ಯೋತ್ಸವ:
ಇದೇ ನ. 22 ರಂದು ಚನ್ನಬಸವಾಶ್ರಮದಲ್ಲಿ ಸಂಜೆ 5 ಗಂಟೆಗೆ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಶರಣ ಸಂಗಮ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭ ಜರುಗಲಿದೆ. ಈ ಸಂದರ್ಭದಲ್ಲಿ ಕನ್ನಡಕ್ಕಾಗಿ ದುಡಿದವರನ್ನು ಸನ್ಮಾನಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಶಂಭುಲಿಂಗ ಕಾಮಣ್ಣ, ಬಸವರಾಜ ಮರೆ, ಶಿವಾನಂದ ಗುಂದಗಿ, ಸುಭಾಷ ಕಾರಾಮುಂಗೆ, ಶಶಿಧರ ಕೋಸಂಬೆ, ರಾಜಕುಮಾರ ಬಿರಾದಾರ್, ಅಶೋಕ ರಾಜೋಳೆ, ಜೈರಾಜ ಧಾಬಶೆಟ್ಟೆ, ನಾಗಭೂಷಣ ಮಾಮಡಿ,ಶರಣಪ್ಪ ಬಿರಾದಾರ್, ಸಂತೋಷ ಬಿಜಿ ಪಾಟೀಲ್, ಮಾಳಸ್ಕಾಂತ ವಾಘೆ, ಸಂತೋಷ ಹಡಪದ,ಶಾಂತಯ್ಯ ಸ್ವಾಮಿ ಸೇರಿದಂತೆ ಅನೇಕರಿದ್ದರು.

ಬ.ಕಲ್ಯಾಣ ಉತ್ಸವದಲ್ಲಿ ಉತ್ಸªದ ಪಾಲ್ಗೊಳ್ಳಿ
“ಬಸವಕಲ್ಯಾಣದಲ್ಲಿ ನಡೆಯಲಿರುವ 43ನೆಯ ಶರಣ ಕಮ್ಮಟ,ಅನುಭವ ಮಂಟಪ ಉತ್ಸವದಲ್ಲಿ ನಾಡಿನ ಮಠಾಧೀಶರು, ರಾಜಕೀಯ ಮುಖಂಡರು, ಚಿಂತಕರು, ಸಾಹಿತಿಗಳು,ವಿಮರ್ಷಕರು ಭಾಗಿಯಾಗಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಜೀವನ ಪಾವನ ಮಾಡಿಕೊಂಡು,ಉತ್ಸವಕ್ಕೆ ಮೆರಗು ತರಬೇಕು.”-ಗುರುಬಸವ ಪಟ್ಟದ್ದೇವರು ಪೀಠಾಧಿಪತಿ ,ಭಾಲ್ಕಿ.