ನ 26 ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಜೆಸಿಟಿಯು ಕರೆ

ಬಳ್ಳಾರಿ, ನ.18: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ . ಜೆಸಿಟಿಯು ನಿಂದ ನ. 26ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಈ ಬಗ್ಗೆ ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಮಿತಿ ಮುಖಂಡರುಗಳು
ಅಧಿಕಾರಕ್ಕೆಬಂದ ಎಲ್ಲಾ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಯಾದ ಹೊಸ ಆರ್ಥಿಕ ನೀತಿ ಮತ್ತು ಹೊಸ ಕೈಗಾರಿಕಾ ನೀತಿ ಮತ್ತು ಖಾಸಗೀಕರಣ ನೀತಿಯನ್ನು ಜಾರಿ ಗೊಳಿಸಿದವು.ತದ ನಂತರ ಈಗ ಅಧಿಕಾರದಲ್ಲಿ ಇರುವ ಕೇಂದ್ರ ಬಿಜೆಪಿ ಸರ್ಕಾರವಂತೂ ನೂರು ಹೆಜ್ಜೆ ಮುಂದೆ ಹೋಗಿ, ದೇಶದ ಜನರ ತೆರಿಗೆ ಹಣದಿಂದ ನೆಡೆಯುವ, ಸರ್ಕಾರಿ ಸ್ವಾಮ್ಯದ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನು ಖಾಸಗಿ ಯವರ ಮಡಿಲಿಗೆ ಹಾಕಿದೆ. ಸಂಸತ್ತಿನಲ್ಲಿ ತಮಗಿರುವ ಬಹುಮತವನ್ನು ದುರುಪಯೋಗ ಪಡಿಸಿಕೊಂಡು, ಸುಗ್ರೀವಾಜ್ಞೆಗಳ ಮೂಲಕ ಕಾರ್ಮಿಕ ಕಾಯ್ದೆಗಳನ್ನು ದುರ್ಬಲಗೊಳಿಸಿ, ರೈಲ್ವೆ, ವಿಮಾನ ನಿಲ್ದಾಣ, ಬ್ಯಾಂಕ್, ಬಿಎಸ್ಎನ್ಎಲ್, ಇಂಧನ, ಕಲ್ಲಿದ್ದಲು, ಉಕ್ಕು ಸೇರಿದಂತೆ ಎಲ್ಲವನ್ನೂ ಕಾರ್ಪೊರೇಟ್ ಮನೆತನಗಳಿಗೆ ಬಿಟ್ಟು ಕೊಟ್ಟಿದೆ, ಕಾರ್ಮಿಕರ ಕನಿಷ್ಠ ವೇತನವನ್ನು ತಗ್ಗಿಸಲು ಸರ್ಕಾರಗಳು ತುದಿಗಾಲಲ್ಲಿ ನಿಂತಿವೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ಒಗ್ಗೂಡಿ ನ.26 ರ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಮುಖಂಡರುಗಳಾದ ಎಂ.ಆರ್.ಇಸ್ಮಯಿಲ್, ಜೆ.ಸತ್ಯಬಾಬು, ಸೋಮಶೇಖರಗೌಡ, ಚೆನ್ನಪ್ಪ, ಎ. ದೇವದಾಸ್, ಆದಿಮೂರ್ತಿ, ಟಿ.ಜಿ.ವಿಠ್ಠಲ್ ಮೊದಲಾದವರು ಇದ್ದರು