ನ.26 ಕಾರ್ಮಿಕರ ಸಂಘ:ಸಾರ್ವತ್ರಿಕ ಮುಷ್ಕರ-ಶರಣಬಸವ

ರಾಯಚೂರು. ನ.22-ಕಾರ್ಮಿಕರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ನ.26 ರಂದು ಸ್ವಯಂ ಪ್ರೇರಿತ ಬಂದ್ ನಡೆಸಲಾಗುತದೆ ಎಂದು ಕಾರ್ಮಿಕ ಸಂಘಗಳ ಜಂಟಿ ಸಮಿತಿ ಜಿಲ್ಲಾ ಘಟಕದ ಮುಖಂಡರಾದ ಡಿ ಎಸ್ ಶರಣಬಸವ ಅವರು ಹೇಳಿದರು.
ಅವರಿಂದು ಸುದ್ದಿಗರೊಂದಿಗೆ ಮಾತನಾಡುತ್ತ ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ನೀತಿಗಳ ವಿರುದ್ಧ ಈ ಮುಷ್ಕರವನ್ನು ಅಮ್ಮಿಕೊಳ್ಳಗಿದ್ದು, ನಮ್ಮ ಪ್ರಮುಖ 7 ಬೇಡಿಕೆಗಳಾದ
ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿದನ್ನು ಹಿಂಪಡೆಯಬೇಕು, ಸಾರ್ವಜನಿಕ ಸಂಸ್ಥೆಗಳದ ಎಲ್ಐಸಿ,ರೈಲ್ವೆ, ಬ್ಯಾಂಕಿಂಗ್ ಹಾಗೂ ಇತರ ಕ್ಷೇತ್ರಗಳ ಖಾಸಗಿಕರಣವನ್ನು ಕೈಬಿಡಬೇಕು, ಎಂದು ನ.26 ರಂದು ಕಾರ್ಮಿಕ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು,ಜಿಲ್ಲೆಯ ಜನರು ಸ್ವಯಂ ಪ್ರೇರಿತ ಬಂದ್ ಆಚರಿಸಲಾಗುತದೆ.
ನ.26ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಬೆಳಗ್ಗೆ 7 ಗಂಟೆಗೆ ಬೈಕ್ ರ್ಯಾಲಿ ನಡೆಸಿ 10 ಗಂಟೆಯಿಂದ ಬೃಹತ್ ಪ್ರತಿಭಟನಾ ಧರಣಿ ನಡೆಸಿ ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಈ ಪ್ರತಿಭಟನೆಯಲ್ಲಿ ಸಾರ್ವಜನಿಕರು,ವ್ಯಾಪಾರಿ ಸಂಘ ಸಂಸ್ಥೆಗಳು, ಪ್ರಗತಿ ಪರ ಸಂಘಟನೆಗಳು ಸೇರಿ ಮುಷ್ಕರವನ್ನು ಅಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ರವಿ,ಸಲಾವುದ್ದೀನ್,ಬಸವರಾಜ ಗಾರಲದಿನ್ನಿ,ವಿ.ಎಂ.ಉಕ್ಕೇರಿ, ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.