ನ. 26ಕ್ಕೆ ಎಐಕೆಎಸ್ ಸಿಸಿ ನಿಂದ ಪ್ರತಿಭಟನೆಗೆ ಕರೆ

ಚಿತ್ತಾಪುರ:ನ.13: ಕೇಂದ್ರ ಸರ್ಕಾರದ 4 ಹೊಸ ಕಾನೂನುಗಳು, ರಾಜ್ಯ ಸರ್ಕಾರದ ಎರಡು ಸುಗ್ರೀವಾಜ್ಞೆಗಳನ್ನು ವಿರೋಧಿಸಿ ಬೆಂಬಲ ಬೆಲೆ ಕಾನೂನು, ಋಣ ಮುಕ್ತ ಕಾಯ್ದೆ ಜಾರಿಗಾಗಿ ಹಾಗೂ ನೆರೆ ಪರಿಹಾರ, ಕರದಿ ಕೇಂದ್ರಗಳ ಆರಂಭ, ಕಬ್ಬು ಬೆಳೆಗಾರರ ಬೇಡಿಕೆಗಳು, ಕೃಷಿ ಭೂಮಿಯ ಸಕ್ರಮಕ್ಕಾಗಿ ಆಗ್ರಹಿಸಿ ನವಂಬರ್ 26ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮುಖಾಂತರ ಆಗಮಿಸಿ ಲಾಡ್ಜಿಂಗ್ ಕ್ರಾಸ್ ನಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ್ ಮ್ಯಾಗೇರಿ, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ದೇವಮ್ಮ ಅನ್ನದಾನಿ, ಸುನಿತಾ ಕುಂಬಾರ್, ಸುವರ್ಣ, ನಾಗರಾಜ್, ಪಾರ್ವತಿ ಡೊಣ್ಣೊರ, ನಾಗೇಂದ್ರ ಡಿಗ್ಗಿ, ಮಹಾನಂದ, ಅಕ್ಕಮಹಾದೇವಿ ಭೃಂಗಿಮಠ, ಕಾಶಮ್ಮ ಡೋಣಗಾಂವ್, ವೆಂಕಟಮ್ಮ ರಾಜೋಳ, ಮಲ್ಲಣ್ಣ ಹೂನಗುಂಟ್ಟಿ, ಸೇರಿದಂತೆ ಇತರರಿದ್ದರು.