ನ.23 : ವಚನ ಸಿಂಚನ ಕೃತಿ ಲೋಕಾರ್ಪಣೆ

ರಾಯಚೂರು.ನ.21-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಿದ್ಧಾರ್ಥ ಲುಂಬಿನಿ ಗಾರ್ಡನ್ ಬಳಗ ಇವರ ಸಹಯೋಗದಲ್ಲಿ ವಚನ ಸಿಂಚನ ಆಧುನಿಕ ವಚನಗಳು ಕೃತಿ ಲೋಕಾರ್ಪಣೆನ್ನು ನ.23 ರಂದು ಅಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ದ ಗೌರವ ಅಧ್ಯಕ್ಷ ಭೀಮನಗೌಡ ಇಟಗಿ ಅವರು ಹೇಳಿದರು.
ಅವರಿಂದು ಸೂದ್ಫಿಗರೊಂದಿಗೆ ಮಾತಾನಡುತ್ತ ಯುವ ಕವಿ ಸುರೇಶ್ ಬಾಬು ಅವರು ರಚಿಸಿದ ವಚನ ಸಿಂಚನ ಆಧುನಿಕ ವಚನಗಳು ಕೃತಿ ಲೋಕಾರ್ಪಣೆಯನ್ನು ನ.23ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಶಾಸಕ ಡಾ. ಎಸ್.ಶಿವರಾಜ ಪಾಟೀಲ ಅವರು ನೆರವೇರಿಸಲಿದ್ದು ಕೃತಿ ಲೋಕಾರ್ಪಣೆಯನ್ನು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾಡಲಿದ್ದು ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷತರಾದ ಡಾ.ಬಸವಪ್ರಭು ಪಾಟೀಲ್ ಅವರು ವಹಿಸಿದ್ದು, ಕೃತಿ ಪರಿಚಯವನ್ನು ಮಾನ್ವಿ ಸಾಹಿತಿ ರಮೇಶ ಬಾಬು ಯಳಾಗಿ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ವೀರಹನುಮಾನ,ಜಗನ್ನಾಥ ಸುಂಕಾರಿ,
ಈ ಸಂದರ್ಭದಲ್ಲಿ ಡಾ.ಭಾಸ್ಕರ ಹರವಿ, ಪ್ರಭುದೊರೆ, ಈರಣ್ಣ ಬೆಂಗಾಲಿ ,ರಮೇಶ.ಬಿ,ಶ್ರೀನಿವಾಸ್ ,ರವಿಚಂದ್ರ ,ಭೀಮಣ್ಣ,ಹಾಗೂ ಕೃತಿಕಾರರದ ಸುರೇಶ್ ಬಾಬು ಜಂಬಲದಿನ್ನಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಕಲ್ ಹನುಮಂತಪ್ಪ, ಸುರೇಶ್ ಬಾಬು,ರವಿಚಂದ್ರನ, ಷಣ್ಮುಖ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.