ನ.23ರಂದು ಶ್ರೀ ಬೀರೇಶ್ವರ ಕಾರ್ತಿಕೋತ್ಸವ

ಶಿರಹಟ್ಟಿ,ನ.22: ಶ್ರೀ ಬೀರೇಶ್ವರ ಸೇವಾ ಸಮಿತಿ ಹಾಗೂ ಪರಂಪರೆ ಜಾನಪದ ಕಲಾತಂಡ ಮತ್ತು ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರದಲ್ಲಿ ನ.23ರಂದು 17ನೇ ವರ್ಷದ ಶ್ರೀ ಬೀರೇಶ್ವರ ಕಾರ್ತಿಕೋತ್ಸವ ನಡೆಯಲಿದೆ. ಸಂಜೆ 6 ಘಂಟೆಗೆ ಮೂಡಲಗಿಯ ಜನಪದ ಜಾಣ ಶಬ್ಬೀರ ಡಾಂಗೆ ಮತ್ತು ತಂಡವರಿಂದ ಲೈವ್ ಮ್ಯೂಜಿಕ್ “ಚಿಲಿಪಿಲಿ” ಜನಪದ ರಸಮಂಜರಿ ಹಾಗೂ “ಮನಸರ ಹೆಂಗ ಬಂತ ಗೆಳತಿ” ಜಾನಪದ ಕಾರ್ಯಕ್ರಮ ಜರುಗಲಿದೆ. ನ.24 ರಂದು “ಡೋಲು ಡೋಲು ಡಂಗುರ” ಎಂಬ ಭರ್ಜರಿ ಡೊಳ್ಳಿನ ಪದಗಳ ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನ 40 ಸಾವಿರ, ದ್ವೀತಿಯ ಬಹುಮಾನ 30 ಸಾವಿರ, ತೃತೀಯ ಬಹುಮಾನ 20 ಸಾವಿರ, ನಾಲ್ಕನೇ ಬಹುಮಾನ 10 ಸಾವಿರ, ಐದನೇ ಬಹುಮಾನ 5 ಸಾವಿರ ಹಾಗೂ ಪ್ರಶಸ್ತಿ ಪತ್ರ, ಟ್ರೋಫಿ ನೀಡಲಾಗುತ್ತದೆ. 1.25 ರಂದು ಶುಕ್ರವಾರ ಮುಂಜಾನೆ 10 ಘಂಟೆಗೆ ಶ್ರೀ ಬೀರೇಶ್ವರ ಪಲ್ಲಕ್ಕಿ ಉತ್ಸವವು ಅದ್ಧೂರಿ ಡೊಳ್ಳಿನ ಮಜಲಿನೊಂದಿಗೆ ಜರುಗಲಿದೆ ಎಂದು ಶ್ರೀ ಬೀರೇಶ್ವರ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.