ನ. 23ರಂದು ಭಜನಾ ಸ್ಪರ್ಧೆ

ಚನ್ನಮ್ಮನ ಕಿತ್ತೂರ,ನ. 22 ಗ್ರಾಮೀಣ ಭಾಗದಲ್ಲಿ ಕಲೆ ನಶಿಸಿ ಹೋಗುತ್ತಿದೆ. ಅದನ್ನು ಬೆಳೆಸುವಕೋಸ್ಕರ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಕಲೆಯನ್ನು ನಾಡಿಗೆ ಪರಿಚಯಿಸುವ ಕೆಲಸವಾಗಬೇಕೆಂದು ಕಾಂಗ್ರೇಸ್ ಮುಖಂಡ, ಸಮಾಜ ಸೇವಕ ಹಬೀಬ ಶಿಲ್ಲೇದಾರ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ನ. 23ರಂದು 10 ಗಂಟೆಗೆ ಮುಂಜಾನೆ ಸಮೀಪದ ಅಂಡಗಟ್ಟಿಯ ಸತೀಶಣ್ಣಾ ಕಲ್ಯಾಣ ಮಂಟಪದ ಜಾರಕಿಹೊಳಿ ಅಭಿಮಾನಿ ಬಳಗದವರಿಂದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ. ಇದರ ಸದುಪಯೋಗ ಕಲಾವಿದರು. ಪಡೆದುಕೊಳ್ಳಬೇಕು, ಸ್ಪರ್ಧೆಯಲ್ಲಿ ಕಿತ್ತೂರ ಕ್ಷೇತ್ರದಲ್ಲಿರುವ ಭಜನಾ ತಂಡಗಳು ಮಾತ್ರ ಭಾಗವಹಿಸಬೇಕು. ಪ್ರಥಮ ಬಹುಮಾನ ರೂ.25000, ದ್ವಿತೀಯ ರೂ.15000, ತೃತೀಯ ರೂ.10000, ಹೆಸರು ನೋದಾಯಿಸಲು ಮೊ. 9945329535 ಈ ಸಂಖ್ಯೆ ಸಂಪರ್ಕಿಸಬಹುದು ಎಂದರು.
ಸಾನಿಧ್ಯ ಕಿತ್ತೂರ ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ, ಉದ್ಘಾಟಕರಾಗಿ ಬೈಲಹೊಂಗಲ ಆರಿದ್ರಮಠದ ಮಹಾಂತ ಶಾಸ್ತ್ರಿಗಳು, ವಹಿಸಿದ್ದಾರೆ.