ನ 22 ಹೊಸಪೇಟೆಗೆ ಡಿಕೆಶಿ

ಬಳ್ಳಾರಿ, ನ.18: ಕಾರ್ಯಕರ್ತರ ಮತ್ತು ಮುಖಂಡರ ಸಭೆ ನಡೆಸಲು ನ 22 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಹೊಸಪೇಟೆ ನಗರಕ್ಕೆ ಆಗಮಿಸಲಿದ್ದಾರೆ.
ಅಂದು ಮಧ್ಯಾಹ್ನ 12 ರಿಂದ ಸಂಜೆ 5 ರ ವರೆಗೆ ಬಳ್ಳಾರಿ ನಗರ ಮತ್ತು ಗ್ರಾಮೀಣ ಸಮಿತಿ ಮುಖಂಡರ ಸಭೆ ನಡೆಸಲಿದ್ದು. ನಂತರ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ.
ಸಂಜೆ 6 ರಿಂದ ಕೊಪ್ಪಳ‌ ಜಿಲ್ಲೆಯ‌ ಕಾಂಗ್ರೆಸ್ ಶಾಸಕರು, ಪರಾಜಿತ ಅಭ್ಯರ್ಥಿಗಳು‌ ಮತ್ತು ಹಿರಿಯ ಮುಖಂಡರುಗಳ‌ ಜೊತೆಯಲ್ಲಿ ಮಾತನಾಡಿ ಅಂದು‌ ಹೊಸಪೇಟೆಯಲ್ಲಿಯೇ ವಾಸ್ತವ್ಯ ಮಾಡಿ ಮರುದಿನ ಮಸ್ಕಿಗೆ ಪ್ರಯಾಣ ಮಾಡಲಿದ್ದಾರೆ ಎಂದು‌ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ತಿಳಿಸಿದ್ದಾರೆ.