ನ. 22 ರಿಂದ ಬಹುಶಿಸ್ತೀಯ ಸಂಶೋಧನೆಗಳ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ

ಕಲಬುರಗಿ;ನ.20: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಪೂಜ್ಯ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿಯವರÀ 53ನೇ ಜನ್ಮದಿನೋತ್ಸವದಂಗವಾಗಿ ಕಲಬುರಗಿ ನಗರದಲ್ಲಿ ನವೆಂಬರ್ 22ರಿಂದ ಮೂರು ದಿನಗಳ ಬಹುಶಿಸ್ತೀಯ ಸಂಶೋಧನೆ ಕುರಿತ ಅಂತರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ಕಲಬುರಗಿಯ ಐಇಟಿಇ ಉಪ ಕೇಂದ್ರ, ಐಎಸ್‍ಟಿಇ ನವದೆಹಲಿ, ಮಹಿಳಾ ಇಂಜಿನಿಯರಿಂಗ್ (ಡಬ್ಲ್ಯುಐಇ) ಮತ್ತು ಐಇಇಇ ಸಹಯೋಗದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ನಗರದ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಉದ್ಘಾಟನೆಗೊಳ್ಳಲಿದೆ. ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‍ನ ಆಯಾ ವಿಭಾಗಗಳಲ್ಲಿ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ.

ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಮತ್ತು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ ವಿ.ನಿಷ್ಠಿ ಅವರು ಕಲಬುರಗಿ ನಗರದಲ್ಲಿ ಭಾನುವಾರ ಜಂಟಿ ಹೇಳಿಕೆ ನೀಡಿ ಸಮ್ಮೇಳನವನ್ನು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‍ಯು) ಉಪಕುಲಪತಿ ಡಾ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಉದ್ಘಾಟಿಸಲಿದ್ದಾರೆ. ಮತ್ತು ಐಇಟಿಇಯ ರಾಷ್ಟ್ರೀಯ ಅಧ್ಯಕ್ಷ ಪೆÇ್ರ ವಿ ಗುಣಶೇಖರ್ ರೆಡ್ಡಿ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಮುಖರಾದ ಸಿಂಗಾಪುರದ ಬಯೋಟೆಕ್ನಾಲಜಿ ವಿಭಾಗದ ಹಿರಿಯ ವಿಜ್ಞಾನಿ ಡಾ.ಜಡೇಗೌಡ ಎಲಿಗಾರ್, ಟರ್ಕಿಯ ಉಲುದಾಗ್ ವಿಶ್ವವಿದ್ಯಾಲಯದ ಖ್ಯಾತ ಗಣಿತಶಾಸ್ತ್ರಜ್ಞ ಪೆÇ್ರ.ಇಸ್ಮಾಯಿಲ್ ನಾಸಿ ಕಂಗುಲ್, ಮಲೇಷ್ಯಾದ ಸೆನ್ಸ್ ವಿಶ್ವವಿದ್ಯಾಲಯದ ಡಾ.ರೋಸ್ಲಿ ಮೊಹಮ್ಮದ್ ಹಸನ್, ನಾರ್ವೆಯ ವೆಸ್ಟರ್ನ್ ನಾರ್ವೆ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್‍ನಿಂದ ಡಾ ಜೆರ್ರಿ ಚುನ್ ವೀ ಲಿಲ್, ಇಟಲಿಯ ಸಾನ್ನಿಯೊ ವಿಶ್ವವಿದ್ಯಾಲಯದ ಪೆÇ್ರಫೆಸರ್ ಉಲ್ಲೊ ಸಿಲ್ವಿಯಾ ಲಿಬೆರಾಟಾ, ಇಸ್ರೇಲ್‍ನ ಹೈಫಾ ವಿಶ್ವವಿದ್ಯಾಲಯದ ಪೆÇ್ರಫೆಸರ್ ತೌಫಿಕ್ ಮನ್ಸೂರ್, ಸಿಂಗಾಪುರನ ಐಇಇಇನ ಹಿರಿಯ ಸದಸ್ಯ ಪೆÇ್ರ ಸ್ಯಾಮ್ಯುಯೆಲ್ ಜಿಗ್ಮೆ ಹ್ಯಾರಿಸನ್, ಕೆನಡಾದ ಸಾಫ್ಟ್‍ವಾರ್ ಡೆವಲಪರ್ ಶ್ರೀಮತಿ ನಂದಿನಿ ಶಿವಾನಂದನ್, ಕುವೈತ್ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಡಾ ಅಲಿ ಜೆ ಚಮ್ಖಾ, ಪ್ರಸಿದ್ಧ ವಾಸ್ತುಶಿಲ್ಪಿ ಹಿಮಾಂಶು ಪಟೇಲ್, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದ ಮಾಧ್ಯಮ ಅಧ್ಯಯನದ ಮುಖ್ಯಸ್ಥ ಶ್ರೀ ಓಂಕಾರ ಕಾಕಡೆ, ದಿ ಹಿಂದೂ ಪತ್ರಿಕೆಯ ಹೈದರಾಬಾದ್‍ನ ಸಿಟಿ ಎಡಿಟರ್, ಶ್ರೀ ಸಿರೀಶ್ ನಾನಿಶೆಟ್ಟಿ, ಬೆಂಗಳೂರಿನ ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಅಸೋಸಿಯೇಟ್ ಎಡಿಟರ್, ಶ್ರೀ ರಾಮು ಪಾಟೀಲ್, ಹುಬ್ಬಳ್ಳಿಯ ಪ್ರಜಾವಾಣಿ ಪತ್ರಿಕೆಯ ಬ್ಯೂರೋ ಚೀಫ್ ಶ್ರೀಮತಿ ಎಸ್ ರಶ್ಮಿ, ಸುವರ್ಣ ಟಿವಿ ಇನ್‍ಪುಟ್ ಹೆಡ್ ಎಂ ಸಿ ಶೋಭಾ, ದಿ ಹಿಂದೂ ಪತ್ರಿಕೆಯ ವಿಶೇಷ ವರದಿಗಾರ ಶ್ರೀ ರಿಷಿಕೇಶ್ ಬಹದ್ದೂರ್ ದೇಸಾಯಿ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವಿಶೇಷ ವರದಿಗಾರರಾದ ಹೆಚ್ ಎಸ್ ಶ್ರೇಯಸ್ ಮತ್ತು ಇತರರು ಸಮ್ಮೇಳನದ ತಾಂತ್ರಿಕ ಗೋಷ್ಠಿಗಳಲ್ಲಿ ಮುಖ್ಯ ಆಕರ್ಷಣೆಯಾಗಿರುತ್ತಾರೆಂದು ತಿಳಿಸಿದ್ದಾರೆ.

ಪ್ರಕಟಣೆಯಲ್ಲಿ ಸಮ್ಮೇಳನದ ವಿವಿಧ ತಾಂತ್ರಿಕ ಗೋಷ್ಠಿಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ 200 ಕ್ಕೂ ಹೆಚ್ಚು ಪೇಪರ್‍ಗಳನ್ನು ಪ್ರಸ್ತುತಪಡಿಸಲಾಗುವುದು ಮತ್ತು ಇದನ್ನು ಸ್ಕೋಪಸ್ ಇಂಡೆಕ್ಸ್ ಮತ್ತು ಯುಜಿಸಿ ಕೇರ್ ಲಿಸ್ಟ್ ಜರ್ನಲ್‍ಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ. ಸಮ್ಮೇಳನದ ಮತ್ತೊಂದು ವೈಶಿಷ್ಟ್ಯವೆಂದರೆ ಲಲಿತಕಲಾ ವಿಭಾಗವು ಅಂತÀರಾಷ್ಟ್ರೀಯ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಿದ್ದು, ಇದರಲ್ಲಿ ವಿವಿಧ ದೇಶಗಳ 67 ಕ್ಕೂ ಹೆಚ್ಚು ಪ್ರತಿಷ್ಠಿತ ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ತಾಂತ್ರಿಕ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರಾಗಿ ಐಐಎಸ್‍ಸಿ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಡಾ.ಅಶೋಕ್ ರಾವ್, ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಬಿ.ಡಿ.ಪರಮೇಶಚಾರಿ ಹಾಗೂ ಡಾ.ವಿ.ಲೋಕೇಶ, ಡಾ.ಬಸವರಾಜ ಬೆಣ್ಣಿ, ಡಾ.ಅಭಾ ಅಗರ್ವಾಲ್ ಸೇರಿದಂತೆ ಹಲವರು ಉಪಸ್ಥಿತರಿರುವರು.

ಸಮ್ಮೇಳನದ ಮತ್ತೊಂದು ವೈಶಿಷ್ಟ್ಯವೆಂದರೆ ಯುಜಿ, ಪಿಜಿ ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಕ್ರಮವಾಗಿ ನವೆಂಬರ್ 21 ಮತ್ತು 25 ರಂದು ನಡೆಯುವ ಪೂರ್ವ ಮತ್ತು ನಂತರದ ಕಾನ್ಫರೆನ್ಸ್ ಟ್ಯುಟೋರಿಯಲ್ ನಡೆಸಲಾಗುವುದು. ಪೂರ್ವ ಮತ್ತು ನಂತರದ ಕಾನ್ಫರೆನ್ಸ್ ಟ್ಯುಟೋರಿಯಲ್ ಗೋಷ್ಠಿಗಳ ಅಧ್ಯಕ್ಷತೆಯನ್ನು ಡಾ ಅಶೋಕ್ ರಾವ್, ಶ್ರೀ ರಾಘವೇಂದ್ರ ಜಿ ಸರಾಫ್, ಶ್ರೀ ಸ್ಯಾಮ್ಯುಯೆಲ್ ಜಿಗ್ಮೆ ಹ್ಯಾರಿಸನ್ ಮತ್ತು ಶ್ರೀ ರಾಘವೇಂದ್ರ ಉರಲ್ ಕೆ.ಎಸ್. ವಹಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.