ನ. 22 ರಂದು ಜಗಳೂರಿನಲ್ಲಿ ಜನಸಂಕಲ್ಪಯಾತ್ರೆ

ಜಗಳೂರು.ನ.೧೨: ಕುರುಬ ಮತ್ತು ಛಲವಾದಿ ಸಮಾಜಗಳಿಗೆ ತಲಾ 25 ಲಕ್ಷ ವೆಚ್ಚದಲ್ಲಿ  ಸಮುದಾಯಭವನಗಳ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು.ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಹಾಗೂ ವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎರಡು ಸಮಾಜಗಳ ಆಶೀರ್ವಾದ ನನ್ನ ಮೇಲಿದ್ದ ಫಲವಾಗಿ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವೆ ನಿಮ್ಮ ಋಣ ತೀರಿಸುವೆ ಎಂದ ಅವರು ಛಲವಾದಿ ಸಮಾಜದ ನಿವೇಶನ ಖರೀದಿಗೆ 1ಲಕ್ಷದ 50 ಸಾವಿರ ಅನುದಾನ ವೈಯಕ್ತಿಕವಾಗಿ ನೀಡಿರುವೆ ಭದ್ರಾಮೇಲ್ದಂಡೆ ಯೋಜನೆ ಭೂಮಿಪೂಜೆಯನ್ನು ಡಿಸೆಂಬರ್ ನಲ್ಲಿ ಭೂಮಿಪೂಜೆ ಹಾಗೂ ಮಹತ್ತರ ಕನಸಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 436 ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆಯಲ್ಲಿದ್ದು.ಶೀಘ್ರ ಶಂಕುಸ್ಥಾಪನೆ ನೆರವೇರಿಸುವೆ ಎಂದರು.

ನ. 22 ರಂದು ಜರುಗಲಿರುವ ಜನಸಂಕಲ್ಪಯಾತ್ರೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಗವಹಿಸಲಿದ್ದು.ನೀರಾವರಿ ಸೌಲಭ್ಯ ಸೇರಿದಂತೆ ಇಬ್ಬರು ಮುಖ್ಯಮಂತ್ರಿಗಳ ಕೊಡುಗೆ ತಾಲೂಕಿಗೆ ಅಪಾರವಾಗಿದೆ ಅವರಿಗೆ ಅದ್ದೂರಿ ಸ್ವಾಗತ ಕೋರಬೇಕಿದೆ ಎಂದು ಕರೆ ನೀಡಿದರು.ರಾಷ್ಟ್ರೀಯ ಹಬ್ಬಗಳಿಗೆ ಶಿಷ್ಟಾಚಾರಸಲ್ಲದು.

ಮಹಾನೀಯರ ಜಯಂತಿ ಕಾರ್ಯಕ್ರಮಕ್ಕೆ ಯಾರೊಬ್ಬರೂ ವಂಚಿತರಾಗುವುದು ಬೇಡ ಮುಂದೆಯೂ ಪಾಲಿಸಬೇಡಿ ಎಂದು ತಹಶೀಲ್ದಾರ್ ಗೆ ಸೂಚಿಸಿದರು.ಜನೆವರಿ ತಿಂಗಳಲ್ಲಿ 4ದಿನಗಳ ಕಾಲ ಹೊನಲುಬೆಳಕಿನ ಪುರುಷ ಹಾಗೂ ಮಹಿಳಾ ಕಬ್ಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗುವುದು ಎಂದರು.ಮಾಜಿ ಜಿ.ಪಂ ಸದಸ್ಯ ಸೊಕ್ಕೆ ನಾಗರಾಜ್,ಕನಕದಾಸರ ಹಾಗೂ ವೀರ ಒನತೆ ಜಯಂತಿಗಳ ಜಂಟಿಯಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ, ತಾಲೂಕಿನ ಕುರುಬ ಸಮಾಜದ ರೈತಾಪಿ ವರ್ಗ ಕಟಾವಿನಲ್ಲಿ ನಿರತರಾಗಿರುವುದರಿಂದ ಅಚ್ಚುಕಟ್ಟಾಗಿ ನಡೆದಿದೆ ಶಿಷ್ಟಾಚಾರ ಮುಖ್ಯವಲ್ಲ ಮಹಾನೀಯರು ಎಲ್ಲರ ಆಸ್ತಿಯಾಗಿದ್ದು. ಮುಂದಿನ ದಿನಗಳಲ್ಲಿ ಅದ್ದೂರಿ ಆಚರಣೆ ನಡೆಸಲಾಗುವುದು ಎಂದು ತಿಳಿಸಿದರು.ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಮಾತನಾಡಿ,ಸಮಾಜದಲ್ಲಿ ಎಲ್ಲಾ ಸಮುದಾಯಗಳು ಸಾಮರಸ್ಯತೆಯಿಂದ ಜೀವನ ಸಾಗಿಸಬೇಕು.ಮಹಾನೀಯರು ಜನಿಸಿದ ಜಾತಿ ಮುಖ್ಯವಲ್ಲ ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸುವ ಅಂತರoಗದ ಭಾವನೆ ಬದಲಾಗಬೇಕು ಕನಕನ ಜ್ಞಾನ ,ಓಬವ್ವನ ಶೌರ್ಯ ಪರಾಕ್ರಮ ಇಂದಿಗೂ ಜೀವಂತವಾಗಿವೆ ಎಂದರು.ಇದೇ ವೇಳೆ ನಿವೃತ್ತ ಉಪನ್ಯಾಸಕ ತಿಮ್ಮರಾಜ್,ಶಿಕ್ಷಕಿ ರಾಣಿ, ಸಮಾಜಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಸಿ.ತಿಪ್ಪೇಸ್ವಾಮಿ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ,ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ತಹಶೀಲ್ದಾರ್ ಸಂತೋಷ್ ಕುಮಾರ್,ತಾ.ಪಂ ಇಓ ಚಂದ್ರಶೇಖರ್ ,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ,ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ,ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ,ಸಿದ್ದಪ್ಪ,ಕುರುಬ ಸಮಾಜದ ತಾಲೂಕು ಅಧ್ಯಕ್ಷ ಓಮಣ್ಣ,ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ನಿಜಲಿಂಗಪ್ಪ,ಮುಖoಡರಾದ ಉದಯ

ಶಂಕರ್ ಒಡೆಯರ್,ಸೇರಿದಂತೆ ಭಾಗವಹಿಸಿದ್ದರು.