ನ.22 ಕ್ಕೆ ಎಐಟಿಯುಸಿ ಶತಮಾನೋತ್ಸವ ಆಚರಣೆ


ದಾವಣಗೆರೆ.ನ.೧೭; ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನಿಂದ ನ.೨೨ ರ ಬೇಳಗ್ಗೆ ೧೦.೩೦ಕ್ಕೆ ನಿಟುವಳ್ಳಿಯಲ್ಲಿರುವ ಸಿಪಿಐ ಕಾಂಪ್ಲೆಕ್ಸ್ ನಲ್ಲಿ ಶತಮಾನೋತ್ಸವ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಮುಖಂಡ ಹೆಚ್.ಕೆ ರಾಮಚಂದ್ರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಎಐಟಿಯುಸಿ ನೂರು ವರ್ಷದ ಸಂಭ್ರಮ ಆಚರಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿಯೂ ಸಹ ಆಚರಣೆ ಮಾಡಲಾಗುತ್ತಿದೆ. ನ.೨೨ ರಂದು ನಡೆಯುವ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಕೆ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.ಖಜಾಂಜಿ ಆನಂದರಾಜ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಂಗಳೂರು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಡಿ.ಎ ವಿಜಯಭಾಸ್ಕರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆವರಗೆರೆ ಚಂದ್ರು,ಟಿ.ಎಸ್ ನಾಗರಾಜ್,ಹೆಚ್.ಜಿ ಉಮೇಶ್,ರಾಘವೇಂದ್ರ ನಾಯರಿ,ಎಂ.ಬಿ ಶಾರದಮ್ಮ,ಮಹಮ್ಮದ್ ಬಾಷಾ,ಹೆಚ್.ಕೆ ಕೊಟ್ರಪ್ಪ,ಮಹಮ್ಮದ್ ರಫೀಖ್,ಸರೋಜಮ್ಮ ಉಪಸ್ಥಿತರಿರುವರು.ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರ್ಮಿಕವರ್ಗ ಮಹತ್ತರ ಪಾತ್ರ ವಹಿಸಿತ್ತು. ಆದರೆ ನಂತರದ ದಿನಗಳಲ್ಲಿ ಕಾರ್ಮಿಕ ವರ್ಗ ಕಡೆಗಣನೆಗೆ ಒಳಗಾಗಿದ್ದ ಸಂದರ್ಭದಲ್ಲಿ ನಿರಂತರ ಹೋರಾಟದ ಫಲವಾಗಿ ಸಂಘಟಿತಗೊಂಡು ಹೋರಾಟದಲ್ಲಿ ತೊಡಗಿದೆ. ಆದರೆ ಎಐಟಿಯುಸಿ ಇಂದು ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪೋಳ್ಳು ಘೋಷಣೆ ಭಾಷಣಗಳಿಂದ ದುಡಿಯುವ ಜನರನ್ನು ದಿಕ್ಕು ತಪ್ಪಿಸುತ್ತಿದೆ.ದೇಶದ ಸಂವಿಧಾನವನ್ನು ಬುಡಮೇಲು ಮಾಡಿ ದೇಶವನ್ನು ಫ್ಯಾಸಿಸಂ ಕಡೆಗೆ ಒಯ್ಯುತ್ತಿದೆ. ನೂರು ವರ್ಷಗಳ ಹೋರಾಟಗಳಿಂದ ಗಳಿಸಿದ ಕಾರ್ಮಿಕರಿಗೆ ಸಂಬಂಧಿಸಿದ ಎಲ್ಲಾ ಕಾನೂನುಗಳನ್ನು ೪ ಸಂಹಿತೆಗಳಲ್ಲಿ ಕೂಡಿಸಿ ಹಿಂದೆ ಗಳಿಸಿದ್ದ ಅನೇಕ ಹಕ್ಕುಗಳನ್ನು ದಮನ ಮಾಡಿ ಕಾರ್ಮಿಕ ವರ್ಗವನ್ನು ಕಾರ್ಪೋರೇಟ್ ಧಣಿಗಳ ಶೊಷಣೆಗೆ ಕೇಂದ್ರ ಸರ್ಕಾರ ತಳ್ಳಿದೆ ಎಂದು ಆರೋಪಿಸಿದರು.