ನ.21 ರಂದು ಧರಣಿ ಸತ್ಯಾಗ್ರಹ


ಲಕ್ಷ್ಮೇಶ್ವರ,ನ.17: ಕುರುಬ ಜನಾಂಗವನ್ನು ಎಸ್ ಟಿ ಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಇದೇ ನವಂಬರ್ 21ರಂದು ಸೋಮವಾರ ದಿವಸ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ ಕುರುಬರ ಸಂಘದ ಅಧ್ಯಕ್ಷರಾದ ನಿಂಗಪ್ಪ ಬನ್ನಿ ಹೇಳಿದರು.
ಅವರು ಬುಧವಾರ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕುರಿತ ಮಾಹಿತಿ ನೀಡಿ ಪ್ರತಿಭಟನಾ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದವರು ಕುರುಬ ಜನಾಂಗ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ತೀರಾ ಹಿಂದುಳಿದದ್ದು ಈ ಜನಾಂಗದ ಹಿತ ಕಾಪಾಡಲು ಸರ್ಕಾರ ಈಗಾಗಲೇ ಕುಲಶಾಸ್ತ್ರ ಅಧ್ಯಯನ ವರದಿಯು ಕೈ ಸೇರಿದ್ದು ಸಂಪುಟ ಸಭೆಯಲ್ಲಿ ಶಿಫಾರಸು ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸುವಂತೆ ಹಕ್ಕತ್ತಾಯ ಮಂಡನೆ ಮಾಡಲು ಸೋಮವಾರ ಕುರುಬ ಜನಾಂಗದ ಬೃಹತ್ ರ್ಯಾಲಿಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು ಜನಾಂಗದವರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಪ್ರದೇಶ ಕುರುಬರ ಸಂಘ ಹಾಗೂ ರಾಯಣ್ಣ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದು ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹಾಲು ಮತ ಮಹಾಸಭಾದ ತಾಲೂಕ ಘಟಕದ ಅಧ್ಯಕ್ಷ ಪ್ರಸಾದ ಆಡಿನ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹುಲ್ಲೂರು ಅಮೋಘಮಠದ ಶ್ರೀ ಸಿದ್ದೇಶ್ವರ ಶ್ರೀಗಳು ಮುಖಂಡರಾದ ಸೋಮಣ್ಣ ಬೆಟಗೇರಿ ಸತೀಶ್ ಗೌಡ ಪಾಟೀಲ್ ಸಿದ್ದಣ್ಣ ದುರ್ಗಣ್ಣವರ ಸುರೇಶ್ ತಳ್ಳಳ್ಳಿ, ಸುರೇಶ ಹಟ್ಟಿ ಮಹೇಶ ಸೂರಣಗಿ ಮಂಜು ಮುಳುಗುಂದ ಶಿವರಾಜ ಹೆಗ್ಗಣ್ಣವರ ನೀಲಪ್ಪ ಪಡೆಗೇರಿ ಹಾಲೇಶ್ ಡೊಳ್ಳಿನ ಮಂಜಪ್ಪ ಸೇರಿಸುವುದು ನೀಲಪ್ಪ ಪೂಜಾರ ದೇವಣ್ಣ ಮತ್ತೂರ್ ಸೇರಿದಂತೆ ಅನೇಕರಿದ್ದರು.