ನ.21ರಂದು ಬಸವೇಶ್ವರ ಮೂರ್ತಿ ಅನಾವರಣ

ಚಿಂಚೋಳಿ:ನ.8: ತಾಲೂಕಿನ ಚೆನ್ನೂರ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಜಗಜ್ಯೋತಿ ಬಸವೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಇದೇ ನ.21ರಂದುಹಮ್ಮಿಕೊಳ್ಳಲಾಗಿದೆ.
ಅನಾವರಣ ಕಾರ್ಯಕ್ರಮದ ಪೂರ್ವ ಸಿದ್ದತೆಯನ್ನು ವಿಕ್ಷಿಸಲು ಚೆನ್ನೂರ ಗ್ರಾಮಕ್ಕೆ ಶಾಸಕರಾದ ಡಾ. ಅವಿನಾಶ್ ಜಾಧವ್ ಅವರು, ಭೇಟಿ ನೀಡಿ ಜಗಜ್ಯೋತಿ ಬಸವೇಶ್ವರ ಮೂರ್ತಿಯ ಅನಾವರಣ ಕಾರ್ಯಕ್ರಮದ ಸಿದ್ಧತೆ ಹಾಗೂ ಕಾರ್ಯಕ್ರಮ ವೇದಿಕೆ ಸ್ಥಳವನ್ನು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಅಲ್ಲಂಪ್ರಭು ಪಾಟೀಲ ಹುಲಿ. ವೀರಶೈವ ಸಮಾಜದ ತಾಲೂಕ ಯುವ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ. ಶೈಲೇಶ್ ಹುಲಿ. ಸತೀಶ್ ರೆಡ್ಡಿ. ಮತ್ತು ಅನೇಕ ಚೆನ್ನೂರ ಗ್ರಾಮಸ್ಥರು ಇದ್ದರು