ನ. 20 ರಂದು ವಿಶೇಷ ರೈಲಿಗೆ ಪೂಜೆ

ಹುಬ್ಬಳ್ಳಿ,ನ18: ನೂತನವಾಗಿ ವಿಜಯಪುರ ಹಾಗೂ ಬೆಳಗಾವಿಯಿಂದ ಶಬರಿಮಲೈಗೆ ಸಂಪರ್ಕ ಕಲ್ಪಿಸಿದ್ದು, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಶಬರಿಮಲೈಗೆ ಹೋಗುವ ವಿಶೇಷ ರೈಲಿಗೆ ನವೆಂಬರ್ 20 ರಂದು ಮಧ್ಯಾಹ್ನ 2 ಗಂಟೆಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ಭಾರತೀಯ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಬಾರ್ಕಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಪೂಜಾ ಕಾರ್ಯಕ್ರಮದಲ್ಲಿ ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಳ್ಳೂರ ಉಮೇಶ್, ಆನಂದ ಗುರುಸ್ವಾಮಿ, ಮೋಹನ್ ಗುರುಸ್ವಾಮಿ, ಪ್ರಭಾಕರ ಗುರುಸ್ವಾಮಿ, ಡಾ. ವಿ.ಎಸ್.ವಿ ಪ್ರಸಾದ್, ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಎಸ್.ಟಿ. ಶಿವಗುರು ಹಾಗೂ ಉ.ಕ ಭಾಗದಿಂದ ಹಿರಿಯ ಗುರುಸ್ವಾಮಿಯವರು ಆಗಮಿಸಿ ರೈಲಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮೋಹನ್ ಗುರುಸ್ವಾಮಿ, ಬಸವರಾಜ ನೇವನೂರ, ಮುತ್ತುಪ್ಪ ಅಂಬಿಗೇರ್, ಪ್ರಭಾಕರ್ ಗುರುಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು.