ನ. 20 ರಂದು ತಪಾಸಣಾ ಶಿಬಿರ

ಹುಬ್ಬಳ್ಳಿ,ನ17: ಲಾಯನ್ಸ್ ಕ್ಲಬ್ ಹುಬ್ಬಳ್ಳಿ, ಶ್ರೀ ಗುಜರಾತ್ ಸಮಾಜ, ಹುಬ್ಬಳ್ಳಿ, ಧಾರವಾಡ ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ, ಅಗ್ರವಾಲ್ ಸಮಾಜ, ಹುಬ್ಬಳ್ಳಿ ಹಾಗೂ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ವತಿಯಿಂದ ಮಧುಮೇಹ ಸಂವಾದ ಮತ್ತು ಡಾಯಬೆಟಿಕ್ ರೆಟಿನೋಪಥಿ ತಪಾಸಣಾ ಶಿಬಿರವನ್ನು ನ. 20 ರಂದು ಬೆಳಿಗ್ಗೆ 10 ಕ್ಕೆ ಇಲ್ಲಿನ ದೇಶಪಾಂಡೆ ನಗರದ ಗುಜರಾತ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನೇತ್ರ ತಜ್ಞರಾದ ಡಾ.ಆರ್.ಕೃಷ್ಣ ಪ್ರಸಾದ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಮೇಹ ಅಥವಾ ಸಕ್ಕರೆ ಕಾಯಿಲೆಯನ್ನು ಎಲ್ಲಾ ಕಾಯಿಲೆಗಳ ರಾಜ ಎಂದೇ ಕರೆಯಬಹುದು. ದೇಹದ ಎಲ್ಲಾ ಭಾಗಗಳಲ್ಲಿ ತೊಂದರೆಯನ್ನು ಉಂಟುಮಾಡಬಹುದಾದ ಸಾಮರ್ಥ್ಯವನ್ನು ಸಕ್ಕರೆ ಕಾಯಿದೆ ಪಡೆದಿದೆ. ಮುಖ್ಯವಾಗಿ ಕಾಲು, ಮೂತ್ರಪಿಂಡ, ಹೃದಯ ಹಾಗೂ ಕಣ್ಣುಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಸಕ್ಕರೆ ಕಾಯಿಕೆ ಒಮ್ಮೆ ಬಂದರೆ ಜೀವನ ಪರ್ಯಂತ ಮನುಷ್ಯನ ಜೊತೆಗೆ ಇರಲಿದೆ. ಹೀಗಾಗಿ ಈ ಕಾಯಿಲೆಗೆ ತಿಳುವಳಿಕೆ ಹಾಗೂ ಮಾಹಿತಿಯೇ ಮದ್ದಾಗಿದೆ. ಈ ದೃಷ್ಟಿಯಿಂದ ಮಧುಮೇಹಕ್ಕೆ ಪಥ್ಯ, ವ್ಯಾಯಾಮ ಹಾಗೂ ಔಷಧೋಪಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮಧುಮೇಹ ಸಂವಾದ ಆಯೋಜಿಸಲಾಗಿದೆ ಎಂದರು.
ಈ ಸಂವಾದದಲ್ಲಿ ಮಧುಮೇಹ ತಜ್ಞರಾದ ಡಾ.ಹರೀಶ ಜೋಶಿ, ಡಾ.ರಾಜೀವ್ ಜೋಶಿ, ಡಾ.ವಿನಯ ದೀಪಾಲಿ, ಡಾ.ಸಚಿನ್ ಹೊಸಕಟ್ಟಿ, ಡಾ.ಅವಿನಾಶ್ ಪಾಟೀಲ್, ಡಾ.ಸುನಿಲ್ ಕರಿ, ನೇತ್ರ ತಜ್ಞರಾದ ಡಾ.ಎ.ಎಸ್.ಗುರುಪ್ರಸಾದ್, ಡಾ.ಕೆ.ವಿ.ಸತ್ಯಮೂರ್ತಿ, ಡಾ.ಶ್ರೀನಿವಾಸ ಜೋಶಿ, ಡಾ.ಆರ್.ಕೃಷ್ಣಪ್ರಸಾದ್ ಭಾಗವಹಿಸಲಿದ್ದಾರೆ. ಮಧುಮೇಹಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ತಜ್ಞರು ಉತ್ತರಿಸಲಿದ್ದಾರೆ. ನಂತರ ಮಧುಮೇಹಿಗಳಲ್ಲಿ ಅಂಧತ್ವ ಉಂಟುಮಾಡಬಹುದಾದ ಡಯಾಬೆಟಿಕ್ ರೆಟಿನೋಪಥಿಯ ತಪಾಸಣೆ ಕೂಡಾ ನಡೆಯಲಿದೆ. ಜೊತೆಗೆ ರಕ್ತ ತಪಾಸಣೆ, ಮಧುಮೇಹಿಗಳಿಗೆ ವಿಶೇಷ ಮಳಿಗೆಗಳು ಹಾಗೂ ಭೋಜನ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಮಹಾಜನ್, ಉದಯ ಬಾಟಕರ್, ಪ್ರಭು ಉಳ್ಳಾಗಡ್ಡಿಮಠ, ಭಾಸ್ಕರ ಸೇರಿದಂತೆ ಮುಂತಾದವರು ಇದ್ದರು.