ನ.2 ರಂದು ಎರಡು ಕೃತಿಗಳ ಬಿಡುಗಡೆ

ಮೈಸೂರು, ಅ.31: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೃಷಿ ವಿಜ್ಞಾನ ವೇದಿಕೆ ಮೈಸೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ನ.2ರಂದು ಸಂಜೆ 4ಗಂಟೆಗೆ ಮೈಸೂರು ಮಾನಸ ಗಂಗೋತ್ರಿಯಲ್ಲಿರುವ ವಿಜ್ಞಾನ ಭವನದ ಸಭಾಂಗಣದಲ್ಲಿ ಮೈಸೂರಿನ ಖ್ಯಾತ ಕೃಷಿ ವಿಜ್ಞಾನಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ವಸಂತಕುಮಾರ್ ತಿಮಕಾಪುರ ಅವರು ರಚಿಸಿರುವ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಕೃಷಿ ಲೋಕದೊಳಗೆ’’ ಎಂಬ ಕನ್ನಡ ಕೃತಿ ಹಾಗೂಪ್ಲ್ಯಾಂಟ್ ಡಾಕ್ಟರ್’’ ಎಂಬ ಇಂಗ್ಲಿಷ್ ಕೃತಿಗಳ ಲೋಕಾರ್ಪಣಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ,ಡಿ.ರಾಜಣ್ಣ ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಸಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುತ್ತೂರು ಶಿವರಾತ್ರೀ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಮಾಜಿ ಶಾಸಕ ವಾಸು ಅವರು ಉದ್ಘಾಟಿಸಲಿದ್ದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪೆÇ್ರ.ಕೆ.ಎಸ್.ರಂಗಪ್ಪ ಅವರು ಕೃಷಿ ಲೋಕದೊಳಗೆ ಕೃತಿಯನ್ನು ಹಾಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಎಸ್.ರಾಜೇಂದ್ರ ಪ್ರಸಾದ್ ಅವರು ಪ್ಲ್ಯಾಂಟ್ ಡಾಕ್ಟರ್ ಇಂಗ್ಲಿಷ್ ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.
ಹೈದ್ರಾಬಾದ್ ವಿವಿಯ ವಿಶ್ರಾಂತ ಉಪಮಹಾನಿರ್ದೇಶಕರಾದ ಡಾ.ಸಿ.ಎಲ್.ಲಕ್ಷ್ಮಿಪತಿ ಗೌಡ ಅವರು ಪ್ಲ್ಯಾಂಟ್ ಡಾಕ್ಟರ್ ಇಂಗ್ಲಿಷ್ ಕೃತಿಯ ಕುರಿತು ಖ್ಯಾತ ಅಂಕಣಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಆದ ಡಾ.ಗುಬ್ಬಿಗೂಡು ರಮೇಶ್ ಕೃಷಿಲೋಕದೊಳಗೆ ಕೃತಿ ಕುರಿತು ಮಾತನಾಡಲಿದ್ದಾರೆ ಎಂದರು.
ಗುಲ್ಬರ್ಗ ವಿವಿಯ ವಿಶ್ರಾಂತ ಕುಲಪತಿಗಳಾದ ಪೆÇ್ರ. ಎಸ್.ಆರ್.ನಿರಂಜನ ಮತ್ತು ಮೈಸೂರು ವಿವಿಯ ಕುಲಸಚಿವರಾದ ಪೆÇ್ರ.ಆರ್.ಶಿವಪ್ಪ ಮತ್ತು ಖ್ಯಾತ ಕೃಷಿ ವಿಜ್ಞಾನಿಗಳಾದ ಡಾ.ಟಿ.ಎಂ.ಮಂಜುನಾಥ ಅವರು ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಎರಡೂ ಕೃತಿಗಳ ಲೇಖಕರಾದ ಡಾ.ವಸಂತಕುಮಾರ್ ತಿಮಕಾಪುರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ವಿಜ್ಞಾನವೇದಿಕೆಯ ಅಧ್ಯಕ್ಷ ಡಾ.ವಸಂತಕುಮಾರ್ ತಿಮಕಾಪುರ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ಕಸಾಪ ಕೋಶಾಧ್ಯಕ್ಷ ಡಾ.ರಾಜಶೇಖರ್ ಕದಂಬ, ಕೃಷಿ ಮಾರ್ಕೆಟಿಂಗ್ ತಜ್ಞರಾದ ಡಾ.ಚೈತ್ರ ಭರತ್ ಉಪಸ್ಥಿತರಿದ್ದರು.